1.25 lakh PMKSK: ದೇಶದ ರೈತರ ಹಗಲಿಗೆ ಹೆಗಲು ಕೊಟ್ಟ ಬಿಜೆಪಿ ಸರ್ಕಾರ: ಪಿಎಂ ಮೋದಿ

ರಾಜಸ್ತಾನ, ಜುಲೈ 27: ಕೇಂದ್ರ ಸರ್ಕಾರ ಒಂಬತ್ತು ವರ್ಷಗಳಿಂದ ರೈತರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ರೈತರಿಗೆ ಬೀಜ ಪೂರೈಕೆಯಿಂದ ಹಿಡಿದು ಮಾರುಕಟ್ಟೆ ವರೆಗೆ ಹೊಸ ವ್ಯವಸ್ಥೆ ಮಾಡುವ ಮೂಲಕ ದೇಶದ ರೈತರ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಜಸ್ತಾನದ ಸಿಕರ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು (PMKSK) ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

Rajasthan: PM Modi Inaugurates 1,25,000 PM Kisan Samriddhi Kendra For Indias Farmers

ದೇಶದಲ್ಲಿ ರೈತರ ಶಕ್ತಿಯಿಂದ ಮತ್ತು ರೈತರ ಶ್ರಮವು ಮಣ್ಣಿನಿಂದ ಚಿನ್ನವನ್ನು ಹೊರ ತೆಗೆಯುತ್ತಾರೆ. ಅದಕ್ಕಾಗಿಯೇ ನಮ್ಮ ಸರ್ಕಾರವು ದೇಶದ ರೈತರೊಂದಿಗೆ ಇದೆ. ಸಿಕರ್‌ನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಸಾವಿರಾರು ರೈತರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದು, ಅವರಿಗೆಲ್ಲ ನನ್ನ ನಮನಗಳು ಎಂದರು.

ಸ್ವಾತಂತ್ರ್ಯ ಬಂದು ದಶಕಗಳ ನಂತರ ಬಿಜೆಪಿಯಂತಹ ಸರ್ಕಾರ ಅಧಿಕಾರಕ್ಕೆ ಬಂದಿದೆ. ರೈತರ ನೋವು, ನಲಿವುಗಳನ್ನು ಅರಿತು, ಅವರ ಕಳಕಳಿಯನ್ನು ಅರ್ಥ ಮಾಡಿಕೊಂಡ ಸರ್ಕಾರ ನಮ್ಮ ಬಿಜೆಪಿ ಸರ್ಕಾರ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇಂದು ಸುಮಾರು 18,000 ಕೋಟಿ ರೂ.ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

Rajasthan: PM Modi Inaugurates 1,25,000 PM Kisan Samriddhi Kendra For Indias Farmers

1,25,000 ಪಿಎಂ ಕಿಸಾನ್ ಸಮೃದ್ಧಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜೊತೆಗೆ ದೇಶದಲ್ಲಿ 1,25,000 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು (PMKSK) ಕೇಂದ್ರಗಳು ಆರಂಭವಾಗಿದೆ. ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಪಿಎಂಕೆಎಸ್‌ವೈ ಕೇಂದ್ರಗಳು ರೈತರಿಗೆ ಪ್ರಯೋಜನ ನೀಡಲಿವೆ.

ರೈತರಿಗೆ ಡಿಜಿಟಲ್ ಕಾಮರ್ಸ್‌ಗಾಗಿ ಓಪನ್ ನೆಟ್‌ವರ್ಕ್ (ONDC) ಆರಂಭಿಸಲಾಗುತ್ತದೆ. ರಾಜಸ್ಥಾನದ ವಿವಿಧ ಪ್ರದೇಶಗಳು ವೈದ್ಯಕೀಯ ಕಾಲೇಜುಗಳ ಜೊತೆಗೆ ಏಕಲವ್ಯ ಮಾದರಿಯ ಶಾಲೆಗಳು ಸಹ ಇಲ್ಲಿ ಆರಂಭವಾಗಿವೆ ಎಂದು ಅವರು ವಿವರಿಸಿದರು.

ರಾಜಸ್ತಾನದ ಸಿಕರ್ ಜಿಲ್ಲೆಯನ್ನು ರೈತರ ಭದ್ರಕೋಟೆ ಎಂದು ಬಣ್ಣಿಸಿರುವ ಪ್ರಧಾನಿ, ಕಠಿಣ ಪರಿಶ್ರಮದಿಂದ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಈ ಭಾಗದ ರೈತರು ಸಾಬೀತು ಮಾಡಿದ್ದಾರೆ. ನೀರಿನ ಕೊರತೆ ಮಧ್ಯ ರೈತರು ಈ ಮಣ್ಣಿನಿಂದ ಹೆಚ್ಚುವರಿ ಆಹಾರವನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ಪ್ರದರ್ಶಿಸಬೇಕು ಎಂದು ಅವರು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+