ರಾಹುಲ್ ಗಾಂಧಿಗೆ ಮತ್ತೆ 'ಸಿಹಿ' ಚುಂಬನ
ಕೋಲ್ಕತ್ತಾ, ಏ.20: ಈ ಮೊದಲು ಅಸ್ಸಾಂನಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕೆನ್ನೆಗೆ ಮತ್ತೆ ಚುಂಬನ ಭಾಗ್ಯ ಸಿಕ್ಕಿದೆ. ಮುರ್ಷಿದಾಬಾದಿನಲ್ಲಿ ಚುನಾವಣಾ ಪ್ರಚಾರ ಸಮಾವೇಶಕ್ಕೆ ಬಂದಿದ್ದ ರಾಹುಲ್ ಗಾಂಧಿಯನ್ನು ವ್ಯಕ್ತಿಯೊಬ್ಬ ಚುಂಬಿಸಿದ್ದಾನೆ. ಅಸ್ಸಾಂನಲ್ಲಿ ರಾಹುಲ್ ಗೆ ಮುತ್ತಿಟ್ಟ ಮಹಿಳೆ ದುರಂತ ಸಾವನ್ನಪ್ಪಿದ್ದಳು.
ಶನಿವಾರ ಬೆಹ್ರಾಮ್ ಪುರದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರು ಸಮಾವೇಶ ಮುಗಿಸಿದ ಮೇಲೆ ಸ್ಥಳೀಯ ಸಿಹಿ ತಿಂಡಿ ತಿನ್ನುವ ಮನಸ್ಸಾಗಿದೆ. ರಸ್ತೆಗಿಳಿದ ರಾಹುಲ್ ನೇರವಾಗಿ ಸಮೀಪದ ಸಿಹಿ ಅಂಗಡಿಗೆ ತೆರಳಿದ್ದಾರೆ.
ರಾಹುಲ್ ಅವರ ಜತೆಗೆ ಬೆಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಕೂಡಾ ಜತೆಗೂಡಿದ್ದಾರೆ. ಸಿಹಿ ಅಂಗಡಿಯ ಬಳಿ ರಾಹುಲ್ ಬರುತ್ತಿದ್ದಂತೆ ಹತ್ತಿರದ ಅಂಗಡಿಗಳಲ್ಲಿದ್ದ ಜನ ಜಯಘೋಷ ಹಾಕುತ್ತಾ ರಾಹುಲ್ ಅವರ ಬಳಿ ನುಗ್ಗಿದ್ದಾರೆ. ರಾಹುಲ್ ಹತ್ತಿರ ಹೋಗಲು ಆಗದ ಯುವತಿಯರು ಮನೆ ಛಾವಣಿಯಲ್ಲಿ ನಿಂತು ರಾಹುಲ್ ನತ್ತ ನೋಡುತ್ತಿದ್ದರು.

ಈ ನಡುವೆ ರಾಹುಲ್ ಗಾಂಧಿ ಅವರನ್ನು ಕಣ್ಣಾರೆ ಕಂಡ ಖುಷಿಯಲ್ಲಿ ಅವರ ಅಭಿಮಾನಿಯೊಬ್ಬ ಕಾಂಗ್ರೆಸ್ ಉಪಾಧ್ಯಕ್ಷರನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟಿದ್ದಾನೆ. ಇದರಿಂದ ಮುಜುಗರಕ್ಕೊಳಪಟ್ಟ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿದೆ ಮುಂದೆ ಸಾಗಿದ್ದಾರೆ. ರಾಹುಲ್ ಗೆ ಮುತ್ತಿಟ್ಟ ಖುಷಿಯಲ್ಲಿ ಅವರ ಅಭಿಮಾನಿ ಮತ್ತೆ ಅಂಗಡಿಯ ಕಡೆಗೆ ತೆರಳಿದ್ದಾರೆ. ಹಾಗೂ ಹೀಗೂ ಸಿಹಿ ಚುಂಬನ, ಸಿಹಿ ತಿಂಡಿ ತಿಂದ ರಾಹುಲ್ ಅಲ್ಲಿಂದ ಮುಂದೆ ಸಾಗಿದ್ದಾರೆ. ಅಭಿಮಾನಿಗಳು ರಾಹುಲ್ ಕಂಡರೆ ಮುತ್ತಿಡುವುದೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲಾಗುತ್ತಿದೆ. ಪುಣ್ಯಕ್ಕೆ ಮುತ್ತಿಟ್ಟ ಅಭಿಮಾನಿಗೆ ಯಾವುದೇ ತೊಂದರೆ ಆಗದಿದ್ದರೆ ಸಾಕು.
Rahul Gandhi gets kissed again, this time by a male supporter in Murshidabad!
http://t.co/dCZNAJPFLK pic.twitter.com/lLghAOtswA
— India Today (@IndiaToday) April 19, 2014 ಅಸ್ಸಾಂನ ಜೊರ್ಹಾತ್ ನಲ್ಲಿ ಪ್ರಚಾರ ವೇಳೆ ರಾಹುಲ್ ಗಾಂಧಿ ಕೆನ್ನೆಯ ಮೇಲೆ ಮುತ್ತಿನ ಮಳೆ ಸುರಿಸಿದ ಮಹಿಳೆ ಬೊಂಟಿ ದುರಂತ ಸಾವನ್ನಪ್ಪಿದ್ದಳು. ಆಕೆಯ ಪತಿರಾಯ ಬೆಂಕಿ ಹಚ್ಚಿ ಸಾಯಿಸಿ, ತದನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ದುರ್ಘಟನೆ ನಡೆದಿತ್ತು. ಕಾಂಗ್ರೆಸ್ ಈ ಪ್ರಸಂಗದಿಂದ ತೀವ್ರ ಮುಜುಗರ ಅನುಭವಿಸಿತ್ತು.












Click it and Unblock the Notifications