ಇಂದು ಕೂಡ ದೆಹಲಿಯಲ್ಲಿ ಮಳೆ: ಬಿಹಾರದಲ್ಲಿ ಯೆಲ್ಲೋ ಅಲರ್ಟ್

ನವದೆಹಲಿ ಮೇ 31: ರಾಜಧಾನಿ ದೆಹಲಿಯಲ್ಲಿ ಮತ್ತೆ ವಾತಾವರಣ ಬದಲಾಗಿದೆ. ಸೋಮವಾರ ಸಂಜೆ ಅಪ್ಪಳಿಸಿದ ಚಂಡಮಾರುತಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ನಡುಗಿ ಹೋಗಿದೆ. ನಿನ್ನೆ ಬಿರುಗಾಳಿ ಹೊಡೆತಕ್ಕೆ ಜನರಲ್ಲಿ ಭೀತಿ ಹೆಚ್ಚಿದೆ. ಈ ವೇಳೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಜನ ಜೀವನ ಅಸ್ತವ್ಯಸ್ಥಗೊಂಡಿದ್ದು ಸಂಚಾರಕ್ಕೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ದೆಹಲಿಯಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ರಾಜಧಾನಿಯಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದೆ.

ದೆಹಲಿಯಲ್ಲಿ ಚಂಡಮಾರುತಕ್ಕೆ ಕಾರಣವೆಂದರೆ ವಾಯುವ್ಯ ರಾಜಸ್ಥಾನದ ಗಡಿಯಲ್ಲಿನ ಪಶ್ಚಿಮದಲ್ಲಿನ ವಾತಾವರಣ ಬದಲಾವಣೆ. ಇಲ್ಲಿನ ಮೋಡಗಳು ಇನ್ನೂ ಚಲಿಸುತ್ತಿವೆ. ಈ ಕಾರಣದಿಂದಾಗಿ ಬಿಹಾರ, ಯುಪಿ, ರಾಜಸ್ಥಾನ, ಹಿಮಾಚಲ ಮತ್ತು ಗುಜರಾತ್‌ನಲ್ಲಿ ಇಂದು ಭಾರೀ ಮಳೆಯಾಗಿದೆ. ಹೀಗಾಗಿ ಇಂದು ಬಿಹಾರದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಂದು ಬಿಹಾರದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಬಿಹಾರದಲ್ಲಿ ಯೆಲ್ಲೋ ಅಲರ್ಟ್ ಘೋಷಸಲಾಗಿದೆ.

Rain in Delhi today too: Yellow Alert in Bihar

ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ದೆಹಲಿ, ಕೇರಳ, ದಕ್ಷಿಣ ಕರ್ನಾಟಕ ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಅರುಣಾಚಲ ಪ್ರದೇಶ ಮತ್ತು ಪೂರ್ವ ಅಸ್ಸಾಂನಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

Rain in Delhi today too: Yellow Alert in Bihar

ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಕರಾವಳಿ ಆಂಧ್ರಪ್ರದೇಶ, ಒಡಿಶಾ, ವಿದರ್ಭ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮಳೆಯಾಗಲಿದ್ದು, ಜಾರ್ಖಂಡ್, ಒಡಿಶಾ, ಗಂಗಾ ಪಶ್ಚಿಮ ಬಂಗಾಳ, ಆಂತರಿಕ ಕರ್ನಾಟಕ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಮುಂದಿನ ಮೂರು ದಿನಗಳ ಕಾಲ ಮರಾಠವಾಡ ಮತ್ತು ಕೊಂಕಣದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ನಾಳೆಯಿಂದ ಮಳೆ ಪ್ರಕ್ರಿಯೆ ಆರಂಭವಾಗಲಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+