ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ: ನಾಯಕನನ್ನು ಹಾಡಿ ಹೊಗಳಿದ ರಮ್ಯಾ

ಸುರಿವ ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದು ಸುದ್ದಿಯಲ್ಲ. ಮಳೆಯ ನಡುವೆಯೂ ಜನಸಮೂಹ ಅವರ ಮಾತನ್ನು ಕೇಳಿದ್ದು ವಿಶೇಷ ಎಂದು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಟ್ವೀಟ್ ಮಾಡಿದ್ದಾರೆ. ಭಾರತ ಐಕ್ಯತೆ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿಯವರು ಸುರಿವ ಮಳೆಯ ನಡುವೆಯೇ ಮೈಸೂರಿನಲ್ಲಿ ಭಾಷಣ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಹುಲ್‌ ಗಾಂಧಿಯವರ ಬದ್ಧತೆ ಇದು ಎಂದು ಹೊಗಳುತ್ತಿದ್ದಾರೆ.

ರಾಜ್ಯದಲ್ಲಿ ಮೂರನೇ ದಿನದ ಭಾರತ್‌ ಜೋಡೋ ಯಾತ್ರೆ ಮೈಸೂರು ಬಂಡಿಪಾಳ್ಯ ಸರ್ಕಲ್ ತಲುಪುತ್ತಿದ್ದಂತೆ ರಭಸವಾಗಿ ಮಳೆ ಸುರಿಯತೊಡಗಿತು. ಮಳೆ ಲೆಕ್ಕಿಸದೇ ರಾಹುಲ್‌ ಗಾಂಧಿ ಅವರು ಸಾರ್ವಜನಿಕ ಸಮಾವೇಶದಲ್ಲಿ ನೆರಿದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಭಾನುವಾರದ ಯಾತ್ರೆಗೆ ವಿರಾಮ ನೀಡಿದರು.

Rahul Gandhis speech in the rain: Ramya sings the praises of the leader

ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಭಾನುವಾರ ಭಾರಿ ಮಳೆಯ ನಡುವೆಯೂ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಳೆಯ ನಡುವೆಯೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. "ಬಿಜೆಪಿ-ಆರ್‌ಎಸ್‌ಎಸ್ ಹರಡುವ ದ್ವೇಷ ಮತ್ತು ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಫೋಟೋವನ್ನು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಕೂಡ ಶೇರ್ ಮಾಡಿಕೊಂಡು ಕ್ಯಾಪ್ಷನ್ ಕೊಟ್ಟಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ, ಆ ಜಡಿ ಮಳೆಯಲ್ಲಿಯೂ ಭಾಷಣ ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನ ಸೆಳೆದಿದೆ ಎಂದು ಹೇಳುವ ಮೂಲಕ ರಮ್ಯಾ ಅವರು ಕೈ ನಾಯಕನನ್ನು ಹಾಡಿ ಹೊಗಳಿದ್ದಾರೆ.

"ಜನ ನಾಯಕನಿಗಿರಬೇಕಾದ ಬದ್ದತೆ ಇದು. ಇದೇ ನಿಮ್ಮನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ" ಎಂದು ಪದ್ಮಾ ರೇಖಾ ಎನ್ನುವವರು ಪೋಸ್ಟ್ ಮಾಡಿದ್ದಾರೆ.

Rahul Gandhis speech in the rain: Ramya sings the praises of the leader

"ರಾಜಕೀಯ ಏನಾಗುತ್ತೊ ಏನಾಗಲ್ವೊ ಗೊತ್ತಿಲ್ಲ. I'm sure, ಈ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಮುಗಿಸುವುದರೊಳಗೆ ಕಿಂದರಿಜೋಗಿಯಂತೆ ದೇಶದುದ್ದಗಲಕ್ಕೂ ಕೋಟ್ಯಾಂತರ ಅಭಿಮಾನಿಗಳನ್ನು, ನಿಜವಾದ ದೇಶಪ್ರೇಮಿಗಳನ್ನು ಜೊತೆಯಲ್ಲಿ ಸೇರಿಸಿಕೊಳ್ಳುತ್ತಾರೆ! ಮನುಷ್ಯನಿಗೆ ಏನಾದರೂ ಸಾಧಿಸಲು ಬೇಕಿರುವುದು true commitment. ಅದು ಇವರಿಗಿದೆ. ಸ್ಪಷ್ಟತೆಯಿದೆ. ಬರೆದಿಟ್ಟುಕೊಳ್ಳಿ, ದೇಶವನ್ನು ಕಟ್ಟಿಯೇ ಕಟ್ಟುತ್ತಾರೆ" ಎಂದು ಲೇಖಕಿ ಪಲ್ಲವಿ ಇಡೂರು ಪೋಸ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+