ಯಮುನಾ ನದಿ ವಲಸೆ ಹಕ್ಕಿಗಳು, ಮಸಿ ಬಳಿದ ಬೆರಳುಗಳು

Posted By:
Subscribe to Oneindia Kannada
ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋಗೆ ಹೋಗಿಲ್ವಾ? ಫೆಬ್ರವರಿ 18ರವರೆಗೆ ನಡೆಯುತ್ತದೆ. ಬುಧವಾರ ಎರಡನೇ ದಿನದ ಪ್ರದರ್ಶನದಲ್ಲಿ ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಭಾಗವಹಿಸಿ, ರಫೆಲ್ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಯೋಗಗುರು ಬಾಬಾ ರಾಮ್ ದೇವ್ ಮತದಾನ ಮಾಡಿದ್ದಾರೆ.

ಇನ್ನು ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಮದುವೆಮನೆಯಿಂದ ಸೀದಾ ಮತದಾನ ಕೇಂದ್ರಕ್ಕೆ ತೆರಳಿದ ನವ ವಿವಾಹಿತರು ಮತ ಹಾಕಿದ್ದಾರೆ. ವಾಹ್, ಎಂಥ ಕರ್ತವ್ಯ ಪ್ರಜ್ಞೆ ರೀ! ಕೆಲವರು ಹೇಗೆಂದರೆ ಚುನಾವಣೆ ದಿನವೇ ಪ್ರವಾಸ ನಿಗದಿ ಮಾಡಿಕೊಳ್ತಾರೆ. ಈ ಜೋಡಿಗಳಿಗೆ ಎಲ್ಲ ವಿನಾಯ್ತಿ ಸಿಗುವ ಸಾಧ್ಯತೆಯಿದ್ದರೂ ತಮ್ಮ ಜವಾಬ್ದಾರಿ ಪೂರೈಸಿದ್ದಾರೆ.[ವಿಶ್ವದಾಖಲೆ ಬರೆದ ಇಸ್ರೊಗೆ ಟ್ವಿಟ್ಟರಿನಲ್ಲಿ ಅಭಿನಂದನೆಗಳ ಮಹಾಪೂರ]

ಇಸ್ರೋದಿಂದ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾಯಿಸಲಾಗಿದೆ. ಈಚೆಗೆ ಪಾಕಿಸ್ತಾನದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟವರ ಕುಟುಂಬದ ದುಃಖತಪ್ತ ಸನ್ನಿವೇಶ...ಹೀಗೆ ದೇಶ-ವಿದೇಶದ ಆಸಕ್ತಿಕರ ಫೋಟೋಗಳು ನಿಮ್ಮೆದುರಿಗಿವೆ.

ಏರ್ ಶೋನಲ್ಲಿ ಅನಿಲ್ ಅಂಬಾನಿ

ಏರ್ ಶೋನಲ್ಲಿ ಅನಿಲ್ ಅಂಬಾನಿ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2017ರ ಎರಡನೇ ಅಂದರೆ ಫೆಬ್ರವರಿ 15ರಂದು ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ರಫೆಲ್ ವಿಮಾನದ ಕಾಕ್ ಪಿಟ್ ನಲ್ಲಿ ಹತ್ತಿಕೂರುವ ಕ್ಷಣದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ವಲಸೆ ಹಕ್ಕಿಗಳ ಸಂಭ್ರಮ

ವಲಸೆ ಹಕ್ಕಿಗಳ ಸಂಭ್ರಮ

ನವದೆಹಲಿಯ ಯಮುನಾ ನದಿಯಲ್ಲಿ ಈಗ ವಲಸೆ ಹಕ್ಕಿಗಳ ಸಂಭ್ರಮ ಕಂಡುಬರುತ್ತಿದೆ. ದೋಣಿಯಲ್ಲಿ ಬಂದು ಅವುಗಳಿಗೆ ಕಾಳು ಉಣಿಸುವ ಮನಮೋಹಕ ದೃಶ್ಯ ಬುಧವಾರ ಕಣ್ಸೆಳೆಯುತ್ತಿತ್ತು.

104 ಉಪಗ್ರಹ ಉಡಾವಣೆ

104 ಉಪಗ್ರಹ ಉಡಾವಣೆ

ಭಾರತದ ಭೂ ವೀಕ್ಷಣಾ ಉಪಗ್ರಹವೂ ಸೇರಿದಂತೆ ದಾಖಲೆಯ ನೂರಾನಾಲ್ಕು ಉಪಗ್ರಹಗಳನ್ನು ಏಕಕಾಲಕ್ಕೆ ಇಸ್ರೋ ಶ್ರೀಹರಿ ಕೋಟಾದಿಂದ ಬುಧವಾರ ಯಶಸ್ವಿಯಾಗಿ ಉಡಾಯಿಸಿತು.

ಸಿನಿಮಾ ಉತ್ಸವದಲ್ಲಿ ಪೋಸ್

ಸಿನಿಮಾ ಉತ್ಸವದಲ್ಲಿ ಪೋಸ್

ಜರ್ಮನಿಯ ಬರ್ಲಿನ್ ನಲ್ಲಿ ನಡೆದ ಸಿನಿಮಾ ಉತ್ಸವದಲ್ಲಿ ನಟಿ ಸಿಯೆನ್ನಾ ಮಿಲ್ಲರ್ ರೆಡ್ ಕಾರ್ಪೆಟ್ ಮೇಲೆ 'ದ ಲಾಸ್ಟ್ ಸಿಟಿ ಆಫ್ ಝಡ್' ಸಿನಿಮಾಗೆ ಮಾಧ್ಯಮಗಳಿಗೆ ಪೋಸ್ ನೀಡಿದರು.

ಮೊದಲ ಮತದಾನದ ಪುಳಕ

ಮೊದಲ ಮತದಾನದ ಪುಳಕ

ಒಡಿಶಾದ ಕೋರ್ದಾದ ಎರಡನೇ ಹಂತದ ಪಂಚಾಯಿತಿ ಚುನಾವಣೆಯ ಮತದಾನದ ವೇಳೆ ಮೊದಲ ಬಾರಿಗೆ ವೋಟು ಹಾಕಿದ ಹೆಣ್ಣುಮಗಳೊಬ್ಬಳು ತನ್ನ ಬೆರಳಿಗೆ ಹಾಕಿದ ಶಾಯಿಯನ್ನು ತೋರುತ್ತಾ ಸೆಲ್ಫಿ ತೆಗೆದುಕೊಂಡಳು

ಬಿದಿರಿನ ಸೇತುವೆ ದಾಟುವ ಸಾಹಸ

ಬಿದಿರಿನ ಸೇತುವೆ ದಾಟುವ ಸಾಹಸ

ಅಸ್ಸಾಂನ ಕಾಮ್ ರೂಪ್ ಜಿಲ್ಲೆಯ ಉಮ್ತೊಳಿ ಹಳ್ಳಿಯಿಂದ ಉಕಿಯಂಗೆ ಹೊರಟ ಮಹಿಳೆ-ಮಕ್ಕಳು ಬಿದಿರಿನ ಸೇತುವೆ ಮೇಲೆ ದಾಟುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಬಾಬಾ ಮತದಾನ

ಬಾಬಾ ಮತದಾನ

ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಹರಿದ್ವಾರದಲ್ಲಿ ಮತ ಹಾಕಿದ ನಂತರ ಯೋಗಗುರು ಬಾಬಾ ರಾಮ್ ದೇವ್ ತಮ್ಮ ಬೆರಳಿಗೆ ಹಾಕಿದ ಶಾಯಿಯನ್ನು ತೋರಿಸಿದರು

ನವವಿವಾಹಿತರಿಂದ ಮತದಾನ

ನವವಿವಾಹಿತರಿಂದ ಮತದಾನ

ಉತ್ತರಪ್ರದೇಶದ ವಿಧಾನಸಭೆಯ ಎರಡನೇ ಹಂತದ ಚುನಾವಣೆ ವೇಳೆ ಬುಧವಾರ ನವವಿವಾಹಿತರು ರಾಯ್ ಬರೇಲಿ ಕ್ಷೇತ್ರದಲ್ಲಿ ಮತದಾನದ ನಂತರ ತಮ್ಮ ಕೈ ಬೆರಳಿಗೆ ಹಾಕಿದ್ದ ಶಾಯಿಯನ್ನು ತೋರಿಸಿದರು.

ಅಣೆಕಟ್ಟು ಒಡೆದ ಮೇಲೆ...

ಅಣೆಕಟ್ಟು ಒಡೆದ ಮೇಲೆ...

ಅಮೆರಿಕದ ಆರೋವಿಲ್ಲೆಯಲ್ಲಿ ಫೆದರ್ ನದಿಗೆ ಕಟ್ಟಿರುವ ಅಣೆಕಟ್ಟು ಒಡೆದು ಧಾರಾಕಾರವಾಗಿ ನೀರು ಹರಿಯಿತು. ಸೇತುವೆ ಕೆಳ ಭಾಗದಲ್ಲಿ ವಾಸಿಸುವ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದರು. ಅಣೆಕಟ್ಟು ದುರಸ್ತಿಗೆ ತುರ್ತು ಕ್ರಮ ಕೈಗೊಂಡರು.

ಮೃತರ ಸಂಬಂಧಿಕರ ದುಃಖ

ಮೃತರ ಸಂಬಂಧಿಕರ ದುಃಖ

ಪಾಕಿಸ್ತಾನದ ಲಾಹೋರ್ ನಲ್ಲಿ ಸೋಮವಾರ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು. ಈ ವೇಳೆ ಮೃತರ ಸಂಬಂಧಿಕರು ತಮ್ಮ ದುಃಖ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
National and international events with a major theme Assembly election represent through PTI photos. Important news about Aero India 2017, ISRO satellite launch etc
Please Wait while comments are loading...