ಮಲಯಾಳಂ ನಟಿ ದೌರ್ಜನ್ಯದ ಹಿಂದೆ ಕೊಟೇಷನ್ ಮಾಫಿಯಾ?

ಬೆಂಗಳೂರು, ಫೆಬ್ರವರಿ 21 : ಕೇರಳದ ಪ್ರಖ್ಯಾತ ನಟಿಯ ಅಪರಹಣ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ದಿನಕ್ಕೊಂದು ಚಿತ್ರವಿಚಿತ್ರ ತಿರುವು ಪಡೆಯುತ್ತಿದೆ. ಮೇಲ್ನೋಟಕ್ಕೆ ಇದು ಕಾಮುಕರ ಅಟ್ಟಹಾಸವೆಂದು ಕಂಡುಬಂದರೂ, ಆಳಕ್ಕಿಳಿದು ನೋಡಿದರೆ ನಾನಾ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ.

ಆರಂಭದಲ್ಲಿ, ಆ ಮಲಯಾಳಂ ನಟಿಯಿಂದ ಕೆಲಸ ಕಳೆದುಕೊಂಡಿದ್ದ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನೀಲ್ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರ ಪ್ರಕಾರ ಕೊಟೇಷನ್ ಮಾಫಿಯಾನೇ ಈ ಪ್ರಕರಣದ ಬೆನ್ನಿಗಿದೆ.[ಖ್ಯಾತ ಮಲಯಾಳಂ ನಟಿಯ ಅಪಹರಣ, ಲೈಂಗಿಕ ಕಿರುಕುಳ?]

ಸುಪಾರಿ ಕಿಲ್ಲರ್ ಗಳಂತೆಯೇ ಈ ಮಾಫಿಯಾ ಕೆಲಸ ಮಾಡುತ್ತಿದ್ದು, ಕೊಲ್ಲುವುದರ ಹೊರತಾಗಿ ಅಪಹರಣ, ಅತ್ಯಾಚಾರ, ಸುಲಿಗೆಯಂತಹ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಈ ಮಾಫಿಯಾದ ಕೆಲಸ. ಮಲಯಾಳಂ ಚಿತ್ರನಟಿಗೂ ಈ ಮಾಫಿಯಾಕ್ಕೂ ಏನು ಸಂಬಂಧ ಎಂಬುದು ಪೊಲೀಸರಿಗೆ ಬಗೆಹರಿಯದ ಪ್ರಶ್ನೆಯಾಗಿದೆ. [ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?]

ನಟನೊಂದಿಗೆ ನಟಿಯ ಹಣಕಾಸಿನ ಕಿರಿಕ್

ನಟನೊಂದಿಗೆ ನಟಿಯ ಹಣಕಾಸಿನ ಕಿರಿಕ್

ಈ ಖ್ಯಾತ ನಟಿಗೂ ಕೇರಳದ ಮತ್ತೊಬ್ಬ ಪ್ರಖ್ಯಾತ ಕಲಾವಿದನಿಗೂ ಹಣಕಾಸಿಗೆ ಸಂಬಂಧಿಸಿದಂತೆ ಇದ್ದ ಕಲಹವೇ ನಟಿಯ ಅಪರಹಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಿರಬಹುದು ಎಂದು ಕೆಲ ಮಾತುಗಳು ಕೇಳಿಬರುತ್ತಿವೆ.

ವೃತ್ತಿ ಬದುಕನ್ನು ಹಾಳು ಮಾಡುವ ಉದ್ದೇಶ

ವೃತ್ತಿ ಬದುಕನ್ನು ಹಾಳು ಮಾಡುವ ಉದ್ದೇಶ

ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರನ್ನು ವಿಚಾರಿಸಿದಾಗ, ಎಲ್ಲ ಮಗ್ಗಲುಗಳಿಂದ ವಿಚಾರಣೆಯನ್ನು ನಡೆಸಿದ್ದು, ಖ್ಯಾತ ಚಿತ್ರನಟಿಯ ವೃತ್ತಿ ಬದುಕನ್ನು ಹಾಳು ಮಾಡುವ ಉದ್ದೇಶದಿಂದಲೇ ನಟಿಯ ಮೇಲೆ ದೌರ್ಜನ್ಯ ಎಸಗಿ, ಫೋಟೋ ಮತ್ತು ವಿಡಿಯೋ ತೆಗೆದುಕೊಂಡಿರಬಹುದು ಎಂದಿದ್ದಾರೆ.

ಸುನೀಲ್ ಕುಮಾರ್ ಇನ್ನೂ ತಲೆಮರೆಸಿಕೊಂಡಿದ್ದಾನೆ

ಸುನೀಲ್ ಕುಮಾರ್ ಇನ್ನೂ ತಲೆಮರೆಸಿಕೊಂಡಿದ್ದಾನೆ

ತನಿಖೆಯಲ್ಲಿ ನಿರತರಾಗಿರುವ ಪೊಲೀಸರು 2100 ರೌಡಿ ಶೀಟರ್ ಗಳ ಪಟ್ಟಿ ಸಿದ್ಧಪಡಿಸಿದ್ದು, ಅವರನ್ನು ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸುವವರಿದ್ದಾರೆ. ಈ ಕೃತ್ಯದ ಪ್ರಮುಖ ಆರೋಪಿ ಸುನೀಲ್ ಕುಮಾರ್ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಎಲ್ಲೆಡೆ ಬಲೆ ಬೀಸಲಾಗಿದೆ.

ಯಾವ ಹುತ್ತದಲ್ಲಿ ಯಾವ ಹಾವಿದೆಯೋ

ಯಾವ ಹುತ್ತದಲ್ಲಿ ಯಾವ ಹಾವಿದೆಯೋ

ಮೇಲ್ನೋಟಕ್ಕೆ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದವರನ್ನು ಬಾಡಿಗೆ ಪಡೆದು ಈ ಕೃತ್ಯವೆಸಗಲಾಗಿದೆ ಎಂದು ಕಂಡುಬರುತ್ತದೆ. ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಬಲ್ಲವರಾರು? ಸಮಗ್ರ ತನಿಖೆ ನಡೆದ ನಂತರವಷ್ಟೇ ಗೊತ್ತಾಗಬಲ್ಲದು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+