'ನರೇಂದ್ರ ಮೋದಿ ಗೆದ್ರೆ ಅರುಣ್ ಜೇಟ್ಲಿ ಉಪ ಪ್ರಧಾನಿ'
ಅಠಾರಿ (ಪಂಜಾಬ್), ಮಾರ್ಚ್ 22- ಇದು ಖುದ್ದು ಅರುಣ್ ಜೇಟ್ಲಿ ಅವರ ಆಲೋಚನೆಗೂ ಬಂದಿರಲಿಕ್ಕಿಲ್ಲ. ಆದರೆ ಅವರ ಪಕ್ಕದಲ್ಲೇ ಕುಳಿತು ಹಿರಿಯ ನಾಯಕರೊಬ್ಬರು 'ಅರುಣ್ ಜೇಟ್ಲಿ ಭವಿಷ್ಯದ ಡೆಪ್ಯುಟಿ ಪ್ರೈಂ ಮಿನಿಸ್ಟರ್' ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
ಹೌದು, ಅಮೃತಸರದ ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಅವರು ನಿನ್ನೆ ಶುಕ್ರವಾರ ಚುನಾವಣಾ ಪ್ರಚಾರಕ್ಕೆಂದು ಪಂಜಾಬಿಗೆ ತೆರಳಿದ್ದಾಗ ಅಲ್ಲಿ ಎನ್ ಡಿಎ ಮೈತ್ರಿಕೂಟದ ಸಹ ಪಕ್ಷವಾದ ಶಿರೋಮಣಿ ಅಕಾಲಿ ದಳದ ನಾಯಕ, 88 ವರ್ಷದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಈ ಮಾತನ್ನು ಹೇಳಿದ್ದಾರೆ.

Shiromani Akali Dal ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರ ಈ ಹೇಳಿಕೆ ಬಿಜೆಪಿ ಪಕ್ಷದಲ್ಲಿ ಸಂಚನವನ್ನುಂಟುಮಾಡಿದೆ. 'ಅಫ್ ಕೋರ್ಸ್, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದ್ದಾರಲ್ಲಾ ಅವರಿಗೆ ಒತ್ತಾಸೆಯಾಗಿ, ಹೆಗಲಿಗೆ ಹೆಗಲು ಕೊಡುತ್ತಿರುವ ನಾಯಕರ ಪೈಕಿ ಅರುಣ್ ಜೇಟ್ಲಿ ಅವರು ಹೆಸರು ಎರಡನೆಯದಾಗಿ ಕಾಣಿಸಿಕೊಳ್ಳುತ್ತದೆ.
ಮೊದಲನೆಯವರು, ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್. ಆದರೆ ಇದ್ದಕ್ಕಿಂದ್ದಂತೆ ಅರುಣ್ ಜೇಟ್ಲಿ ಅವರ ಹೆಸರನ್ನು ಮೈತ್ರಿ ಪಕ್ಷದ ಹಿರಿಯರೊಬ್ಬರು ಉಪಪ್ರಧಾನಿಯನ್ನಾಗಿ ಹೆಸರಿಸಿರುವುದು ಆಶ್ಚರ್ಯ ತಂದಿದೆ' ಎಂದು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. (ಸಿಕ್ಸರ್ ಸಿಧು ಚುನಾವಣೆ ಫೀಲ್ಡ್ ನಿಂದ ಹೊರಕ್ಕೆ!)
'ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವ ರು ಗೆದ್ದು ಬಂದರೆ ಅರುಣ್ ಜೇಟ್ಲಿ ಅವರು deputy prime minister ಅಥವಾ finance minister ಆಗುತ್ತಾರೆ' ಎಂದು ಮುಖ್ಯಮಂತ್ರಿ ಬಾದಲ್ ಅವರು ಹೇಳಿದ್ದಾರೆ. ಅಂದಹಾಗೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಅಮರಿಂದರ್ ಸಿಂಗ್ ಅವರು ಅರುಣ್ ಜೇಟ್ಲಿ ಎದುರಾಳಿ. ಅರುಣ್ ಜೇಟ್ಲಿ ಹುಟ್ಟಿ ಬೆಳೆದಿರುವುದು ಇದೇ ಅಮೃತಸರದಲ್ಲಿ.
[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಅಫ್ ಕೋರ್ಸ್, ಅರುಣ್ ಜೇಟ್ಲಿ ಅವರೇನೋ ವಾಜಪೇಯಿ ಸರಕಾರದಲ್ಲಿ ಕಾನೂನು, ವಾಣಿಜ್ಯ, ಬಂಡವಾಳ ಹಿಂತೆಗೆತ ಮುಂತಾದ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪಕ್ಷವನ್ನು ಅನೇಕ ಬಾರಿ ಆಂತರಿಕ ಸಂಕಷ್ಟಗಳಿಂದ ಪಾರು ಮಾಡಿದ್ದಾರೆ.
ಮೋದಿ ಪ್ರಧಾನಿಯಾದರೆ ಒಳ್ಳೆಯ ಖಾತೆ ಅರುಣ್ ಜೇಟ್ಲಿ ಹೆಗಲೇರುವುದು ಖಚಿತ. ಆದರೂ ಉಪ ಪ್ರಧಾನಿಯಾಗುವುದು!? ಏನೋಪ್ಪಾ ಎಂದು ಕರ್ನಾಟಕದ ಬಿಜೆಪಿ ಮುಖಂಡರೊಬ್ಬರು ಮಿನ ಮೇಲೆ ಬೆರಳಿಟ್ಟುಕೊಂಡು ಕೇಳಿದ್ದಾರೆ. 2003ರಲ್ಲಿ ಎಲ್ ಕೆ ಅಡ್ವಾಣಿ ಉಪಪ್ರಧಾನಿಯಾಗುವ ಮುನ್ನ ಅವರು ಸಾಕಷ್ಟು ಬೆವರಿಳಿಸಿದ್ದರು.












Click it and Unblock the Notifications