ಸ್ಮೃತಿ ವಿದ್ಯಾರ್ಹತೆ ಪ್ರಶ್ನೆ, ಕಾಂಗ್ರೆಸ್ಸಿಗೆ ಬಿಜೆಪಿ ತಿರುಗೇಟು

ನವದೆಹಲಿ, ಮೇ.28: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನೆ ಅವರ ವಿದ್ಯಾರ್ಹತೆ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ಮೃತಿ ಇರಾನಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ, ಅದರೆ, ಬಿಜೆಪಿ ನಾಯಕರು ಸೋನಿಯಾ ಗಾಂಧಿ ಅವರ ವಿದ್ಯಾರ್ಹತೆ ಏನು? ಎಂಬು ಪ್ರಶ್ನೆ ಎಸೆದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಮಾತ್ರ ಬಿಸಿಬಿಸಿ ಚರ್ಚೆ, ಪಕ್ಷದ ನಾಯಕರ ಪರಸ್ಪರ ಕೆಸರೆರಚಾಟ ಮುಂದುವರೆದಿದೆ.

ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ ಬಗ್ಗೆ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವೆ ಉಮಾ ಭಾರತಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ಸೋನಿಯಾ ಗಾಂಧಿ ಅವರ ವಿದ್ಯಾರ್ಹತೆ ಏನು? ರಾಹುಲ್ ಅವರಿಗೆ ಯಾವ ವಿವಿಯಿಂದ ಪದವಿ ಸಿಕ್ಕಿದೆ ಎಂಬುದು ಇನ್ನೂ ತಿಳಿಯುತ್ತಿಲ್ಲ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಇಂಥ ಹೇಳಿಕೆಗಳನ್ನು ನೀಡದಂತೆ ಸೋನಿಯಾ ಗಾಂಧಿ ಅವರು ತಮ್ಮ ಸಂಸದರಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ.

ಅಜಯ್ ಮಾಕೇನ್ ಅವರು, ಮೋದಿ ಸಂಪುಟ ಹೇಗಿದೆ ಗೊತ್ತಾ? ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನೆ ಒಂದು ಪದವಿ ಸಹ ಪಡೆದಿಲ್ಲ ಅದರೆ, ಮಾನವ ಸಂಪನ್ಮೂಲ ಖಾತೆ ಪಡೆದುಕೊಂಡಿದ್ದಾರೆ ಎಂದು ಟ್ವಿಟ್ ಮಾಡಿದ್ದರು.

ಸ್ಮೃತಿ ಇರಾನಿ ಅವರ ರಾಜ್ಯಸಭಾ ಬಯೋಡಾಟ

ಸ್ಮೃತಿ ಇರಾನಿ ಅವರ ರಾಜ್ಯಸಭಾ ಬಯೋಡಾಟ

ಸ್ಮೃತಿ ಇರಾನಿ ಅವರ ರಾಜ್ಯಸಭಾ ಬಯೋಡಾಟ ತೆಗೆದು ನೋಡಿದರೆ ದೆಹಲಿಯ ಹೋಲಿ ಚೈಲ್ಡ್ ಆಕ್ಸಿಲಿಯಂ ಹಾಗೂ ದೆಹಲಿ ವಿವಿಯಲ್ಲಿ ಕರೆಸ್ಪಾಂಡೆನ್ಸ್ ಮೂಲಕ ಪದವಿ ಪಡೆದುಕೊಂಡಿದ್ದೇನೆ ಎಂದು ನಮೂದಿಸಿದ್ದಾರೆ. ಅಫಿಡವಿಟ್ ಗೆ ಚುನಾವಣೆ ಆಯೋಗದ ಮುದ್ರೆಯೂ ಸಿಕ್ಕಿದೆ ಕಾಮರ್ಸ್ ವಿಭಾಗದ ಪದವಿಧರೆ 1994 ರ ಬ್ಯಾಚ್ ಎಂದು ಹೇಳಲಾಗಿದೆ.

ಮಹಿಳೆ ಎಂಬ ಕಾರಣಕ್ಕೆ ಸ್ಮೃತಿ ಮೇಲೆ ಪ್ರಹಾರ?

ಮಹಿಳೆ ಎಂಬ ಕಾರಣಕ್ಕೆ ಸ್ಮೃತಿ ಮೇಲೆ ಪ್ರಹಾರ?

ಇನ್ನು ಕೆಲವರು ಮಹಿಳೆ ಎಂಬ ಕಾರಣಕ್ಕೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿಲಾಗಿದೆ. ಕಾನೂನು ತಜ್ಞ ಅರುಣ್ ಜೇಟ್ಲಿ ಅವರು ಆರ್ಥಿಕ ತಜ್ಞರೇನಲ್ಲ. ಆದರೂ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಇನ್ನೂ ಚಹಾ ಮಾರಿ ಬೆಳೆದ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಯಾವುದೇ ವಿಶ್ವವಿದ್ಯಾಲಯದಿಂದ ಉನ್ನತ ಪದವಿ ಪಡೆದವರಲ್ಲ. ಹೀಗಿರುವಾಗ ಸ್ಮೃತಿ ಇರಾನಿ ವಿದ್ಯಾರ್ಹತೆ ಪ್ರಶ್ನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಲೇಖಕಿ ಮಧು ಅವರಿಂದ ಸ್ಮೃತಿ ಮೇಲೆ ಟ್ವೀಟ್ ದಾಳಿ

ಲೇಖಕಿ ಮಧು ಅವರು ಸ್ಮೃತಿ ಮೇಲೆ ಟ್ವೀಟ್ ದಾಳಿ ನಡೆಸಿ ಗ್ರಹಣಕ್ಕೆ ಹೋಲಿಸಿದ್ದಾರೆ.

ಲೇಖಕಿ ಮಧು ಅವರು ಸ್ಮೃತಿ ಮೇಲೆ ಟ್ವೀಟ್

ಲೇಖಕಿ ಮಧು ಅವರು ಸ್ಮೃತಿ ಮೇಲೆ ಟ್ವೀಟ್ ದಾಳಿ ಮುಂದುವರೆಸುತ್ತಾ

ಅಜಯ್ ಮಾಕೇನ್ ಟ್ವೀಟ್

ಅಜಯ್ ಮಾಕೇನ್ ಟ್ವೀಟ್ ಮಾಡಿ ಸ್ಮೃತಿಗೆ ನೀಡಿದ ಖಾತೆ ಬಗ್ಗೆ ಪ್ರಶ್ನಿಸಿದ್ದಾರೆ.

ಅಜಯ್ ಮಾಕೇನ್ ಎಷ್ಟು ಚಿನ್ನ ಗೆದ್ದಿದ್ದಾರೆ?

ಅಜಯ್ ಮಾಕೇನ್ ದೇಶದ ಎಷ್ಟು ಚಿನ್ನ ಗೆದ್ದಿದ್ದಾರೆ? ಕ್ರೀಡಾ ಸಚಿವ ಏಕೆ ಆಗಲಿಲ್ಲ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+