ಭಾರತೀಯ ರೈಲ್ವೆ ಸುಧಾರಣೆ: 1,364 ಕೋಟಿ ರೂ.ವೆಚ್ಚದ 'ಕವಚ' ಮತ್ತು ಸಿಗ್ನಲಿಂಗ್ ಯೋಜನೆಗಳಿಗೆ ಅನುಮೋದನೆ

ಭಾರತೀಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಮತ್ತಷ್ಟು ಸುರಕ್ಷತೆ, ಸಿಗ್ನಲಿಂಗ್ ಮತ್ತು ಸಂವಹನ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದೆ. ಈ ಸಂಬಂಧ ಬರೋಬ್ಬರಿ 1,364.45 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಸೋಮವಾರ ಅನುಮೋದನೆ ನೀಡಲಾಗಿದೆ. ಮಂಜೂರಾದ ಕಾಮಗಾರಿಗಳಲ್ಲಿ ಲೋಕೋಮೋಟಿವ್ ಗಳಲ್ಲಿ ಕವಚ್ ಒದಗಿಸುವುದು, ಆಪ್ಟಿಕಲ್ ಫೈಬರ್ ಕೇಬಲ್ ನೆಟ್ವರ್ಕ್ ವಿಸ್ತರಣೆ ಮತ್ತು ವಿವಿಧ ರೈಲ್ವೆ ವಲಯಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗಳೊಂದಿಗೆ ಪ್ಯಾನಲ್ ಇಂಟರ್ಲಾಕಿಂಗ್ ಅನ್ನು ಬದಲಾಯಿಸುವ ಯೋಜನೆಗಳು ಸೇರಿವೆ. ಈ ಎಲ್ಲ ಸುಧಾರಣೆಗಳು ಉತ್ತರ ರೈಲ್ವೆ, ಉತ್ತರ ಮಧ್ಯೆ ರೈಲ್ವೆ ಹಾಗೂ ದಕ್ಷಿಣ ಮಧ್ಯೆ ರೈಲ್ವೆ ವ್ಯಾಪ್ತಿಯಲ್ಲಿ ಜಾರಿಯಾಗಲಿವೆ.

ರೈಲ್ವೆ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ರೈಲ್ವೆಯ ಈ ಒಟ್ಟು ಯೋಜನೆಗಳಲ್ಲಿ 400.86 ಕೋಟಿ ಮೌಲ್ಯದ ವಿಶ್ವಾಸಾರ್ಹ ಸಿಗ್ನಲಿಂಗ್ ವ್ಯವಸ್ಥೆ ಉತ್ತೇಜಿಸಲಾಗುತ್ತಿದೆ. ಉತ್ತರ ರೈಲ್ವೆಯಲ್ಲಿ 3,200ಕ್ಕೂ ಅಧಿಕ ಕಿಲೋಮೀಟರ್ ಗಳಲ್ಲಿ ಆಪ್ಟಿಕಲ್ ಫೈಬರ್ ಸಂವಹನ ವ್ಯವಸ್ಥೆ ನವೀಕರಿಸಲಾಗುತ್ತಿದೆ. ಉತ್ತರ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಾಮಗಾರಿಗಳು ನಡೆಯಲಿವೆ. ಅವು ಪಿಎಚ್-33 ಅಡಿಯಲ್ಲಿ 4,871 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತದೆ.

Rail Safety Transformation

ಒಟ್ಟು 176.76 ಕೋಟಿ ರೂಪಾಯಿ ವೆಚ್ಚದಲ್ಲಿ ಕವಚ ಸುರಕ್ಷತಾ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಮುಂದಾಗಿದೆ. ಅದಕ್ಕಾಗಿ ಉತ್ತರ ಮಧ್ಯ ರೈಲ್ವೆಯಲ್ಲಿ 2,196 ರೂಟ್ ಕಿಲೋಮೀಟರ್ ಗಳಿಗಿಂತ ಹೆಚ್ಚು 2×48 ಫೈಬರ್ ಒ.ಎಫ್.ಸಿ. ನೆಟ್ವರ್ಕ್ ವ್ಯವಸ್ಥೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಒಟ್ಟು ₹578.02 ಕೋಟಿ ವೆಚ್ಚದಲ್ಲಿ ಪ್ಯಾನಲ್ ಇಂಟರ್ಲಾಕಿಂಗ್ ಅನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗಳೊಂದಿಗೆ ಬದಲಾಯಿಸಲು ಎರಡು ಐಟಂ ಕಾಮಗಾರಿಗಳನ್ನು ಮಂಜೂರು ಮಾಡಿದೆ. ಈ ಕಾಮಗಾರಿಗಳು "ಕವಚ್/ಎಬಿಎಸ್/ಸಿಟಿಸಿ ಮಂಜೂರಾಗಿರುವ ಎಚ್ಡಿಎನ್/ಎಚ್ಯುಎನ್ ಮಾರ್ಗಗಳಲ್ಲಿನ ಬ್ಯಾಲೆನ್ಸ್ ಸ್ಟೇಷನ್ ಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಒದಗಿಸುವಿಕೆ (ಸಮಗ್ರ ಕೆಲಸ 2024-25)" ಎಂಬ ಶೀರ್ಷಿಕೆಯಡಿಯಲ್ಲಿ ಬರುತ್ತವೆ, ಇದನ್ನು ಪಿಎಚ್-33 ಅಡಿಯಲ್ಲಿ 15,164 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಲಾಗಿದೆ.

ಎಲೆಕ್ಟ್ರಾನಿಕ್- ಪ್ಯಾನಲ್ ಇಂಟರ್ಲಾಕಿಂಗ್ ಕಾಮಗಾರಿ

ಅದೇ ರೀತಿ ದಕ್ಷಿಣ ಮಧ್ಯ ರೈಲ್ವೆಗೆ 1,857 ಕೋಟಿ ರೂ. ಉಪ ಹಂಚಿಕೆ ಮಾಡಲಾಗಿದೆ. ಅದರಡಿ ಎರಡು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ, ಗುಂಟಕಲ್ ವಿಭಾಗದ ಎಚ್.ಡಿ.ಎನ್/ಎಚ್.ಯು.ಎನ್. ಮಾರ್ಗಗಳಲ್ಲಿನ 35 ನಿಲ್ದಾಣಗಳಲ್ಲಿ 426.82 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ನೊಂದಿಗೆ ಪ್ಯಾನಲ್ ಇಂಟರ್ಲಾಕಿಂಗ್ ಅನ್ನು ಬದಲಾಯಿಸಲಾಗುತ್ತದೆ. ನಾಂದೇಡ್ ವಿಭಾಗದ ಎಚ್.ಡಿ.ಎನ್/ಎಚ್.ಯು.ಎನ್. ಮಾರ್ಗಗಳಲ್ಲಿನ 14 ನಿಲ್ದಾಣಗಳಲ್ಲಿ 151.20 ಕೋಟಿ ರೂ. ಹಣದಲ್ಲಿ ಅಂಥದ್ದೆ ಬದಲಾವಣೆ ಮಾಡಲು ರೈಲ್ವೆ ಅಧಿಕಾರಿಗಳು ಯೋಜಿಸಿದ್ದಾರೆ.

232 ಲೋಕೋಮೋಟಿವ್ ಗಳಲ್ಲಿ ಕವಚ ಅಳವಡಿಕೆ

ಭಾರತೀಯ ರೈಲ್ವೆಯು ದಕ್ಷಿಣ ರೈಲ್ವೆಯಲ್ಲಿ 232 ಲೋಕೋಮೋಟಿವ್ ಗಳಿಗೆ ಬರೋಬ್ಬರಿ 208.81 ಕೋಟಿ ವೆಚ್ಚದಲ್ಲಿ ಆನ್-ಬೋರ್ಡ್ ಕವಚ್ 4.0 ಉಪಕರಣಗಳನ್ನು ಅಳವಡಿಸಲಾಗುತ್ತದೆ. ಈ ಪ್ರಸ್ತಾವನೆಯು "ಭಾರತೀಯ ರೈಲ್ವೆಯ ಬಾಕಿ ಮಾರ್ಗಗಳಲ್ಲಿ (2024-25) ದೀರ್ಘಾವಧಿಯ ದೃಷ್ಟಿಯಲ್ಲಿಟ್ಟುಕೊಂಡು ಕವಚ ತಾಂತ್ರಿಕ ವ್ಯವಸ್ಥೆ ಅಳವಡಿಸಲಾಗುವುದು. ಇದೆಲ್ಲವು ಪಿಎಚ್-33 ಅಡಿಯಲ್ಲಿ ₹27,693 ಕೋಟಿ ಒಟ್ಟಾರೆ ವೆಚ್ಚದಲ್ಲಿ ಹಂತ ಹಂತವಾಗಿ ಅಳವಡಿಕೆ ಮಾಡಲು ಪ್ಲಾನ್ ಹಾಕಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+