ವಿದ್ಯಾರ್ಥಿನಿ ಮದುವೆಯಾಗಲು ಗಂಡಾಗಿ ಪರಿವರ್ತನೆಯಾದ ಶಿಕ್ಷಕಿ!

ಜೈಪುರ, ನ. 08: ರಾಜಸ್ಥಾನದ ಶಾಲಾ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಮೇಲೆ ತಮ್ಮ ಲಿಂಗವನ್ನು ಪರಿವರ್ತನೆ ಮಾಡಿಕೊಂಡು ಮದುವೆಯಾಗಿದ್ದಾರೆ.

ಭರತ್‌ಪುರದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಮೀರಾ, ಕಲ್ಪನಾ ಫೌಜ್‌ದಾರ್‌ರನ್ನು ಪ್ರೀತಿಸುತ್ತಿದ್ದರು. ಆಕೆಯನ್ನು ಮದುವೆಯಾಗಲು ಲಿಂಗ ಪರಿವರ್ತನೆಯ ಸರ್ಜರಿ ಮಾಡಿಸಿಕೊಂಡಿದ್ದಾರೆ.

"ಪ್ರೀತಿಯಲ್ಲಿ ಎಲ್ಲವೂ ನ್ಯಾಯವಾಗಿದೆ. ಅದಕ್ಕಾಗಿಯೇ ನಾನು ನನ್ನ ಲಿಂಗವನ್ನು ಪರಿವರ್ತಿಸಿಕೊಂಡಿದ್ದೇನೆ" ಎಂದು ಈಗ ಆರವ್ ಕುಂತಲ್ ಆಗಿರುವ ಮೀರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Rajasthan: School Teacher Changes Gender To Marry Her Student

ಶಾಲೆಯಲ್ಲಿ ದೈಹಿಕ ಶಿಕ್ಷಣ ತರಗತಿಗಳ ಸಮಯದಲ್ಲಿ ಮೀರಾ, ಕಲ್ಪನಾ ಅವರನ್ನು ಭೇಟಿಯಾಗಿದ್ದರು. ಕಲ್ಪನಾ ರಾಜ್ಯ ಮಟ್ಟದಲ್ಲಿ ಕಬಡ್ಡಿ ಆಡುವ ಆಟಗಾರ್ತಿಯಾಗಿದ್ದು, ಜನವರಿಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗಾಗಿ ದುಬೈಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಆರವ್ ಕುಂತಲ್ ಆಗಿ ಬದಲಾಗಿರುವ ಮೀರಾ ಅವರು ಶಾಲೆಯ ಆಟದ ಮೈದಾನದಲ್ಲಿ ಕಲ್ಪನಾ ಅವರ ಜೊತೆಗಿನ ಒಡನಾಟದಲ್ಲಿ ಪ್ರೀತಿ ಮೂಡಿತ್ತು ಎಂದಿದ್ದಾರೆ.

"ನಾನು ಹುಡುಗಿಯಾಗಿ ಜನಿಸಿದೆ. ಆದರೆ ನಾನು ಯಾವಾಗಲೂ ಹುಡುಗ ಎಂದು ಭಾವಿಸಿದ್ದೆ. ನನ್ನ ಲಿಂಗವನ್ನು ಪರಿವರ್ತನೆ ಮಾಡಿಕೊಳ್ಳಲು ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸಿದ್ದೆ. ಡಿಸೆಂಬರ್ 2019 ರಲ್ಲಿ ನಾನು ಮೊದಲ ಬಾರಿ ಶಸ್ತ್ರಚಿಕಿತ್ಸೆ ಮಾಡಿದ್ದೇನೆ" ಎಂದು ಹೇಳಿದ್ದಾರೆ.

Rajasthan: School Teacher Changes Gender To Marry Her Student

ವಧು ಕಲ್ಪನಾ ಅವರು ಆರವ್ ಅವರನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದಾಗಿಯೂ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೂ ಅವರನ್ನೇ ಮದುವೆಯಾಗುತ್ತಿದ್ದೆ ಎಂದು ಹೇಳಿದ್ದಾರೆ.

"ನಾನು ಅವರನ್ನು ಮೊದಲಿನಿಂದಲೂ ಪ್ರೀತಿಸುತ್ತಿದ್ದೆ, ಅವರು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಿದ್ದರೂ, ನಾನು ಅವರನ್ನು ಮದುವೆಯಾಗುತ್ತಿದ್ದೆ. ಶಸ್ತ್ರಚಿಕಿತ್ಸೆ ಮಾಡಿಸುವಾಗ ನಾನು ಅವರೊಂದಿಗೆ ಹೋಗಿದ್ದೆ" ಎಂದು ಕಲ್ಪನಾ ತಿಳಿಸಿದ್ದಾರೆ.

ಈ ಜೋಡಿಯ ವಿವಾಹವು ಅಸಾಂಪ್ರದಾಯಿಕ ಮತ್ತು ಭಾರತದಲ್ಲಿ ಇನ್ನೂ ಅಪರೂಪವಾಗಿದ್ದರೂ, ಇಬ್ಬರ ಕುಟುಂಬದವರು ಈ ಮದುವೆಯನ್ನು ಒಪ್ಪಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+