UPS- 8th Pay Commission: ಹೊಸ ಪಿಂಚಣಿ ಯೋಜನೆ ಸ್ವಾಗತಿಸಿದ ರೈಲ್ವೆ ನೌಕರರ ಒಕ್ಕೂಟದ ಬೇಡಿಕೆ ಏನು?

ನವದೆಹಲಿ, ಆಗಸ್ಟ್ 28: ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (UPS) ಜಾರಿಗೆ ಅನುಮೋದನೆ ನೀಡಲಾಗಿದೆ. ಇದರ ವಿರುದ್ಧ ಒಂದಷ್ಟು ಸಂಘಟನೆಗಳು ಆಕ್ಷೇಪ ಎತ್ತಿ ಪ್ರತಿಭಟಿಸುತ್ತಿರುವ ಮಧ್ಯೆ ಸರ್ಕಾರದ ನಿರ್ಧಾರವನ್ನು ರೈಲ್ವೆ ನೌಕರರ 'ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ರೈಲ್ವೇಮೆನ್ (NFIR) ಸ್ವಾಗತಿಸಿದೆ.

ಹೌದು, ಈ ಹೊಸ ಏಕೀಕೃತ ಪಿಂಚಣಿ ಯೋಜನೆಯನ್ನು ಸರ್ಕಾರ ಪರಿಚಯಿಸುವ ನಿರ್ಧಾರ ಕಳೆದ ಶನಿವಾರ ಪ್ರಕಟವಾಯಿತು. ಇದಕ್ಕು ಮೊದಲೇ ಪ್ರಧಾನಿ ನರೇಂದ್ರ ಮೋದಿಯವರು ರೈಲ್ವೆ ನೌಕರರ ಸಂಘಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತನಾಡಿದ್ದರು. ನಂತರ ಸಂಪುಟ ಯೋಜನೆಗೆ ಅನುಮೋದನೆ ನೀಡಿತು. ಇದೀಗ ಕೆಲವು ರೈಲ್ವೆ ಸಂಘಗಳ ಆಕ್ಷೇಪ, ಪ್ರತಿಭಟನೆ ಹಾಗೂ ಹಳೆ ಪಿಂಚಣಿ ಯೋಜನೆ (OPS) ಯೋಜನೆ ಜಾರಿಗೆ ಒತ್ತಾಯಿಸಿವೆ. ಈ ಮಧ್ಯೆ NFIR ಸರ್ಕಾರದ ಯೋಜನೆ ಸ್ವಾಗತಿಸಿರುವುದು ತಿಳಿಸಿದೆ.

Railway Employees Union Demand for 8th Pay Commission after After Unified Pension Scheme Approvel

ವಿವಿಧ ರೈಲ್ವೇ ನೌಕರರ ಸಂಘಗಳು ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಮತ್ತು ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಮರುಸ್ಥಾಪನೆಯ ಬೇಡಿಕೆಯ ವಿರುದ್ಧ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿವೆ. ಯುಪಿಎಸ್ ಪರಿಚಯಿಸುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಪ್ರಕಟಿಸುವ ಮುನ್ನ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಿಬ್ಬಂದಿ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.

ಪಿಂಚಣಿ ಅರ್ಹತೆಗೆ ಸೇವಾ ವಯಸ್ಸು ಇಳಿಕೆಗೆ ಮನವಿ

ಏಕೀಕೃತ ಪಿಂಚಣಿ ಯೋಜನೆಯಲ್ಲಿ ಹೆಚ್ಚುವರಿ ನಿಬಂಧನೆಗಳು, ಸುಧಾರಣೆಗಳನ್ನು ಪರಿಗಣಿಸಲು ಸರ್ಕಾರವನ್ನು NFIR ಸದಸ್ಯರು ಒತ್ತಾಯಿಸಿದರು. ಸದ್ಯ ಈ ಪಿಂಚಣಿ ಯೋಜನೆಯಡಿ ಪಿಂಚಣಿಗೆ ಅರ್ಹತೆ ಪಡೆಯಲು ಇರುವ 25 ವರ್ಷಗಳ ಅರ್ಹತಾ ಸೇವೆಯನ್ನು 20 ವರ್ಷಗಳಿಗೆ ಕಡಿಮೆಗೊಳಿಸಲು ಒತ್ತಾಯಿಸಲಾಗಿದೆ. ಇದರಿಂದ 35 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರು ನೌಕರಿಗೆ ವಿಳಂಬವಾಗಿ ನೇಮಕವಾದವರಿಗೂ ಭವಿಷ್ಯದಲ್ಲಿ ಇದೇ ಯೋಜನೆಯಡಿ ಖಚಿತ ಪಿಂಚಣಿಗೆ ಒಳಗಾಗುತ್ತಾರೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಪಿಂಚಣಿ ಪೂರ್ಣ ಮೊತ್ತ ಪಾವತಿಗಾಗಿ ಸೇವೆಯಲ್ಲಿ ಆರು ತಿಂಗಳು ಪೂರ್ಣಗೊಂಡವರ ಮಾಸಿಕ ವೇತನದ 1/10 ನೇ ಭಾಗ ಪರಿಶೀಲಿಸಿ ಮಾರ್ಪಡಿಸಲಾಗುತ್ತದೆ. ಇನ್ನೂ ಮಾಸಿಕ ವೇತನದ 1/4 ನೇ ಭಾಗವು ನಿವೃತ್ತಿ ನಂತರ ಆ ಉದ್ಯೋಗಿ ವಾಸ್ತವವನ್ನು ಪರಿಗಣಿಸಿ ಸೂಕ್ತ ಪಿಂಚಣಿ ಮೊತ್ತ ಪಡೆಯಲಿದ್ದಾನೆ ಎಂದು ನೌಕರರ ಯೂನಿಯನ್ ತಿಳಿಸಿದೆ.

Railway Employees Union Demand for 8th Pay Commission after After Unified Pension Scheme Approvel

8ನೇ ವೇತನ ಆಯೋಗ ಜಾರಿಗೆ ರೈಲ್ವೆ ನೌಕರರ ಮನವಿ

ಕಳೆದ ವರ್ಷ 2023 ರ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ 8ನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂದು ಒಂದಷ್ಟು ಶಿಫಾರಸುಗಳನ್ನು ಇದೇ 'ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ರೈಲ್ವೇಮೆನ್ (NFIR) ಮನವಿ ಪತ್ರದ ಮೂಲಕ ಬೇಡಿಕ ಇಟ್ಟಿತ್ತು. ಸದ್ಯ ಏಳನೇ ವೇತನ ಆಯೋಗ ಜಾರಿಯಾಗಿ ಎಂಟೂವರೆ ವರ್ಷ ಪೂರ್ಣಗೊಂಡಿವೆ. ಇದರಡಿ ಕೊನೆಯ ವೇತನ ಪರಿಷ್ಕರಣೆಯನ್ನು ಎನ್‌ಎಫ್‌ಐಆರ್ ಡಾ ಅಕ್ರಾಯ್ಡ್ ಫಾರ್ಮುಲಾ ಆಧಾರದ ಹೆಚ್ಚಿಸಲು ಕೋರಿದೆ.

ಎಂಟನೇ ವೇತನ ಆಯೋಗ ಜಾರಿಯಾದಾರೆ, ಅದರಿಂದಾಗುವ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಎಷ್ಟು ಹೆಚ್ಚಳವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರಿ ನೌಕರರು ಇದ್ದಾರೆ. ಏಳನೇ ವೇತನ ಆಯೋಗದಲ್ಲಿ ಇದೇ ವರ್ಷ ಜನವರಿ ಡಿಎ, ಡಿಆರ್‌ ಹೆಚ್ಚಳ ಪಡೆದಿದ್ದರು. ಇದೀಗ ಎರಡನೇ ಡಿಎ, ಡಿಆರ್‌ ಏರಿಕೆಗೆ ನಿರೀಕ್ಷೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+