ಶ್ರೀರಾಮನಿಗೆ ನಿಯಮಗಳು, ಆರೆಸ್ಸೆಸ್‌ಗೆ ವಿನಾಯಿತಿಯೇ; ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ, ನೆಟ್ಟಿಗರು ಹೇಳಿದ್ದೇನು ?

ಶ್ರೀರಾಮನಿಗೆ ನಿಯಮಗಳು, ಆರೆಸ್ಸೆಸ್‌ಗೆ ವಿನಾಯಿತಿಯೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಅವರು ಪ್ರಶ್ನೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದು, ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಶ್ರೀರಾಮನಿಗೆ ನಿಯಮಗಳು, ಆರೆಸ್ಸೆಸ್‌ಗೆ ವಿನಾಯಿತಿಯೇ? ರಾಮಲಲ್ಲಾನ ದೇವಸ್ಥಾನದ ಲೆಕ್ಕಪತ್ರವನ್ನೇ ನೀಡಬೇಕಾದ ಈ ದೇಶದಲ್ಲಿ, ಆರೆಸ್ಸೆಸ್ ಸಂಗ್ರಹಿಸುವ ಕೋಟ್ಯಂತರ ರೂಪಾಯಿ 'ಗುರುದಕ್ಷಿಣೆ'ಗೆ ಯಾವುದೇ ಲೆಕ್ಕವಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.

Priyank Kharge Questions RSS Donations and Special Exemptions Faces Netizens Backlash

ಮುಂದುವರಿದು ಭಗವಾ ಧ್ವಜದ ಹೆಸರಿನಲ್ಲಿ ನಗದು ರೂಪದಲ್ಲಿ ದೇಣಿಗೆ ಪಡೆಯುವ ಆರೆಸ್ಸೆಸ್'ಗೆ ಐಟಿ ಮತ್ತು ಇಡಿ ಯಾವುದೇ ಪ್ರಶ್ನೆ ಕೇಳುವುದಿಲ್ಲ. ಅದೇ ಬೇರೆ ಯಾರಾದರೂ ಸ್ವಯಂಸೇವಕ ಸಂಘ ಕಟ್ಟಿ ಧ್ವಜದ ಹೆಸರಿನಲ್ಲಿ ಗುರುದಕ್ಷಿಣೆ ಸಂಗ್ರಹಿಸಿದರೆ ತಕ್ಷಣವೇ ತನಿಖೆ ಶುರುವಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಆದರೆ ಆರೆಸ್ಸೆಸ್‌ಗೆ ಮಾತ್ರ ವಿಶೇಷ ವಿನಾಯಿತಿ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಚುನಾವಣಾ ಆಯೋಗದ ಬಗ್ಗೆ ಬಿಜೆಪಿ ಸಮರ್ಥನೆ ಯಾಕೆ ?

ಮುಂದುವರಿದು ನಾವು ಚುನಾವಣಾ ಆಯೋಗವನ್ನು ಪ್ರಶ್ನಿಸಿದರೆ, ಉತ್ತರ ನೀಡಲು ಬಿಜೆಪಿಯವರೇ ಮುಂದೆ ಬರುತ್ತಾರೆ. ಚುನಾವಣಾ ಆಯೋಗ ಅಥವಾ ಮುಖ್ಯ ಚುನಾವಣಾ ಆಯುಕ್ತರನ್ನು ನಾವು ಪ್ರಶ್ನಿಸಿದರೆ, ಆಯೋಗಕ್ಕಿಂತ ಹೆಚ್ಚಾಗಿ ಬಿಜೆಪಿಯವರಿಗೇ ನೋವಾಗುತ್ತದೆ. ಆಯೋಗದ ಬಗ್ಗೆ ಪ್ರಶ್ನೆ ಎದ್ದ ತಕ್ಷಣ ಇಡೀ ಬಿಜೆಪಿ ಟ್ರೋಲ್ ಪಡೆ ಆಯೋಗದ ಪರವಾಗಿ ಸಕ್ರಿಯವಾಗುತ್ತದೆ. ಏಕೆಂದರೆ, ನೇರ ಪ್ರಶ್ನೆಗಳಿಗೆ ಉತ್ತರ ನೀಡಲು ಆಯೋಗಕ್ಕೆ ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ.

ಸ್ವತಂತ್ರವಾಗಿರಬೇಕಾದ ಚುನಾವಣಾ ಆಯೋಗದ ಪರವಾಗಿ ಬಿಜೆಪಿ ಇಷ್ಟೊಂದು ಆತುರದಲ್ಲಿ ಸಮರ್ಥನೆಗೆ ಇಳಿಯುವುದೇಕೆ, ಜನರ ಪ್ರಶ್ನೆಗಳಿಗೆ ಉತ್ತರ ಸಿಗಬೇಕಲ್ಲವೇ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.

ಆರೆಸ್ಸೆಸ್ ಪರವೂ ಅದೇ ಲಾಬಿಸ್ಟ್ ಏಕೆ: ಪ್ರಿಯಾಂಕ್ ಖರ್ಗೆ

ಇನ್ನು ಪಾಕಿಸ್ತಾನದ ಪರವೂ ಅದೇ ಲಾಬಿಸ್ಟ್, ಆರೆಸ್ಸೆಸ್ ಪರವೂ ಅದೇ ಲಾಬಿಸ್ಟ್ ಏಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ದೇಶಭಕ್ತಿಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವವರು, ಅಮೆರಿಕದಲ್ಲಿ ಪಾಕಿಸ್ತಾನದ ಪರವಾಗಿ ಕೆಲಸ ಮಾಡಿದ ಲಾಬಿಸ್ಟ್‌ನ್ನೇ ಏಕೆ ಆಯ್ಕೆ ಮಾಡಿಕೊಂಡರು? ದೇಶಭಕ್ತಿಯ ಪ್ರಮಾಣಪತ್ರ ಹಂಚುವವರು ಮೊದಲು ತಮ್ಮ ವಿದೇಶಿ ಲಾಬಿಸ್ಟ್ ವ್ಯವಹಾರದ ಲೆಕ್ಕವನ್ನು ದೇಶದ ಜನರ ಮುಂದಿಡಬೇಕು ಎಂದೂ ಕೇಳಿದ್ದಾರೆ.

ನೆಟ್ಟಿಗರು ಹೇಳಿದ್ದೇನು ?

ದೇಣಿಗೆ ಕೊಟ್ಟವರು ಮಾತಾಡಲಿ, ಆರ್‌ಎಸ್‌ಎಸ್ ಲೆಕ್ಕ ಕೇಳಲು ಇವರು ಯಾರು, ಏನಾಯ್ತು RSS ರಿಜಿಸ್ಟ್ರೇಷನ್ ಕತೆ ಎಂದೂ ಕೆಲವರು ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+