ಗೋರಕ್ಷಕರು ಎನ್ನುವ 'ರಾಕ್ಷಸರು' ಲಾರಿಯಲಿದ್ದ ಗೋವುಗಳಿಗೇ ಬೆಂಕಿಯಿಟ್ಟರು

Posted By:
Subscribe to Oneindia Kannada

ಜೈಪುರ, ಜೂ 13: ಪರವಾನಿಗೆ ಪಡೆದು ರಾಜಸ್ಥಾನದಿಂದ ತಮಿಳುನಾಡಿಗೆ ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಗೋರಕ್ಷಕರು ಸಜೀವವಾಗಿ ಸುಟ್ಟು ಹಾಕಿದ ಘಟನೆ, ನಗರದ ಹೊರವಲದ ಬರ್ಮರ್ ಎನ್ನುವಲ್ಲಿ ಭಾನುವಾರ (ಜೂ 11) ತಡರಾತ್ರಿ ನಡೆದಿದೆ.

ಗೋ ಹತ್ಯೆ ನಿಷೇಧ, ಜೂ15ರಂದು ಸುಪ್ರೀಂ ತೀರ್ಪು

ಕಂಠಪೂರ್ತಿ ಮದ್ಯಪಾನ ಮಾಡಿದ್ದ ಸುಮಾರು ಐವತ್ತು ಗೋರಕ್ಷಕರು ಎನ್ನುವ ದುರುಳರು ಈ ಕೃತ್ಯ ನಡೆಸಿದ್ದಾರೆ. ಗೋವುಗಳ ಜೊತೆಗಿದ್ದ ಅಧಿಕಾರಿಗಳು ವಿವರಣೆ ನೀಡಿದರೂ, ಗೋರಕ್ಷಕರು ಇಂತಹ ಪೈಶಾಚಿಕ ಕೃತ್ಯ ನಡೆಸಿದ್ದಾರೆ.

Rajasthan Vigilantes Try To Burn Truck Of Cows Meant For Central Scheme

ಕೇಂದ್ರ ಕೃಷಿ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ, ರಾಜಸ್ಥಾನದ ಜೈಸಲ್ಮೇರ್ ನಿಂದ ತಮಿಳುನಾಡಿನ ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಪರವಾನಿಗೆ ಪಡೆದು ಟ್ರಕ್ ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದರು.

'ದೇಶೀ ಗೋ ತಳಿ ರಕ್ಷಣೆ' ಕುರಿತ ಕಾರ್ಯಕ್ರಮಕ್ಕಾಗಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು 80 ಗೋವುಗಳನ್ನು ಖರೀದಿಸಿ, ಐದು ಟ್ರಕ್ ಗಳಲ್ಲಿ ಗೋವುಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದರು.

ಗೋಕಳ್ಳ ಸಾಗಾಣಿಕೆ ಮಾಡುತ್ತಿದ್ದೀರಾ ಎಂದು ಏಕಾಏಕಿ ದಾಳಿ ಮಾಡಿದ ದುರುಳರು, ಅಧಿಕಾರಿಗಳ ವಿವರಣೆ ನೀಡುತ್ತಿದ್ದರೂ, ಐದು ಟ್ರಕ್ ಗಳ ಪೈಕಿ ಒಂದಕ್ಕೆ ಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ, ಹತ್ತು ಗೋವುಗಳು ಮತ್ತು ಮೂರು ಕರುಗಳು ಸಜೀವ ದಹನಗೊಂಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The five trucks carrying 80 head of cattle, which cow vigilantes had stopped just outside Barmer, Rajasthan on Sunday night (Jun 11). Cow vigilantes burnt one of the trucks, at least 10 cows and 3 calves died.
Please Wait while comments are loading...