11 ಸಾವಿರ ಕೋಟಿಯಲ್ಲ ಬ್ಯಾಂಕುಗಳು ಕಳೆದುಕೊಂಡಿದ್ದು 22,743 ಕೋಟಿ!
ನವದೆಹಲಿ, ಫೆಬ್ರವರಿ 17: ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿರುವ ಪ್ರಕರಣ ವರದಿಯಾಗಿರುವ ಬೆನ್ನಲ್ಲೇ ಸಾರ್ವಜನನಿಕ ರಂಗದ ಬ್ಯಾಂಕುಗಳು 22 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಕಲೆವು ದಿನಗಳ ಹಿಂದೆ ಸಂಸತ್ತಿನಲ್ಲಿ ಆರ್.ಬಿ.ಐ ವರದಿಯನ್ನು ಉಲ್ಲೇಖಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ವಂಚನೆಯ ಚಟುವಟಿಕೆಗಳಿಂದ ಸಾರ್ವಜನಿಕ ರಂಗದ ಬ್ಯಾಂಕುಗಳು 2012ರಿಂದ 2016ರ ನಡುವೆ 22,743 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.
2017ರಲ್ಲಿ ಡಿಸೆಂಬರ್ 21ರವರೆಗೆ 25,600 ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿದ್ದು179 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, "ಉನ್ನತ ಮಟ್ಟದ ಸಹಕಾರವಿಲ್ಲದೆ 22,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಹಗರಣ ನಡೆಯಲು ಸಾಧ್ಯವಿಲ್ಲ. ಸರಕಾರಿ ಮಟ್ಟದಲ್ಲಿರುವವರಿಗೆ ಈ ಹಗರಣಗಳ ಬಗ್ಗೆ ಗೊತ್ತಿಲ್ಲದೆ ಇರಲು ಸಾಧ್ಯವೇ ಇಲ್ಲ. ಆದರೆ ಪ್ರಧಾನಿ ಮುಂದೆ ಬಂದು ಉತ್ತರ ನೀಡುತ್ತಿಲ್ಲ," ಎಂದು ಆರೋಪಿಸಿದ್ದಾರೆ.












Click it and Unblock the Notifications