Holiday: ನಾಳೆ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಕಚೇರಿಗಳಿಗೆ ರಜೆ ಘೋಷಣೆ
Holiday: ಈಗಾಗಲೇ ಭಾರೀ ಮಳೆ ಹಿನ್ನೆಲೆ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿತ್ತು. ಇದೀಗ ಈ ಭಾಗಗಳಲ್ಲಿ ನಾಳೆ ಅಂದರೆ ನವೆಂಬರ್ 25ರಂದು ಸರ್ಕಾರಿ, ಖಾಸಗಿ ಶಾಲೆಗಳು ಹಾಗೂ ಕಚೇರಿಗಳು ಮುಚ್ಚಲ್ಪಡಲಿವೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಹಲವೆಡೆ ಮುಂಗಾರು ಮಳೆ ವೇಳೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಿಸಲಾಗಿತ್ತು. ಇದೀಗ ಚಳಿಗಾಳ ಆರಂಭವಾಗಿದ್ದು, ಹಲವೆಡೆ ಭಾರೀ ಶೀತಗಾಳಿ ಮುಂದುವರೆದಿದೆ. ಕಳೆದ ಬಾರಿ ಕೊರೆಯುವ ಚಳಿ ಹಿನ್ನೆಲೆ ಕರ್ನಾಟಕ ಹೊರತುಪಡಿಸಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ತಿಂಗಳುಗಟ್ಟಲೇ ರಜೆ ಘೋಷಣೆ ಮಾಡಲಾಗಿತ್ತು. ಈ ರಜೆಗಳನ್ನು ಸರಿದೂಗಿಸಲು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಕೂಡ ಆರಂಭಿಸಲಾಗಿತ್ತು.

ಸದ್ಯ ಇದೀಗ ಅಷ್ಟೊಂದು ಪ್ರಮಾಣದ ಚಳಿ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ಇದ್ದು, ಒಂದು ವೇಳೆ ಇಂತಹ ವಾತಾವರಣ ನಿರ್ಮಾಣ ಆದ್ರೆ ಶಾಲಾ-ಕಾಲೇಜುಗಳಿಗೆ ಕಳೆದ ಬಾರಿಯಂತೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ನಡುವೆಯೇ ಇದೀಗ ಹಲವು ರಾಜ್ಯಗಳಲ್ಲಿ ನವೆಂಬರ್ 25ರ ಮಂಗಳವಾರ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದ ಒಂಬತ್ತನೇ ಸಿಖ್ ಗುರು ಹಿಂದ್ ದಿ ಚಾದರ್ ಎಂದು ಕರೆಯಲ್ಪಡುವ ಗುರು ತೇಜ್ ಬಹದ್ದೂರ್ ಜಿ ಅವರ ಶಹೀದಿ ದಿವಸ್ ಅನ್ನು ನವೆಂಬರ್ 25ರಂದು ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಈ ದಿನದಂದು ಹಲವಾರು ಉತ್ತರ ಭಾರತದ ರಾಜ್ಯಗಳ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಜೊತೆಗೆ ಸರ್ಕಾರಿ ಕಚೇರಿಗಳು ಸಹ ಮುಚ್ಚಲ್ಪಡಲಿವೆ.
ಅವರ ಸ್ವಾತಂತ್ರ್ಯಕ್ಕೆ ಅತ್ಯುನ್ನತ ತ್ಯಾಗವನ್ನು ಗೌರವಿಸಲು ಹಲವು ರಾಜ್ಯ ಸರ್ಕಾರಗಳು ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚುವುದಾಗಿ ಘೋಷಣೆ ಮಾಡಿವೆ. ಈ ರಜೆಯಿಂದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ನವದೆಹಲಿ ಹಾಗೂ ಉತ್ತರಪ್ರದೇಶಗಳಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ರಾಜ್ಯವಾರು ರಜಾ ಪ್ರಕಟಣೆಗಳ ವಿವರ
* ದೆಹಲಿಯಲ್ಲಿ ಸರ್ಕಾರವು ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ನವೆಂಬರ್ 25 ಅನ್ನು ಸಾರ್ವಜನಿಕ ರಜಾ ದಿನವೆಂದು ಘೋಷಿಸಿದೆ. ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ಈ ರಜೆಗಳನ್ನು ಘೋಷಣೆ ಮಾಡಲಾಗಿಲ್ಲ. ಆದರೆ, ಅವರ ವೈಯಕ್ತಿಕವಾಗಿ ಶಾಲೆಗಳಿಗೆ ಘೋಷಣೆ ಮಾಡಬಹುದು. ಇನ್ನೂ ಈ ದಿನ ಮೆಟ್ರೋ, ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಅಗತ್ಯ ಸೇವೆಗಳು ಎಂದಿನಂತೆ ಇರಲಿವೆ.
* ಉತ್ತರ ಪ್ರದೇಶದಲ್ಲಿ ಸರ್ಕಾರವು ಕೂಡ ಗುರು ತೇಜ್ ಬಹದ್ದೂರ್ ಜಿ ಅವರ ಶಹೀದಿ ದಿವಸ್ ಹಿನ್ನೆಲ ನವೆಂಬರ್ 25ರಂದು ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಉತ್ತರ ಪ್ರದೇಶಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವಾತಂತ್ರ್ಯಕ್ಕೆ ಗುರು ತೇಜ್ ಬಹದ್ದೂರ್ ಅವರ ಧೈರ್ಯ ಮತ್ತು ತ್ಯಾಗದ ಬಗ್ಗೆ ತಿಳಿದುಕೊಳ್ಳಲು ಮನವಿ ಮಾಡಿದ್ದಾರೆ.
* ಹರಿಯಾಣ ರಾಜ್ಯದಲ್ಲಿ ನಿರ್ಬಂಧಿತ ರಜೆ ಘೋಷಿಸಿದ್ದು, ಈ ದಿನದಂದು ಶಾಲಾ-ಕಾಲೇಜುಗಳು, ಕಚೇರಿಗಳು ಮುಚ್ಚಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದು. ಅನೇಕ ಸರ್ಕಾರಿ ಶಾಲೆಗಳು ಮುಚ್ಚಲ್ಪಡಬಹುದು. ಖಾಸಗಿ ಶಾಲೆಗಳು ಐಚ್ಛಿಕ ದಿನ ರಜೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
* ಪಂಜಾಬ್‌ನಲ್ಲಿ ಗುರು ತೇಜ್ ಬಹದ್ದೂರ್ ಜಿ ಅವರ ಶಹೀದಿ ದಿವಸ್ ಹಿನ್ನೆಲೆ ನವೆಂಬರ್ 25ರಂದು ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಈ ದಿನ ಶಾಲೆಗಳಿಗೆ ರಜೆ ಘೋಷಣೆ ಮಾಡಬಹುದು. ಆದರೆ, ರಜೆ ಅಧಿಸೂಚನೆ ಅಧಿಕೃತವಾಗಿ ಇನ್ನೂ ಹೊರಬಿದ್ದಿಲ್ಲ.
ಇನ್ನೂ ಧೈರ್ಯಶಾಲಿ ಎಂದು ಗುರುತಿಸಿಕೊಂಡಿದ್ದ ಗುರು ತೇಜ್ ಬಹದ್ದೂರ್ ಜಿ 1675ರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಇವರನ್ನು ಶಾಂತಿ ಮತ್ತು ಸಮಾನತೆಯನ್ನು ಎತ್ತಿಹಿಡಿದ ಆಧ್ಯಾತ್ಮಿಕ ನಾಯಕ ಅಂತಲೂ ಕರೆಯಲಾಗುತ್ತದೆ.
ನವೆಂಬರ್ 25ರಂದು ಗುರು ತೇಜ್ ಬಹದ್ದೂರ್ ಜಿ ಅವರ ಶಹೀದಿ ದಿವಸ್ ಅವರ ಶೌರ್ಯ, ಮಾನವೀಯತೆ ಮತ್ತು ಸ್ವಾತಂತ್ರ್ಯಕ್ಕಾಗಿ ಪಣತೊಟ್ಟಿರುವ ಬಗ್ಗೆ ನೆನಪಿಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆ ನವೆಂಬರ್ 25ರಂದು ದೆಹಲಿ ಮತ್ತು ಉತ್ತರ ಪ್ರದೇಶ ಸರ್ಕಾರವು ಅಧಿಕೃತವಾಗಿ ಶಾಲೆಗಳಿಗೆ ಪೂರ್ಣ ರಜೆ ಘೋಷಿಸಿವೆ. ಆದರೆ, ಹರಿಯಾಣದಲ್ಲಿ ನಿರ್ಬಂಧಿತ ರಜೆ ಆಯ್ಕೆ ಮಾಡಿಕೊಂಡಿದೆ ಮತ್ತು ಪಂಜಾಬ್‌ನಲ್ಲಿ ಅಧಿಸೂಚನೆಗಳಿಗಾಗಿ ಕಾಯಲಾಗಿದೆ. ಈ ದಿನದಿಂದು ಮೇಲಿನ ಎಲ್ಲಾ ರಾಜ್ಯಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿದುಬಂದಿದೆ.












Click it and Unblock the Notifications