ರಾಹುಲ್ ಗಾಂಧಿಯ ಹೊಸ ಯಡವಟ್ಟು ಮತ್ತು ಟ್ವಿಟ್ಟಿಗರ ಕಾಲೆಳೆತ

ಬೆಂಗಳೂರು, ಜೂನ್ 11: ವಿರೋಧಿಗಳ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವುದು ರಾಹುಲ್ ಗಾಂಧಿ ಅವರಿಗೆ ಅಭ್ಯಾಸವಾಗಿಬಿಟ್ಟಿದೆ ಎನಿಸುತ್ತದೆ. ಈಗಾಗಲೇ ಅವರು ತಮ್ಮ ವಿವೇಚನಾರಹಿತ ಮಾತುಗಳಿಂದ ಟ್ರೋಲ್‌ಗಳ ಆಹಾರವಾಗಿದ್ದಾರೆ ಅವರ ಇಂದಿನ ಭಾಷಣದಲ್ಲೂ ಮತ್ತೆ ಯಡವಟ್ಟು ಮಾಡಿದ್ದಾರೆ.

ದೆಹಲಿಯಲ್ಲಿ ಇಂದು ನಡೆದ ಒಬಿಸಿ (ಅಲ್ಪಸಂಖ್ಯಾತರ) ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಮಾತಿನ ಭರದಲ್ಲಿ ಏನೇನೋ ಹೇಳಿ ಹಾಸ್ಯಕ್ಕೆ ಈಡಾಗಿದ್ದಾರೆ. ಅವರು ಕೊಕೊ-ಕೋಲಾ, ಮೆಕ್‌ ಡೊನಾಲ್ಡ್ಸ್‌ ಸಂಸ್ಥಾಪಕರ ಹಿನ್ನೆಲೆ ಬಗ್ಗೆ ತಮ್ಮ ಕಲ್ಪನೆಗೆ ಸಿಕ್ಕಿದ್ದನ್ನು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ಕೋಕಾ-ಕೋಲಾ ಸಂಸ್ಥಾಪಕ ಶರಬತ್ತು ಮಾರುತ್ತಿದ್ದ. ಮೆಕ್‌ಡೊನಾಲ್ಡ್ಸ್‌ ಸಂಸ್ಥಾಪಕ ಡಾಬಾ ಇಟ್ಟುಕೊಂಡಿದ್ದ ಎಂದು ತಮ್ಮ ಹೊಸ 'ಸಂಸೋಧನೆ' ಮುಂದಿಟ್ಟಿದ್ದಾರೆ. ಪ್ರಧಾನಿ ಅಭ್ಯರ್ಥಿ ಈ ರೀತಿಯ ಹೇಳಿಕೆ ಕೊಟ್ಟರೆ ಬಿಡುತ್ತಾರೆಯೇ ನಮ್ಮ ನೆಟ್ಟಿಗರು.

ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೋ ತುಣುಕು ಹೊರಬೀಳುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ #acordingtorahugandhi ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ರಾಹುಲ್ ಗಾಂಧಿಯ ಭಾಷಣ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇಲ್ಲಿದೆ ನೋಡಿ ಕೆಲವು ಆಯ್ದ ಟ್ವೀಟ್‌ಗಳು.

ಇಲ್ಲಿದ್ದಾರೆ ನೋಡಿ ಫ್ರೂಟಿ, ಮಾಜಾ ಓನರ್‌ಗಳು

ರಾಹುಲ್ ಅವರು ಕೊಕಾ-ಕೋಲಾದ ಸಂಸ್ಥಾಪಕ ಶರಬತ್ತು ಮಾರುತ್ತದ್ದ ಎಂಬ ಥಿಯರಿಗೆ ಎದುರಾಗಿ ಇಲ್ಲೊಬ್ಬರು ಹೊಸ ಥಿಯರಿ ನೀಡಿದ್ದಾರೆ. ಮಾವಿನ ಹಣ್ಣುವ ಮಾರುವ ಹುಡುಗರ ಚಿತ್ರ ಹಾಕಿ, 'ಮಾಜಾ ಮತ್ತು ಫ್ರೂಟಿ ಸಂಸ್ಥೆಯ ಸಂಸ್ಥಾಪಕರು' ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಪ್ರಕಾರ ಯೋಗಿ ಆದಿತ್ಯನಾಥ ಅವರೇ ವೇನ್ ಡೀಸಲ್!

ರಾಹುಲ್ ಗಾಂಧಿ ಪ್ರಕಾರ ಬೋಡು ತಲೆಯ ವೇನ್ ಡೀಸಲ್ ಅವರೇ ಯೋಗಿ ಆದಿತ್ಯನಾಥ ಅಂತೆ. ಕಾಲಿಯಾ ಎಂಬುವರೊಬ್ಬರ ಟ್ವೀಟ್ ಇದು.

ಜಿಲೆಟ್ ಸಂಸ್ಥೆ ಸ್ಥಾಪಕ ಇವನಿರಬಹುದೇ

ವಿಚಿತ್ರ ರೀತಿಯಲ್ಲಿ ಕ್ಷೌರ ಮಾಡುತ್ತಿರುವನೊಬ್ಬನ ಚಿತ್ರ ಹಾಕಿರುವ ಶೆಹಜಾದ್ ಜೈ ಹಿಂದ್ 'ಈ ಮನುಷ್ಯ ಶೇವಿಂಗ್ ಬ್ಲೇಡ್ ಸಂಸ್ಥೆ 'ಜಿಲೆಟ್‌'ನ ಸಂಸ್ಥಾಪಕ ಇರಬಹುದೇ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕೊಕಾ-ಕೊಲಾ ಸಂಸ್ಥಾಪಕ ಇವನಂತೆ

ರಾಹುಲ್ ಅವರು ಕೊಕಾ-ಕೊಲಾ ಸಂಸ್ಥಾಪಕ ಶರಬತ್ತು ಮಾರುತ್ತಿದ್ದ ಎನ್ನುತ್ತಿದ್ದಂತೆ ಇಲ್ಲೊಬ್ಬರು ವ್ಯಕ್ತಿಯೊಬ್ಬ ಶರಬತ್ತು ಮಾರುತ್ತಿರುವ ಚಿತ್ರ ಹಾಕಿ 'ಕೊಕಾ-ಕೋಲಾ ಸಂಸ್ಥಾಪಕನ ಹಳೆಯ ಚಿತ್ರ ನೋಡಿ' ಎಂದಿದ್ದಾರೆ.

ರಾಹುಲ್‌ಗೆ ನೀಡಿದ್ದಾರೆ ಮಾಹಿತಿ

ತಮಾಷೆ ಕಾಲೆಳೆತಗಳ ಮಧ್ಯೆ ಕೊಕಾ-ಕೋಲಾ ಸಂಸ್ಥಾಪಕನ ಕುರಿತು ಮಾಹಿತಿಯನ್ನೂ ಕೆಲವರು ಹಂಚಿಕೊಂಡಿದ್ದಾರೆ. ಕೊಕಾ-ಕೋಲಾ ಸಂಸ್ಥಾಪಕ ಜಾನ್‌ ನ ಚಿತ್ರ ಹಾಕಿ ಆತನ ಕುರಿತು ಮಾಹಿತಿ ನೀಡಿದ್ದಾರೆ ಕಿರಣ್ ಕುಮಾರ್.

ವಿಕಿಪೀಡಿಯಾಗೆ ಶಾಕ್ ನೀಡಿದ ರಾಹುಲ್ ಗಾಂಧಿ

ಕೊಕಾ-ಕೋಲಾ, ಮೆಕ್‌ಡೊನಾಲ್ಡ್ಸ್‌ ಸಂಸ್ಥಾಪಕರ ಬಗ್ಗೆ ತಮ್ಮದೇ ಕಲ್ಪಿತ ಕತೆ ಹರಿಬಿಟ್ಟ ರಾಹುಲ್ ಗಾಂಧಿ ಕೊಕಾ-ಕೊಲಾ, ಮೆಕ್‌ಡೊನಾಲ್ಡ್ಸ್‌ ಮತ್ತು ವಿಕಿಪೀಡಿಯಾಗೆ ದೊಡ್ಡ ಶಾಕ್ ನೀಡಿದ್ದಾರಂತೆ.

ಬಿಜೆಪಿ ಪರ ಪ್ರಚಾರ ಶುರು ಮಾಡಿದರಾ ರಾಹುಲ್

ರಾಹುಲ್ ಗಾಂಧಿ ಬಾಯಿ ಬಿಟ್ಟರೆ ಬಿಜೆಪಿಗೆ ಲಾಭ ಎಂಬುದು ಬಿಜೆಪಿಗರ ಜೋಕು ಇದನ್ನು ಇಂದು ರಾಹುಲ್ ಗಾಂಧಿ ಮತ್ತೆ ನಿಜ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಪರ ರಾಹುಲ್ ಗಾಂಧಿ ಪ್ರಚಾರ ಆರಂಭಿಸಿದ್ದಾರೆ ಎಂದಿದ್ದಾರೆ ಒಬ್ಬರು.

ಮೆಕ್‌ಡೊನಾಲ್ಡ್ಸ್‌ ಸಂಸ್ಥಾಪಕ ಇವರೇ ನೋಡಿ

ಮೆಕ್‌ಡೊನಾಲ್ಡ್ಸ್‌ನ ಜೋಕರ್ ಪಕ್ಕ ಹಳ್ಳಿ ಹೈದನೊಬ್ಬ ಕೂತಿರುವ ಚಿತ್ರ ಹಾಕಿರುವ ವ್ಯಕ್ತಿಯೊಬ್ಬರು ಡಾಬಾ ನಡೆಸುತ್ತಿದ್ದ ಮೆಕ್‌ಡೊನಾಲ್ಡ್ಸ್‌ ಸಂಸ್ಥಾಪಕ ಇವರೇ ನೋಡಿ ಎಂದಿದ್ದಾರೆ.

ಸ್ಲೀಪ್‌ವೆಲ್ ಮ್ಯಾಟ್ರಸ್‌ ಸಂಸ್ಥಾಪಕನಂತೆ ಇವ

ನೆಲದ ಮೇಲೆ ಮಲಗಿರುವ ವ್ಯಕ್ತಿಯ ಚಿತ್ರ ಹಾಕಿರುವ ನಿಮೇಶ್ ಎಂಬುವರು, ರಾಹುಲ್ ಗಾಂಧಿ ಪ್ರಕಾರ ಸ್ಲೀಪ್‌ವೆಲ್ ಮ್ಯಾಟ್ರಸ್ ಸಂಸ್ಥಾಪಕ ಇವರೇ ನೋಡಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+