• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿ

|

ಡೆಹರಾಡೂನ್, ಅಕ್ಟೋಬರ್ 8: ದೇಶಕ್ಕೆ ಗುಜರಾತ್ ಮಾದರಿ ಆಡಳಿತವನ್ನು ನೀಡುತ್ತೇವೆ ಎನ್ನುವುದು ವಿವಿಧ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ನೀಡುವ ಭರವಸೆ. ಈ ಹಿಂದೆ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಾಗಲೂ ಮುಖ್ಯಮಂತ್ರಿಗಳು ಇದೇ ರೀತಿ ವಾಗ್ದಾನ ಮಾಡಿದ್ದರು.

ಬಿಜೆಪಿ ನಾಯಕರಿಗೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗಿನ ಗುಜರಾತ್ ಮಾದರಿಯಾದರೆ, ಮೋದಿ ಅವರಿಗೆ ದಕ್ಷಿಣ ಕೊರಿಯಾ ಮಾದರಿ.

ಜ್ಯೋತಿಷ್ಯ ವಿಶ್ಲೇಷಣೆ: ರಷ್ಯಾ, ಅಮೆರಿಕ ಪೈಕಿ ಮೋದಿ ಆಯ್ಕೆ ಯಾವುದಿರಲಿ?

ಹೀಗೆಂದು ಸ್ವತಃ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಉತ್ತರಾಖಂಡದ ಡೆಹರಾಡೂನ್‌ನಲ್ಲಿ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮೋದಿ, 2001ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸುವ ಬಯಕೆ ಹೊಂದಿದ್ದನ್ನು ಹೇಳಿಕೊಂಡಿದ್ದಾರೆ.

ಜಗತ್ತಿನ ಅನೇಕ ದೇಶಗಳಿಗಿಂತ ನಮ್ಮ ರಾಜ್ಯಗಳು ಹೆಚ್ಚು ಶಕ್ತಿಯುತವಾಗಿವೆ. ಅನೇಕ ಸಣ್ಣ ದೇಶಗಳಿಗೆ ಹೋಲಿಸಿದರೆ, ನಮ್ಮ ರಾಜ್ಯಗಳು ಹೆಚ್ಚು ಸಾಮರ್ಥ್ಯ ಹೊಂದಿವೆ ಎಂದು ಮೋದಿ ಹೇಳಿದ್ದಾರೆ.

ಸರ್ಕಾರ ಏನೆಂಬುದೇ ಗೊತ್ತಿರಲಿಲ್ಲ

ಸರ್ಕಾರ ಏನೆಂಬುದೇ ಗೊತ್ತಿರಲಿಲ್ಲ

'2001ರ ಅಕ್ಟೋಬರ್ 1ರಂದು ನಾನು ಮೊದಲ ಸಲ ಮುಖ್ಯಮಂತ್ರಿಯಾದಾಗ ಸರ್ಕಾರ ಎಂದರೆ ಏನು ಎಂಬುದು ನನಗೆ ಗೊತ್ತಿರಲಿಲ್ಲ. ನನಗೆ ಅನುಭವದ ಕೊರತೆಯಿತ್ತು ಎಂಬುದು ಇನ್ನೂ ನೆನಪಿದೆ. ನಾನು ಸಂಪೂರ್ಣ ಹೊಸಬನಾಗಿದ್ದೆ. ಪತ್ರಕರ್ತರೊಬ್ಬರು ನನ್ನ ಬಳಿ ಬಂದು ಕೇಳುತ್ತಿದ್ದ ಪ್ರಶ್ನೆಗಳಿಗೆ ನಾನು ನೀಡುತ್ತಿದ್ದ ಉತ್ತರಗಳು ಮುಖ್ಯಮಂತ್ರಿಯಾಗಿ ನನ್ನ ಪಯಣ ಶುರುವಾಗಲು ಅನುವು ಮಾಡಿಕೊಡದಂತೆ ಮಾಡುತ್ತಿದ್ದವು' ಎಂದು ಹೇಳಿದ್ದಾರೆ.

ನಮ್ಮನ್ನು ತಡೆಯುವವರೇ ಇಲ್ಲ

ನಮ್ಮನ್ನು ತಡೆಯುವವರೇ ಇಲ್ಲ

ಗುಜರಾತ್ ಅಭಿವೃದ್ಧಿಗೆ ಯಾರನ್ನು ಮಾದರಿಯನ್ನಾಗಿ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆ ಎದುರಾಯಿತು. ಸಾಮಾನ್ಯವಾಗಿ ಜನರು ಇಂತಹ ಪ್ರಶ್ನೆಗಳು ಕೇಳಿದಾಗ, ಕೆಲವರು 'ನಾನು ಅಮೆರಿಕ ಅಥವಾ ಇಂಗ್ಲೆಂಡ್‌ನಂತೆ ಮಾಡಲು ಬಯಸುತ್ತೇನೆ ಎನ್ನುತ್ತಾರೆ. ಆದರೆ ನಾನು ವಿಭಿನ್ನವಾದ ಉತ್ತರ ನೀಡಿದೆ. ನಾನು ಗುಜರಾತ್ ಅನ್ನು ದಕ್ಷಿಣ ಕೊರಿಯಾದಂತೆ ಮಾಡಲು ಬಯಸಿದ್ದಾಗಿ ಹೇಳಿದೆ. ಆ ಪತ್ರಕರ್ತನಿಗೆ ಏನೂ ತಿಳಿದಿರಲಿಲ್ಲ. ಬಳಿಕ ನಾನು ವಿವರಿಸಿದೆ. ಗುಜರಾತ್ ಮತ್ತು ದಕ್ಷಿಣ ಕೊರಿಯಾ ಎರಡರ ಜನಸಂಖ್ಯೆ ಒಂದೇ ರೀತಿಯಿದೆ. ಈ ನಿಟ್ಟಿನಲ್ಲಿ ನಾವು ಮುಂದುವರಿದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂಬುದನ್ನು ನಾನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾಗಿ ತಿಳಿಸಿದ್ದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡ ಮೋದಿ

ತೆರಿಗೆ ವ್ಯವಸ್ಥೆ ಸುಧಾರಣೆ

ತೆರಿಗೆ ವ್ಯವಸ್ಥೆ ಸುಧಾರಣೆ

ದೇಶದಲ್ಲಿ ಉದ್ಯಮ ವ್ಯವಹಾರ ಪ್ರಕ್ರಿಯೆಗಳು ಸರಾಗವಾಗಿ ನಡೆಯಲು ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ದೇಶದ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ತೆರಿಗೆ ವ್ಯವಸ್ಥೆಯನ್ನು ತ್ವರಿತ ಮತ್ತು ಪಾರದರ್ಶಕವನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ. ನಷ್ಟ ಮತ್ತು ದಿವಾಳಿತನದ ಸಂಹಿತೆಯಿಂದಾಗಿ ವ್ಯವಹಾರ ನಡೆಸುವುದು ಈಗ ಸುಲಭವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನೂ ಬಲಪಡಿಸಲಾಗಿದೆ. ಸಾಮರ್ಥ್ಯ, ನೀತಿ ಮತ್ತು ಪ್ರದರ್ಶನ (ಪೊಟೆನ್ಷಿಯಲ್, ಪಾಲಿಸಿ, ಪರ್ಫಾರ್ಮೆನ್ಸ್) ಇವು ಪ್ರಗತಿಯ (ಪ್ರೋಗ್ರೆಸ್) ಮೂಲಗಳು.

ಅಂಬಾನಿಯ ವಿಮಾ ಕಂಪೆನಿಗೂ ಮೋದಿ ಸರ್ಕಾರದ ನೆರವು? ಮತ್ತೊಂದು ವಿವಾದ

ಕೃಷಿಯಲ್ಲಿ ಹೂಡಿಕೆ ಮಾಡಿ

ಕೃಷಿಯಲ್ಲಿ ಹೂಡಿಕೆ ಮಾಡಿ

400 ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು 100 ವಿಮಾನ ನಿಲ್ದಾಣಗಳು ಹಾಗೂ ಹೆಲಿಪ್ಯಾಡ್‌ಗಳ ನಿರ್ಮಾಣದತ್ತ ಕೇಂದ್ರ ಸಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯು ವೈದ್ಯಕೀಯ ವಲಯದಲ್ಲಿ ಭಾರಿ ಹೂಡಿಕೆಯ ಅವಕಾಶಗಳನ್ನು ನೀಡಲಿದೆ. ಆಹಾರ ಸಂಸ್ಕರಣೆಯಲ್ಲಿ ಭಾರತ ಮೊದಲಿದೆ. ಹೀಗಾಗಿ ಎಲ್ಲರೂ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ್

English summary
Prime Minister Narendra Modi said that, when he was become the chief minister of Gujarat in 2001, he wanted to turn the state into South Korea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X