ಖಾಸಗಿ ವಲಯಕ್ಕೆ ದೇಶದ ಪ್ರಮುಖ 6 ವಿಮಾನ ನಿಲ್ದಾಣಗಳು

ನವದೆಹಲಿ, ಅ 23: ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ದೇಶದ ಪ್ರಮುಖ ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಈ ಆರೂ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸ ಬೇಕಾಗಿರುವುದರಿಂದ ಖಾಸಗೀಕರಣ ಅನಿವಾರ್ಯ ಎನ್ನುವ ನಿರ್ಣಯಕ್ಕೆ ಪ್ರಾಧಿಕಾರ ಬಂದಿದೆ.

ನಾಗರಿಕ ವಿಮಾನಯಾನ ಸಚಿವಾಲಯ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಮುನ್ನ ಆರು ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆ ಮುಗಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಚುನಾವಣೆಗೆ ಮುನ್ನ ಟೆಂಡರ್, ಬಿಡ್ ಪ್ರಕ್ರಿಯೆ ಮುಗಿಸಿ ಖಾಸಗಿ ಕಂಪೆನಿಗೆ ವಿಮಾನ ನಿಲ್ದಾಣವನ್ನು ಹಸ್ತಾಂತರಿಸುವ ವಿಶ್ವಾಸದಲ್ಲಿದ್ದೇವೆ ಎಂದು ಸಚಿವಾಲಯದ ಕಾರ್ಯದರ್ಶಿ ಕೆ ಎನ್ ಶ್ರೀವಾಸ್ತವ ಹೇಳಿದ್ದಾರೆ.

ನೌಕರರ ಪ್ರತಿಭಟನೆ: ಕೇಂದ್ರ ಸರಕಾರದ ಖಾಸಗೀಕರಣ ನಿರ್ಧಾರ ವಿರೋಧಿಸಿ ವಿಮಾನ ಪ್ರಾಧಿಕಾರದ ಸಿಬ್ಬಂದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ಮಂದಿ ಸಿಬ್ಬಂದಿಗಳು ಮಂಗಳವಾರದಿಂದಲೇ (ಅ 22) ದೆಹಲಿಯ ರಾಜೀವ್ ಗಾಂಧಿ ಭವನದ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೇಂದ್ರ ಸರಕಾರ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕು. ಇದರಿಂದ ಪ್ರಾಧಿಕಾರದ ಲಕ್ಷಾಂತರ ಕುಟುಂಬಗಳ ಬದುಕು ಅತಂತ್ರವಾಗುತ್ತದೆ ಎಂದು ಪ್ರಾಧಿಕಾರದ ನೌಕರರ ಮಂಡಳಿ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.

ಖಾಸಗೀಕರಣಗೊಳ್ಳಲಿರುವ ಆರು ವಿಮಾನ ನಿಲ್ದಾಣಗಳು

ಚೆನ್ನೈ

ಚೆನ್ನೈ

1952ರಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಈ ವಿಮಾನ ನಿಲ್ದಾಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. 2015 ಕೋಟಿ ರೂಪಾಯಿ ವೆಚ್ಚದಲ್ಲಿ ಚೆನ್ನೈ ವಿಮಾನ ನಿಲ್ದಾಣ ಆಧುನೀಕರಣಗೊಳ್ಳಲಿದೆ.

ಕೊಲ್ಕತ್ತಾ

ಕೊಲ್ಕತ್ತಾ

1670 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೊಲ್ಕತ್ತಾ ವಿಮಾನ ನಿಲ್ದಾಣ 2325 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳ್ಳಲಿದೆ.

ಜೈಪುರ

ಜೈಪುರ

ಇಲ್ಲಿನ ಸಂಗನೀರ್ ವಿಮಾನ ನಿಲ್ದಾಣ ನಗರದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿದೆ. ಡಿಸೆಂಬರ್ 2005ರಲ್ಲಿ ಈ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮನ್ನಣೆ ಸಿಕ್ಕಿತು.

ಅಹಮದಾಬಾದ್

ಅಹಮದಾಬಾದ್

ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿ ಇಲ್ಲಿನ ಸರ್ದಾರ್ ವಲ್ಲಭಾಭಾಯಿ ಪಟೇಲ್ ವಿಮಾನ ನಿಲ್ದಾಣವಿದೆ. ಈ ನಿಲ್ದಾಣದಲ್ಲಿ ನಾಲ್ಕು ಟರ್ಮಿನಲ್ ಗಳಿವೆ.

ಲಕ್ನೋ

ಲಕ್ನೋ

ಲಕ್ನೋ ರೈಲು ನಿಲ್ದಾಣದಿಂದ ಹನ್ನೊಂದು ಕಿಲೋಮೀಟರ್ ದೂರದಲ್ಲಿ ಈ ವಿಮಾನ ನಿಲ್ದಾಣವಿದೆ (ಚೌಧುರಿ ಚರಣ ಸಿಂಗ್ ವಿಮಾನ ನಿಲ್ದಾಣ). ಅಕ್ಟೋಬರ್ 2012ರಲ್ಲಿ ಕೇಂದ್ರ ಸರಕಾರ ಈ ನಿಲ್ದಾಣಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮನ್ನಣೆ ನೀಡಿತು.

ಗುವಹಾಟಿ

ಗುವಹಾಟಿ

ಇಲ್ಲಿನ ಲೋಕಪ್ರಿಯ ಗೋಪಿನಾಥ್ ಬರ್ದೋಲಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಬೋರ್ಜಾರ್ ನಲ್ಲಿರುವ ಈ ವಿಮಾನ ನಿಲ್ದಾಣ ವಾಯು ಪಡೆಯ ಬೇಸ್ ಕೂಡಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+