Rajasthan elections: ಕರ್ನಾಟಕದ ಯಶಸ್ಸಿನ ಬೆನ್ನಲ್ಲೇ ರಾಜಸ್ಥಾನದಲ್ಲೂ ಉಚಿತ ವಿದ್ಯುತ್ ಘೋಷಿಸಿದ ಕಾಂಗ್ರೆಸ್!
ಜೈಪುರ, ಜೂನ್. 01: ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಭಾರೀ ಯಶಸ್ಸು ಕಂಡಿದ್ದ ಕಾಂಗ್ರೆಸ್ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿಯೂ ಈ ಗ್ಯಾರಂಟಿಗಳನ್ನು ಮುಂದುವರೆಸಲು ಯೋಜಿಸಿದೆ. ಸದ್ಯ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜನರಿಗೆ ಉಚಿತ ವಿದ್ಯುತ್ ಭರವಸೆಯನ್ನು ನೀಡಿದ್ದಾರೆ.
100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು ಮುಂದಿನ 100 ಕ್ಕೆ ನಿಗದಿತ ದರವನ್ನು ಅಶೋಕ್ ಗೆಹ್ಲೋಟ್ ಸರ್ಕಾರ ಬುಧವಾರ ಸಂಜೆ ಪ್ರಕಟಿಸಿದೆ. ಈ ನಿರ್ಧಾರವು ಸಾರ್ವಜನಿಕ ಪ್ರತಿಕ್ರಿಯೆಯನ್ನು ಆಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ''ಹಣದುಬ್ಬರ ಪರಿಹಾರಗಳ ಬಗ್ಗೆ ಸಾರ್ವಜನಿಕರೊಂದಿಗೆ ಮಾತನಾಡಿದ ನಂತರ ವಿದ್ಯುತ್ ಬಿಲ್‌ಗಳಲ್ಲಿ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು" ಎಂದು ಹೇಳಿದ್ದಾರೆ.

"ಮೇ ತಿಂಗಳಲ್ಲಿ ವಿದ್ಯುತ್ ಬಿಲ್‌ಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಅದರ ಆಧಾರದ ಮೇಲೆ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ 200 ಯೂನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ನೀಡಿದೆ. ಇದಕ್ಕೆ ಗೃಹಲಕ್ಷ್ಮೀ ಎಂದು ಕರೆಯಲಾಗಿದೆ. ಭರವಸೆಗೆಡ ಮೊದಲ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವರಾ ಅಜ್ಮೀರ್‌ನಿಂದ ಪಕ್ಷದ ಪ್ರಚಾರವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿ ರಾಜ್ಯ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ದಿನದಂದು ತಡರಾತ್ರಿಯಲ್ಲಿ ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ. ಅಶೋಕ್ ಗೆಹ್ಲೋಟ್ ಅವರು ಅಡುಗೆ ಅನಿಲದ ಮೇಲೆ ಭಾರಿ ಸಬ್ಸಿಡಿಯನ್ನು ನೀಡುವುದಾಗಿ ಭರವಸೆ ನೀಡಿದ್ದ ನಂತರ ಇದು ಕಾಂಗ್ರೆಸ್‌ನ ದೊಡ್ಡ ಘೋಷಣೆಯಾಗಿದೆ.

ರಾಜಸ್ಥಾನವು ಪ್ರತಿ ವರ್ಷಕ್ಕೆ 12 ಸಿಲಿಂಡರ್‌ಗಳನ್ನು 500 ರೂಪಾಯಿಯಂತೆ ಒದಗಿಸುವ ಘೋಷಣೆ ಮಾಡಿದೆ.ಇದು ಸಿಲಿಂಡರ್ ಬೆಲೆಗಳನ್ನು ಅರ್ಧಕ್ಕಿಂತ ಕಡೊಮೆ ಮಾಡಲಿದೆ. ಕಳೆದ ವರ್ಷ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ 25 ಲಕ್ಷದವರೆಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಮೆಗಾ ಆರೋಗ್ಯ ವಿಮಾ ಯೋಜನೆಯನ್ನು ಸಹ ಪ್ರಾರಂಭಿಸಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿಯನ್ನೂ 1,000 ರೂಪಾಯಿಗೆ ಹೆಚ್ಚಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ತಾನು ಬಳಸಿಕೊಂಡಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿಗೆ ಭಾರಿ ಚುನಾವಣಾ ಲಾಭಾಂಶವನ್ನು ನೀಡಿದ ಉಚಿತ ನೀರು ಮತ್ತು ವಿದ್ಯುತ್ ಭರವಸೆ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ನೀಡುವಲ್ಲಿ ಕೆಲಸ ಮಾಡಿದೆ.












Click it and Unblock the Notifications