ರಾಹುಲ್ ಗಾಂಧಿಗೆ ಸಹರನ್ ಪುರ ಭೇಟಿ ಅನುಮತಿ ನಿರಾಕರಣೆ
ಮೇ 5ರಂದು ಶಬ್ಬೀರ್ ಪುರ ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭೇಟಿ ನೀಡಲು ಯತ್ನಿಸಿದ್ದರು.
ಲಕ್ನೋ, ಮೇ 26: ಸಹರನ್ ಪುರ ಜಿಲ್ಲೆಯ ಗಲಭೆ ಪೀಡಿತ ಗ್ರಾಮವಾದ ಶಬ್ಬೀರ್ ಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಜಿಲ್ಲೆಯನ್ನು ಪ್ರವೇಶಿಸಲು ಅಲ್ಲಿನ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ರಾಹುಲ್ ಗಾಂಧಿಯವರ ಸಹರನ್ ಪುರ ಭೇಟಿ ಶನಿವಾರಕ್ಕೆ ನಿಗದಿಯಾಗಿತ್ತು. ಈ ಬಗ್ಗೆ ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿ ಬಬ್ಲು ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೇ 5ರಂದು ಶಬ್ಬೀರ್ ಪುರ ಗ್ರಾಮದಲ್ಲಿ ಸವರ್ಣೀಯರು, ದಲಿತರಿಗೆ ಸೇರಿದ್ದ ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಹಿಂಸಾಚಾರ ಭುಗಿಲೆದ್ದಿತ್ತು.












Click it and Unblock the Notifications