ಮಹಾರಾಷ್ಟ್ರ ನಾಟಕದ ಹಿಂದೆ ಶರದ್ ಪವಾರ್ ಕೈವಾಡ? ಶಾಕಿಂಗ್ ನ್ಯೂಸ್!
ಮುಂಬೈ: ಕ್ಷಿಪ್ರ ರಾಜಕೀಯ ಬೆಳವಣಿಗೆ ಬಳಿಕ ದೇಶದ ಗಮನ ಮಹಾರಾಷ್ಟ್ರ ಮೇಲೆಯೇ ನೆಟ್ಟಿದೆ. ತನ್ನ ಚಿಕ್ಕಪ್ಪನ ವಿರುದ್ಧವೇ ತಿರುಗಿಬಿದ್ದ ಅಜಿತ್ ಪವಾರ್ ಎನ್‌ಸಿಪಿ ಬಿಟ್ಟಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ಸರ್ಕಾರಕ್ಕೆ ಬೆಂಬಲ ಕೊಟ್ಟು ಅಜಿತ್ ಪವಾರ್ ಡಿಸಿಎಂ ಆಗಿರುವ ನಡುವೆ, ಈ ಎಲ್ಲಾ ಘಟನೆಗಳ ಹಿಂದೆ ಶರದ್ ಪವಾರ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಈ ಆರೋಪ ಮಾಡಿದ್ದು ಯಾರು? ಮುಂದೆ ಓದಿ.
ರಾಜಕೀಯ ಅಂದ್ರೆ ನಾಟಕ, ಇಂತಹ ನಾಟಕ ಇಲ್ಲದೆ ರಾಜಕೀಯ ನಡೆಯೋದಿಲ್ಲ ಎಂಬ ಆರೋಪ ಈ ಮೊದಲಿನಿಂದಲೂ ಇತ್ತು. ಆದರೆ ಈಗೀಗ ಆ ಆರೋಪಗಳು ಪ್ರೂವ್ ಆಗ್ತಾ ಇವೆ. ಅದರಲ್ಲೂ ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿಂದೆ ಶರದ್ ಪವಾರ್ ಕೈವಾಡ ಇದೆ, ಎಲ್ಲಾ ಬೆಳವಣಿಗೆ ದೊಡ್ಡ ನಾಟಕ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಬಾಂಬ್ ಸಿಡಿಸಿದ್ದಾರೆ. ನಮ್ಮ ರಾಜ್ಯದಲ್ಲೀಗ ನಡೆಯುತ್ತಿರುವುದು ಅಸಹ್ಯಕರ. ಇದು ರಾಜ್ಯದ ಮತದಾರರಿಗೆ ಮಾಡಿದ ಅವಮಾನವೇ ಹೊರತು ಬೇರೇನೂ ಅಲ್ಲ ಎಂದು ರಾಜ್ ಠಾಕ್ರೆ ಗುಡುಗಿದ್ದಾರೆ. ಇದರ ಜೊತೆ ಠಾಕ್ರೆ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

'ಅಸಹ್ಯ ಪ್ರಾರಂಭಿಸಿದ್ದು ಇದೇ ಪವಾರ್!'
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ರಾಜ್ ಠಾಕ್ರೆ, ಶರದ್ ಪವಾರ್ ಪಕ್ಷದ ಕೆಂಡ ಕಾರಿದ್ದಾರೆ. ಹಾಗೇ ಮತ್ತೊಂದು ಗಂಭೀರ ಆರೋಪ ಮಾಡಿದ ರಾಜ್ ಠಾಕ್ರೆ, 1978ರಲ್ಲಿ ಇಂಥ ಅಸಹ್ಯ ಪ್ರಾರಂಭಿಸಿದ್ದು ಇದೇ ಶರದ್ ಪವಾರ್. ಕಾಂಗ್ರೆಸ್‌ನ 38 ಶಾಸಕರ ಜೊತೆ ಪಕ್ಷ ಬಿಟ್ಟು ಜನತಾ ಪಕ್ಷದ ಜೊತೆ ಸೇರಿ ಸಿಎಂ ಆದರು. ಇದೀಗ ಅದನ್ನು ಕೊನೆಗೊಳಿಸಿದವರು ಕೂಡ ಅವರೇ ಎಂದಿದ್ದಾರೆ ಠಾಕ್ರೆ. ಈಗಾಗಲೇ ಈ ಬೆಳವಣಿಗೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡುವ ಮುನ್ಸೂಚನೆ ಸಿಗುತ್ತಿದೆ. ಮತ್ತೊಂದ್ಕಡೆ ಖುದ್ದು ರಾಜ್ ಠಾಕ್ರೆ ಹೊಸ ಬಾಂಬ್ ಸಿಡಿಸಿ, ಶರದ್ ಪವಾರ್ ಈ ಹಿಂದೆ ಏನು ಮಾಡಿದ್ದರು ಅನ್ನೋದನ್ನ ಬಿಡಿಸಿಟ್ಟಿದ್ದಾರೆ.
ವಿರೋಧ ಪಕ್ಷಗಳಲ್ಲಿ ಶುರುವಾಯ್ತು ನಡುಕ
ದೇಶದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 2ನೇ ಸ್ಥಾನ ಪಡೆದಿದೆ. 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶವನ್ನು ಬಿಟ್ಟರೆ, 48 ಲೋಕಸಭಾ ಸ್ಥಾನ ಹೊಂದಿರುವ ಮಹಾರಾಷ್ಟ್ರವೇ 2ನೇ ಸ್ಥಾನದಲ್ಲಿ ಇದೆ. ಹೀಗಾಗಿಯೇ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತ ಅತ್ಯಗತ್ಯ ಅನ್ನೋದು ಕಾಂಗ್ರೆಸ್ ಮತ್ತು ಬಿಜೆಪಿಯ ಒನ್‌ಲೈನ್ ಅಜೆಂಡಾ. ಮಹಾರಾಷ್ಟ್ರದಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯೇ ಆಗಲಿ ಒಬ್ಬರೇ ನಿಂತು ಹೋರಾಡುವುದು ಕಷ್ಟ ಎನ್ನಬಹುದು. ಹೀಗಾಗಿ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತಕ್ಕಾಗಿ ಬಿಜೆಪಿ ಮತ್ತು ವಿಪಕ್ಷಗಳ ಮಧ್ಯೆ ರಿಯಲ್ ಫೈಟಿಂಗ್ ಶುರುವಾಗಿತ್ತು. ಆದ್ರೆ ಈಗಿನ ಬೆಳವಣಿಗೆ ಕಾಂಗ್ರೆಸ್ ಮತ್ತು ವಿಪಕ್ಷ ನಾಯಕರಲ್ಲಿ ನಡುಕ ತರಿಸಿದೆ.
ಒಟ್ನಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಘಟನೆ.. ಇದು ಮಹಾರಾಷ್ಟ್ರ ರಾಜಕೀಯ ರಂಗದ ಸದ್ಯದ ಸ್ಥಿತಿ. ಮಹಾರಾಷ್ಟ್ರ ರಾಜಕೀಯ ಪ್ರತಿ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ದಿಢೀರ್ ಎನ್‌ಸಿಪಿ ಬಿಟ್ಟು ಶಿವಸೇನೆಯ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದಿರುವ ಬಂಡಾಯ ನಾಯಕ ಅಜಿತ್ ಪವಾರ್ ರೆಬೆಲ್ ಆಗಿದ್ದಾರೆ. ಆದರೆ ಇದರ ಹಿಂದೆ ಖುದ್ದು ಶರದ್ ಪವಾರ್ ಕೈವಾಡ ಇದೆ ಎನ್ನುತ್ತಿದ್ದಾರೆ ಎಂಎನ್‌ಎಸ್ ಮುಖ್ಯಸ್ಥ. ಠಾಕ್ರೆ ವಂಶದ ಕುಡಿ ಮಾಡಿರುವ ಆರೋಪಕ್ಕೆ ಶರದ್ ಪವಾರ್ ಇನ್ನೂ ಉತ್ತರ ನೀಡಿಲ್ಲ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.











Click it and Unblock the Notifications