ರಾಜಸ್ಥಾನದಲ್ಲಿ ಅತ್ಯಾಚಾರ, ಮುಂದೇನಾಯ್ತೆಂದರೆ..
ರಾಜಸ್ಥಾನ ಅ, 14 : ಬಲಾತ್ಕಾರ ಮಾಡಲು ಹೋದವ ತನ್ನ 'ಬಲ'ವನ್ನೇ ಕಳೆದುಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಅತ್ಯಾಚಾರ ಮಾಡಲು ಯತ್ನಿಸಿದವನ ಶಿಶ್ನವನ್ನೇ ಕತ್ತರಿಸಿ ಬಿಸಾಡಲಾಗಿದೆ.
ರಾಜಸ್ಥಾನದ ಗಂಗಾನಗರದಲ್ಲಿ ಇಂಥ ಪ್ರಕರಣವೊಂದು ನಡೆದಿದ್ದು ಅತ್ಯಾಚಾರಿಗಳಿಗೆ ಇದೊಂದು ಪಾಠ ಎಂದೇ ಹೇಳಲಾಗಿದೆ. ಬಲಾತ್ಕಾರ ಮಾಡಲು ಯತ್ನಿಸಿದವ ಜನರಿಂದ ಸರಿಯಾಗಿ ಧರ್ಮದೇಟು ತಿಂದಿದ್ದಾನೆ.[ಗೋವರ್ಧನಮೂರ್ತಿ ಮೇಲೆ ಅತ್ಯಾಚಾರ ಪ್ರಕರಣ]

ಸುರೇಶ್ ಕುಮಾರ್(46) ಎಂಬಾತ ಯುವತಿಯೊಬ್ಬಳ ಮೇಲೆ ಸಾರ್ವಜನಿಕವಾಗಿ ಅತ್ಯಾಚಾರಕ್ಕೆ ಯತ್ತಿಸುತ್ತಿದ್ದ. ಇದನ್ನು ನೋಡಿದ ಜನರು ಆತನನ್ನು ಹತ್ತಿರದ ಮಾಂಸದಂಗಡಿಯೊಂದಕ್ಕೆ ಕರೆದುಮೊಂಡು ಹೋಗಿ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಹತ್ತಿರದಲ್ಲಿದ್ದ ದೊಣ್ಣೆ ಮತ್ತಿತರ ವಸ್ತುಗಳನ್ನು ತೆಗೆದುಕೊಂಡ ಜನರು ಸುಮಾರು ಒಂದು ಗಂಟೆ ಕಾಲ ಥಳಿಸಿದ್ದಾರೆ. ನಂತರ ಹರಿತವಾದ ಆಯುಧವೊಂದನ್ನು ತೆಗೆದುಕೊಂಡು ಆತನ ಜನನಾಂಗಕ್ಕೆ ಕತ್ತರಿ ಹಾಕಿದ್ದಾರೆ.
ಡೈಲಿ ರೊಪೋರ್ಟ್ ವರದಿ ಹೇಳಿರುವಂತೆ ಕಾಮುಕ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರಿಬ್ಬರೂ ಆತನ ನೆರವಿಗೆ ಧಾವಿಸಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅತ್ಯಾಚಾರಿಯನ್ನು ವಶಕ್ಕೆ ಪಡೆದಿದ್ದಾರೆ.[ಸಾಮಾಜಿಕ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ]
ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಬೇಕಿರುವುದು ನಿಜ. ಆದರೆ ನಾಗರಿಕರೆ ಕಾನೂನು ಉಲ್ಲಂಘನೆ ಮಾಡುವುದು ಸರಿಯಲ್ಲ. ಅಪರಾಧಿಗಳಿಗೆ ಶಿಕ್ಷೆ ನೀಡಲು ಸಂವಿಧಾನಾತ್ಮಕ ವ್ಯವಸ್ಥೆಯಿದ್ದು ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಪೊಲೀಸರು ಹೇಳಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications