ಲೋಕಸಭೆಯಲ್ಲಿ ರಾಹುಲ್ ಹೇಳಿದ್ದೇನು? ವಿತ್ತ ಸಚಿವೆ ತಲೆ ಮೇಲೆ ಕೈ ಇಟ್ಟುಕೊಂಡಿದ್ದೇಕೆ?
ಲೋಕಸಭೆಯಲ್ಲಿ ಸೋಮವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಬಜೆಟ್ 2024 ಕುರಿತು ಭಾಷಣ ಮಾಡಿ ಎಲ್ಲರ ಚಿತ್ತ ಕದ್ದರು. ಇತ್ತೀಚಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಕುರಿತು ಮಾತನಾಡಿದರು.
ಬಜೆಟ್ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಸರ್ಕಾರದ ಗಮನವನ್ನು ಸೆಳೆಯಲು ಒಂದು ಫೋಟೋವನ್ನು ತಂದಿದ್ದರು. ಪೋಸ್ಟರ್ ಪ್ರದರ್ದಶನಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ. ಹೀಗಾಗಿ ರಾಹುಲ್ ಗಾಂಧಿ, ಪೋಸ್ಟರ್ ಕೆಳಗಿಟ್ಟು ಭಾಷಣ ಆರಂಭಿಸಿದರು.

ಈ ಸಂದರ್ಭದಲ್ಲಿ ಅವರು ಚಕ್ರವ್ಯೂಹದ ಉದಾಹರಣೆಯನ್ನು ನೀಡಿದರು. ಚಕ್ರವ್ಯೂಹದಲ್ಲಿ ಸಿಲುಕಿ ಅಭಿಮನ್ಯು ಹತ್ಯೆಯಾದ ಘಟನೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಅಭಿಮನ್ಯುವಿಗೆ ಮಾಡಿದ್ದನ್ನು ಭಾರತದ ಜನತೆಗೆ ಸರ್ಕಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಅವರು ಬಜೆಟ್ ಹಲ್ವಾ ಸಮಾರಂಭದಲ್ಲಿ ಕೆಲವು ವರ್ಗದ ಅಧಿಕಾರಿಗಳನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದರು. ಆಗ ವಿತ್ತ ಸಚಿವೆ ತಮ್ಮ ಎರಡೂ ಕೈಗಳನ್ನು ತಮ್ಮ ಹಣೆ ಮೇಲೆ ಇಟ್ಟುಕೊಂಡು ನಗಲು ಆರಂಭಿಸಿದರು.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಲ್ವಾ ಸಮಾರಂಭದ ಚಿತ್ರವನ್ನು ತೋರಿಸಲು ಪ್ರಯತ್ನಿಸಿದ್ದರು. ಆದರೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪೋಸ್ಟರ್ ತೋರಿಸುವುದಕ್ಕೆ ನಿರಾಕರಿಸಿದರು. ಈ ಕುರಿತು ಪ್ರತಿಪಕ್ಷದ ನಾಯಕ, 'ಬಜೆಟ್‌ನ ಸಿಹಿ ವಿತರಿಸಲಾಗುತ್ತಿದ್ದು, ಈ ಚಿತ್ರದಲ್ಲಿ ಒಬಿಸಿ ಅಧಿಕಾರಿ ಕಾಣಿಸುತ್ತಿಲ್ಲ ಎಂಬುದನ್ನು ಚಿತ್ರ ತೋರಿಸಿ ವಿವರಿಸಲು ಪ್ರಯತ್ನಿಸಿದ್ದರು. ಗಿರಿಜನ ಅಧಿಕಾರಿ ಮತ್ತು ದಲಿತ ಅಧಿಕಾರಿಯೂ ಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಈ ಮಾತು ಹೇಳಿದ ತಕ್ಷಣ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಗುತ್ತಾ ತಮ್ಮ ಎರಡು ಕೈಗಳನ್ನು ಅವರ ಹಣೆಯ ಮೇಲೆ ಇಟ್ಟುಕೊಂಡರು. ಈ ವೇಳೆ ಗದ್ದಲ ಉಂಟಾಯಿತು. ಆದರೆ, ಗದ್ದಲದ ನಡುವೆಯೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಭಾಷಣ ಮುಂದುವರಿಸಿದರು.

ನೀವು ಹಲ್ವಾ ತಿನ್ನುತ್ತಿದ್ದೀರಿ ಮತ್ತು ಇತರರಿಗೆ ಹಲ್ವಾ ಸಿಗುತ್ತಿಲ್ಲ. 20 ಅಧಿಕಾರಿಗಳು ಬಜೆಟ್ ಸಿದ್ಧಪಡಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ನೀವು ಆ ಅಧಿಕಾರಿಗಳ ಹೆಸರುಗಳನ್ನು ಬಯಸಿದರೆ, ನಾನು ನಿಮಗೆ ನೀಡುವೆನು ಎಂದು ತಿಳಿಸಿದ್ದಾರೆ. ಇದರರ್ಥ 20 ಅಧಿಕಾರಿಗಳು ಬಜೆಟ್ ಮಾಡಿದ್ದಾರೆ. ಅಂದರೆ 20 ಜನರು ಭಾರತದ ಹಲ್ವಾವನ್ನು ಹಂಚಿದ್ದಾರೆ. ಇದರ ಲಾಭ ಯಾರಿಗೆ ಸಿಗುತ್ತದೆ? ಎಂದು ಪ್ರಶ್ನಿಸಿದರು.












Click it and Unblock the Notifications