ಗೋವಾ: ಮೋದಿಯಿಂದ ಭಾರೀ ಸಮರ ನೌಕೆ ಲೋಕಾರ್ಪಣೆ

ನವದೆಹಲಿ/ಪಣಜಿ, ಜೂನ್ 14: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗೋವಾ ಕಡಲ ತೀರದ ನೌಕಾ ನೆಲೆಯಲ್ಲಿ ರಷ್ಯಾ ನಿರ್ಮಿತ ಐಎನ್‌ಎಸ್ ವಿಕ್ರಮಾದಿತ್ಯ ಹೆಸರಿನ ಬೃಹತ್ ಸಮರ ನೌಕೆಯನ್ನು ಭಾರತೀಯ ನೌಕಾಪಡೆ ಹಾಗೂ ಸೇನೆಗೆ ಔಪಚಾರಿಕವಾಗಿ ಹಸ್ತಾಂತರ ಮಾಡಿದರು. ಐಎನ್‌ಎಸ್ ವಿಕ್ರಮಾದಿತ್ಯ ಎರಡು ತಿಂಗಳ ಹಿಂದೆ ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಂಡಿತ್ತು.

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಗೋವಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೌಕಾಪಡೆಯ ವಾಯುನೆಲೆಯಲ್ಲಿ ನೌಕಾಪಡೆ ಮುಖ್ಯಸ್ಥ ಆರ್ ಕೆ ಧವನ್ ಹಾಗೂ ಸಿಬ್ಬಂದಿ ಹಾರ್ದಿಕವಾಗಿ ಬರಮಾಡಿಕೊಂಡರು. ನಂತರ ಮೋದಿ ಅವರು ಯುದ್ಧ ಹೆಲಿಕಾಪ್ಟರ್ ಮೂಲಕ ತೆರಳಿ ಸಮುದ್ರದಲ್ಲಿ ಲಂಗರು ಹಾಕಿದ್ದ ಐಎನ್‌ಎಸ್ ವಿಕ್ರಮಾದಿತ್ಯ ತಲುಪಿದರು. ಇಂತಹ ಬೃಹತ್ ಸಮರ ನೌಕೆಯಲ್ಲಿ ಯಾನ ಮಾಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾದರು.

ನನಗಿದು ಅತ್ಯಂತ ಹೆಮ್ಮೆಯ ಕ್ಷಣ
:


ಈ ಸಂದರ್ಭದಲ್ಲಿ ನೌಕಾನೆಲೆಯ ಹಿರಿಯ ಅಧಿಕಾರಿಗಳು ಪ್ರಧಾನಿ ಮೋದಿಗೆ ಐಎನ್‌ಎಸ್ ವಿಕ್ರಮಾದಿತ್ಯ ಸಮರ ನೌಕೆಯ ಕಾರ್ಯವೈಖರಿ, ಸಾಮರ್ಥ್ಯ, ನಿರ್ವಹಣೆ ಕುರಿತಂತೆ ವಿವರ ಮಾಹಿತಿ ನೀಡಿದರು. ನೌಕೆಯಲ್ಲಿರುವ ಮಿಗ್‌ 29ಕೆ ವಿಮಾನದ ಪೈಲಟ್‌ ಸೀಟಿನಲ್ಲಿ ಕುಳಿತು ಮೋದಿ ವಿಮಾನದ ಕಾರ್ಯನಿರ್ವಹಣೆಯ ಬಗ್ಗೆ ವಿವರ ಪಡೆದರು. (ಚಿತ್ರ ಕೃಪೆ)

1982 ರಿಂದ 1995 ರವರೆಗೆ ರಷ್ಯಾ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ 44,500 ಟನ್ ಭಾರದ ಭಾರೀ ಸಮರ ನೌಕೆಯನ್ನು ಭಾರತ ಇದೀಗ ತನ್ನ ಸೇನೆಗೆ ಸೇರಿಸಿಕೊಂಡಿದ್ದು, 1600 ಮಂದಿ ಸಿಬ್ಬಂದಿಗೆ ಆಶ್ರಯ ನೀಡಬಲ್ಲ ಸಾಮರ್ಥ್ಯ ಹೊಂದಿದೆ.

ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯನ್ನು 15,000 ಕೋಟಿ ರೂಪಾಯಿ ನೀಡಿ ರಷ್ಯಾದಿಂದ ಖರೀದಿಸಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಕ್ರಮಾದಿತ್ಯ ನೌಕೆಯಲ್ಲಿ ಕಾಲ ಕಳೆಯಲಿರುವ ಪ್ರಧಾನಿ ಮೋದಿ ಅವರು ಮಿಗ್‌ 29ಕೆ, ಸೀ ಹಾರಿಯರ್, ಪಿ 8ಐ ವಿಮಾನಗಳು, ಟಿಯು 142 ಎಂ ಮತ್ತು ಐಎಲ್‌ 38ಎಸ್ಡಿ ಕರಾವಳಿ ವಿಮಾನಗಳು, ಕಾಮೋವ್‌ ಮತ್ತು ಸೀ ಕಿಂಗ್‌ ಹೆಲಿಕಾಪ್ಟರುಗಳ ಸಾಹಸವನ್ನು ವೀಕ್ಷಿಸಲಿದ್ದಾರೆ. ಬಳಿಕ ಸೇನಾ ಅಧಿಕಾರಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಯುದ್ಧಕ್ಕೆ ಸನ್ನದ್ಧರಾಗಿರಿ- ಮೋದಿ ಸೂಚನೆ:

ಗೋವಾಕ್ಕೆ ತೆರಳುವ ಮುನ್ನ ಇಂದು ಬೆಳಗ್ಗೆ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರೊಂದಿಗೆ ದಿಲ್ಲಿಯಲ್ಲಿ ತುರ್ತುಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಕ್ಷಣ ಯುದ್ಧ ಮಾಡಲು ಸೇನೆ ಸನ್ನದ್ದವಾಗಿರಲಿ ಎಂದು ಆದೇಶ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. ಪಾಕಿಸ್ತಾನ ಹಾಗೂ ಚೀನಾ ಗಡಿಗಳಲ್ಲಿರುವ ಸೇನಾಪಡೆಗಳು ಎಂಥದೇ ಸಂದರ್ಭ ಎದುರಿಸಲು ಸಿದ್ಧವಿರಬೇಕು. ಗಡಿಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾದರೂ ತಕ್ಷಣ ಅದನ್ನು ಎದುರಿಸಿ ಹಿಮ್ಮೆಟ್ಟಿಸಲು ಸೈನಿಕರು ಸಿದ್ಧವಿರಲಿ ಎಂದು ಮೋದಿ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿ ನಡೆಸುವ ಮೂಲಕ ಪದೆ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವುದು ಗಂಭೀರ ವಿಷಯ. ಸ್ನೇಹದ ಹೆಸರಲ್ಲಿ ಯುದ್ಧ ದಾಹ ಸರಿಯಲ್ಲ ಎಂದೂ ಮೋದಿ ಈ ಸಂದರ್ಭ ಹೇಳಿರುವುದಾಗಿಯೂ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+