ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರಾಜಸ್ಥಾನದ ಕೋಚಿಂಗ್ ಸೆಂಟರ್‌ನ 3 ವಿದ್ಯಾರ್ಥಿಗಳ ಆತ್ಮಹತ್ಯೆ

|
Google Oneindia Kannada News

ಕೋಟಾ, ಡಿಸೆಂಬರ್ 12: ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಸತ್ಯಾಂಶ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು 16, 17 ಮತ್ತು 18 ವರ್ಷ ವಯಸ್ಸಿನವರಾಗಿದ್ದಾರೆ.

ಇನ್ನು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಾದ ಅಂಕುಶ್ ಮತ್ತು ಉಜ್ವಲ್ ಬಿಹಾರ ಮೂಲದವರಾಗಿದ್ದಾರೆ. ಈ ಇಬ್ಬರು ಸ್ನೇಹಿತರಾಗಿದ್ದು, ಪಕ್ಕದ ಕೊಠಡಿಗಳಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ವಾಸವಿದ್ದರು. ಒಬ್ಬರು ಎಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದರೆ, ಇನ್ನೊಬ್ಬರು ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆಗಳಿಗೆ ಓದುತ್ತಿದ್ದರು ಎಂದು ಗೊತ್ತಾಗಿದೆ.

ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!

ಮೂರನೇ ವಿದ್ಯಾರ್ಥಿ ಪ್ರಣವ್ ಮಧ್ಯಪ್ರದೇಶದಿಂದ ಕೋಟಾಕ್ಕೆ ಬಂದಿದ್ದರು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಯಾವುದೇ ಆತ್ಮಹತ್ಯೆ ಪತ್ರಗಳು ಇನ್ನೂ ಪತ್ತೆಯಾಗಿಲ್ಲ.

Rajasthan: 3 Coaching Students Allegedly Die By Suicide In Kota on Monday

ಕೋಚಿಂಗ್ ಸೆಂಟರ್‌ಗಳಿಗೆ ಹೆಸರುವಾಸಿಯಾದ ಕೋಟಾ:

ರಾಜಸ್ಥಾನದ ಕೋಟಾದಲ್ಲಿನ ಕೋಚಿಂಗ್ ಸೆಂಟರ್‌ಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಪೂರ್ವಸಿದ್ಧತಾ ತರಗತಿಗಳನ್ನು ಒದಗಿಸುವ ಕೋಚಿಂಗ್ ಸೆಂಟರ್‌ಗಳಿಗೆ ಹೆಸರುವಾಸಿಯಾಗಿದೆ. ಈಗ ಅದೇ ಕೋಟಾ ಸೆಂಟರ್ ಆತ್ಮಹತ್ಯೆ ಪ್ರಕರಣಗಳಿಂದ ಸುದ್ದಿ ಮಾಡುತ್ತಿದೆ.

ಕೊನೆಯ ಎರಡು ವರ್ಷಗಳ ಶಾಲಾ ಶಿಕ್ಷಣದ ಜೊತೆಗೆ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಅನೇಕರು ಸೇರಿದಂತೆ ವಿದ್ಯಾರ್ಥಿಗಳು ಹೆಚ್ಚಿನ ಒತ್ತಡಕ್ಕೆ ಕಾರಣವಾಗುವ ನಿಖರವಾದ ವೇಳಾಪಟ್ಟಿಗಳ ಬಗ್ಗೆ ಆಗಾಗ್ಗೆ ದೂರುತ್ತಾರೆ. ಈ ಹಿಂದೆ ಹೆಚ್ಚಿನ ಆತ್ಮಹತ್ಯೆ ಮತ್ತು ಸ್ವಯಂ-ಹಾನಿ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ಆತ್ಮಹತ್ಯೆ ಹಾಟ್‌ಲೈನ್ ಅನ್ನು ಸ್ಥಾಪಿಸಿದೆ. ಇಲ್ಲಿ ಹೆಚ್ಚಿನ ಒತ್ತಡವನ್ನು ಸಹಿಸದೇ ಬಳಲುತ್ತಿರುವ ವಿದ್ಯಾರ್ಥಿಗಳು ಸಮಾಲೋಚನೆಯನ್ನು ಪಡೆದುಕೊಳ್ಳಬಹುದು.

ಕೋಚಿಂಗ್ ಸೆಂಟರ್‌ನಲ್ಲಿ ಒತ್ತಡದ ಸ್ಪರ್ಧೆ:

ಕೋಚಿಂಗ್ ಹಬ್ ದೀರ್ಘ ತರಗತಿಯ ಅವಧಿ, ದೀರ್ಘ ಕಾರ್ಯಯೋಜನೆಗಳು ಮತ್ತು ಹಲವಾರು "ಬ್ಯಾಚ್‌ಗಳ" ನಡುವೆ ವಿದ್ಯಾರ್ಥಿಯನ್ನು ಮುಂಬಡ್ತಿ ಅಥವಾ ಹಿಂಬಡ್ತಿ ಎಂದು ನಿರ್ಧರಿಸುವ ಆಂತರಿಕ ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚು ಒತ್ತಡವನ್ನು ಸೃಷ್ಟಿಸುತ್ತವೆ. ಇಲ್ಲಿ ಉನ್ನತ ಬ್ಯಾಚ್‌ಗಳು ಹೆಚ್ಚು ಬೇಡಿಕೆಯಿರುವ ಶಿಕ್ಷಕರನ್ನು ಪಡೆಯುತ್ತವೆ.

ಇದೇ ರೀತಿ ಕಳೆದ 2016ರಲ್ಲಿ ಒಬ್ಬ ವಿದ್ಯಾರ್ಥಿಯು ಅತ್ಯಂತ ಅಪೇಕ್ಷಿತ ಐಐಟಿ-ಜೆಇಇ ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದರೂ ಸಾವಿಗೂ ಮೊದಲು ಎಲ್ಲಾ ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಕರೆ ನೀಡಿದ್ದರು.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

English summary
Rajasthan: 3 Coaching Students Allegedly Die By Suicide In Kota on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X