ಶಿವಲಿಂಗಕ್ಕೆ ಹಣೆ ಹಚ್ಚಿದ ಮುಸ್ಲಿಂ ಮಹಿಳೆಗೊಂದು ನಮಸ್ಕಾರ...

ಶಿವರಾತ್ರಿಯ ಭಕ್ತಿ ಭಾವ ಇಡೀ ದೇಶದಲ್ಲಿ ಕಾಣಿಸಿಕೊಂಡಿದೆ. ಕೆಜಿಎಫ್ ನ ಕೋಟಿ ಲಿಂಗೇಶ್ವರ ದೇವಾಲಯದಲ್ಲಿ ಶಿವ ಲಿಂಗಕ್ಕೆ ಹಣೆ ಹಚ್ಚಿನ ನಮಸ್ಕರಿಸುತ್ತಿರುವ ಈ ಮುಸ್ಲಿಂ ಮಹಿಳೆಯ ಫೋಟೋ ನೋಡಿ. ಸೌಹಾರ್ದತೆಯ ಪಾಠವೊಂದನ್ನು ಹೇಳುವಂತಿರುವ ಈ ಫೋಟೋಗೆ ಕಾಣಿಸಿಕೊಂಡ ಈ ಮಹಿಳೆಗೆ ಒಂದು ನಮಸ್ಕಾರವಿರಲಿ.

ಹೈದರಾಬಾದ್ ನ ಶ್ರೀನಿವಾಸ್ ಕುಚಿಬೊಟ್ಲಾ ಮನೆಯಲ್ಲಿ ದುಃಖದ ವಾತಾವರಣ ಎಂಥ ಕಲ್ಲು ಹೃದಯವನ್ನೂ ಕಲಕಿಬಿಡುತ್ತದೆ. ಅಮೆರಿಕದ ಕನ್ಸಾನ್ ನ ಬಾರ್ ನಲ್ಲಿ ಶ್ರೀನಿವಾಸ್ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಬೆಳೆದ ಮಗನ ಸಾವು, ಯಾವುದೇ ವಯಸ್ಸಿನಲ್ಲಿ ಕರುಳ ಕುಡಿ ಕಳೆದುಕೊಂಡರೂ ಅದು ದುಃಖವೇ. ಅದರೆ ಕೈಗೆ ಬಂದ ಮಗನನ್ನು ಕಳೆದುಕೊಂಡ ಆ ಪೋಷಕರ ದುಃಖ ಭಯಂಕರವಾದದ್ದು.[ಚಿತ್ರಗಳಲ್ಲಿ: ಶಿವರಾತ್ರಿ ಭಜನೆ, ಜಾಗರಣೆ, ಹಬ್ಬದ ಆಚರಣೆ]

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೈನಿಕರು ಜಮ್ಮು-ಕಾಶ್ಮೀರದ ಶ್ರೀನಗರ್ ನಲ್ಲಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಆ ಯೋಧನ ಮನೆಯ ಚಿತ್ರಣ ಕಣ್ಣ ಮುಂದೆ ಬಂದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ನಮ್ಮ ಹನುಮಂತಪ್ಪ ಕೊಪ್ಪದರ ನೆನಪಾಗುತ್ತದೆ. ಶಿವರಾತ್ರಿಯ ದಿನ ಹೃದಯ ಕರಗುವ, ದೇವರಿಗೆ ತಲೆ ಬಾಗಬೇಕು ಎನಿಸುವ ಕೆಲ ಫೋಟೋಗಳು ಇಲ್ಲಿವೆ.

ಮರೆಯಾದ ಮಗನ ದುಃಖ ಮರೆಯಲು ಮದ್ದೆಲ್ಲಿದೆ?

ಮರೆಯಾದ ಮಗನ ದುಃಖ ಮರೆಯಲು ಮದ್ದೆಲ್ಲಿದೆ?

ಅಮೆರಿಕದ ಕನ್ಸಾಸ್ ನ ಬಾರ್ ವೊಂದರಲ್ಲಿ ಗುಂಡಿಟ್ಟು ಕೊಲ್ಲಲಾದ ಶ್ರೀನಿವಾಸ್ ಕುಚಿಬೊಟ್ಲಾ ಹೈದರಾಬಾದ್ ಮೂಲದವರು. ಆತ ಎಂಜಿನಿಯರ್. ಮಗನನ್ನು ಕಳೆದುಕೊಂಡ ತಂದೆ-ತಾಯಿಯ ದುಃಖವನ್ನು ನೋಡಿದರೆ ಎಂಥವರ ಕರುಳನ್ನು ಹಿಂಡುವಂತಿತ್ತು. ಬೆಳೆದ, ಚೆನ್ನಾಗಿ ದುಡಿಯುತ್ತಿದ್ದ, ಹೆಮ್ಮೆ ಎನಿಸುವಂತಿದ್ದ ಮಗನನ್ನು ಕಳೆದುಕೊಂಡ ಪೋಷಕರ ದುಃಖಕ್ಕೆ ಎಲ್ಲಾದರೂ ಮದ್ದಿದೆಯಾ?

ಭಾರತದ ವೈಶಿಷ್ಟ್ಯವಿರುವುದೇ ಇಲ್ಲಿ...

ಭಾರತದ ವೈಶಿಷ್ಟ್ಯವಿರುವುದೇ ಇಲ್ಲಿ...

ಇದು ಭಾರತದ ವೈಶಿಷ್ಟ್ಯವನ್ನು ಎತ್ತಿ ಹಿಡಿಯುವ ಫೋಟೋ. ಶುಕ್ರವಾರ ಮಹಾಶಿವರಾತ್ರಿ ಸಂಭ್ರಮದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕೆಜಿಎಫ್ ನ ಕೋಟಿ ಲಿಂಗೇಶ್ವರ ದೇವಾಲಯದಲ್ಲಿ ಶಿವಲಿಂಗಕ್ಕೆ ಹಣೆ ಹಚ್ಚಿ ನಮಸ್ಕರಿಸಿದ ದೃಶ್ಯ. ಅದ್ಭುತವಾದ ಸಂದೇಶದಂತಿರುವ ಈ ಫೋಟೋಗೆ ಕಾರಣವಾಗಿರುವ ಮಹಿಳೆಗೂ ಒಂದು ನಮಸ್ಕಾರ.

ಸಿನಿಮಾ ಪ್ರಚಾರದಲ್ಲಿ ಕಂಗನಾ ರನೌತ್

ಸಿನಿಮಾ ಪ್ರಚಾರದಲ್ಲಿ ಕಂಗನಾ ರನೌತ್

ಚಿತ್ರ ನಟಿ ಕಂಗನಾ ರನೌತ್ ಮುಂಬೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಹೀಗೆ.

ಭಕ್ತಿ ಸಮರ್ಪಣೆ

ಭಕ್ತಿ ಸಮರ್ಪಣೆ

ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಂಗಳೂರಿನ ಶಿವ ದೇವಾಲಯದಲ್ಲಿ ಭಕ್ತರು ಭಕ್ತಿ ಸಮರ್ಪಿಸಿದ ಕ್ಷಣ.

ವೀರಯೋಧನಿಗೆ ಇಗೋ ಸಲಾಂ

ವೀರಯೋಧನಿಗೆ ಇಗೋ ಸಲಾಂ

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ಗುಲಾಮ್ ಮೊಹಿಯುದ್ದೀನ್ ಅವರಿಗೆ ಶುಕ್ರವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಂತಿಮ ನಮನ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+