ಆಂಡ್ರಾಯ್ಡ್ ಜಗತ್ತಿಗೆ ಕಾಲಿರಿಸಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಜೂ.17: ಡಿಜಿಟಲ್ ಇಂಡಿಯಾ ಕನಸು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನ ಸದ್ಬಳಕೆ ನಿಪುಣರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಟ್ವಿಟ್ಟರ್, ಫೇಸ್ ಬುಕ್ ನಂತರ ಈಗ ಆಂಡ್ರಾಯ್ಡ್ ಲೋಕಕ್ಕೆ ಕಾಲಿರಿಸಿದ್ದಾರೆ. ನರೇಂದ್ರ ಮೋದಿ ಹೆಸರಿನ ಆಂಡ್ರಾಯ್ಡ್ ಅಪ್ಲಿಕೇಷನ್ ಬುಧವಾರದಿಂದ ಸಾರ್ಜವನಿಕರಿಗೆ ಲಭ್ಯವಾಗಿದೆ.
ಈ ಅಪ್ಲಿಕೇಷನ್ ಮೂಲಕ ಪ್ರಧಾನಿ ಮೋದಿ ಅವರ ಚಟುವಟಿಕೆಗಳ ವಿವರ ಕಾಲ ಕಾಲಕ್ಕೆ ಸಿಗಲಿದೆ. ಜೊತೆಗೆ ಮೋದಿ ಅವರ ಜೊತೆಗೆ ನೇರ ಸಂಪರ್ಕ ಹೊಂದಲು ಸಾರ್ವಜನಿಕರಿಗೆ ನೆರವಾಗಲು ಅನುಕೂಲ ಕಲ್ಪಿಸಲಾಗಿದೆ.

Launched 'Narendra Modi Mobile App'. Come, lets stay connected on the mobile! pic.twitter.com/FmHHJSCat8
— Narendra Modi (@narendramodi) June 17, 2015 ಅಪ್ಲಿಕೇಷನ್ ನಲ್ಲಿ ಮನ್ ಕಿ ಬಾತ್ ಆಡಿಯೋಗಳು ಕೂಡಾ ಸಿಗುತ್ತದೆ. ಮಿಕ್ಕಂತೆ ಸರ್ಕಾರದ ಯೋಜನೆಗಳು, ಮೋದಿ ಅವರ ವೆಬ್ ಸೈಟ್ ನಲ್ಲಿರುವ ವಿವರಗಳೆಲ್ಲ ಸಿಗುತ್ತದೆ.
The Mobile App has several innovative features. You can download it from Play Store. Feedback is welcome. http://t.co/WZ97ypMmlz
— Narendra Modi (@narendramodi) June 17, 2015 4.2ಎಂಬಿ ತೂಕದ ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನಿನಲ್ಲಿ ಇಳಿಸಿಕೊಳ್ಳಲು ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ವರ್ಷನ್ 4.0 ಅಥವಾ ಅದಕ್ಕಿಂತ ಹೆಚ್ಚಿನದ್ದು ಇರಬೇಕು. ಮೋದಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. (ಪಿಟಿಐ)












Click it and Unblock the Notifications