ಕುದಿಯುವ ಹಾಲಿನಲ್ಲಿ ಅಂಬೆಗಾಲಿಡುವ ಮಗುವಿಗೆ ಸ್ನಾನ ಮಾಡಿಸಿದ ಅರ್ಚಕ!
ಬಲ್ಲಿಯಾ ಜೂನ್ 29: ಧಾರ್ಮಿಕ ಆಚರಣೆಯ ಭಾಗವಾಗಿ ಪಾದ್ರಿಯೊಬ್ಬರು ಅಂಬೆಗಾಲಿಡುವ ಮಗುವಿಗೆ ಕುದಿಯುವ ಹಾಲಿನಲ್ಲಿ ಸ್ನಾನ ಮಾಡಿಸಿದ ಘಟನೆ ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಈ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವರದಿಗಳ ಪ್ರಕಾರ, ಜಿಲ್ಲೆಯ ಶ್ರವಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪವಿತ್ರ ನಗರವಾದ ವಾರಣಾಸಿಯ ಪಾದ್ರಿಯೊಬ್ಬರು ಮಗುವಿಗೆ ಧಾರ್ಮಿಕ ಆಚರಣೆಯ ಭಾಗವಾಗಿ ಕುದಿಯುವ ಹಾಲಿನಲ್ಲಿ ಸ್ನಾನ ಮಾಡಿಸಿದ್ದಾರೆ. ವಿಡಿಯೋದಲ್ಲಿ ಕಂಡು ಬಂದ ಅರ್ಚಕನ ಹೆಸರು ವಾರಣಾಸಿಯ ಪಂಡಿತ್ ಅನಿಲ್ ಭಗತ್ ಎಂದು ಗುರುತಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಅರ್ಚಕ ಮಗುವನ್ನು ತನ್ನ ಮೊಣಕಾಲಿನ ಮೇಲೆ ಕೂರಿಸಿಕೊಂಡು, ಕುದಿಯುವ ಹಾಲಿನ ಪಾತ್ರೆಯಿಂದ ನೊರೆಯನ್ನು ಹಿಡಿದು ಮಗುವಿನ ಮುಖಕ್ಕೆ ಹಚ್ಚುತ್ತಾನೆ. ಮಗು ನಿರಂತರವಾಗಿ ಅಳುವುದನ್ನು ಕಾಣಬಹುದು.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
ಮಗು ನೋವಿನಿಂದ ಅಳುವುದನ್ನು ಹೆಚ್ಚಿಸಿದರೂ ಅರ್ಚಕ ಆಚರಣೆಯನ್ನು ಮುಂದುವರೆಸುತ್ತಾರೆ. ಈ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಜನ ನೆರೆದಿರುವುದು ಕಾಣಿಸುತ್ತದೆ. ಜೊತೆಗೆ ಇವರ ಮುಂದೆ ಮಗು ಕಿರುಚಿ ಅಳುತ್ತಿದ್ದರೂ ಅರ್ಚಕ ಬಿಡದೆ ಆಚರಣೆ ಮುಂದುವರೆಸುತ್ತಾನೆ.
ವರದಿಗಳ ಪ್ರಕಾರ, ಈ ವಿಚಿತ್ರ ಆಚರಣೆಯು ಶ್ರವಣಪುರ ಗ್ರಾಮದಲ್ಲಿ ಕಾಶಿ ದಾಸ್ ಬಾಬಾ ಪೂಜೆಯ ಭಾಗವಾಗಿತ್ತು ಎಂದು ತಿಳಿದು ಬಂದಿದೆ. ಇದು ಯಾದವ ಸಮುದಾಯದಲ್ಲಿ ಸಾಮಾನ್ಯವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೂಢನಂಬಿಕೆಗಳಿಗೆ ಬಲಿಯಾದ ಮಕ್ಕಳು
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ನೋವಿನ ಮತ್ತು ಕೆಲವೊಮ್ಮೆ ಮಾರಣಾಂತಿಕ ಮೂಢನಂಬಿಕೆಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಾಗಿ ಕಂಡು ಬರುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ 3 ತಿಂಗಳ ಹೆಣ್ಣು ಮಗುವು ಅನಾರೋಗ್ಯವನ್ನು ಗುಣಪಡಿಸಲು ಸಾಂಪ್ರದಾಯಿಕ ವಿಧಾನಗಳ ಭಾಗವಾಗಿ ವೈದ್ಯನೊಬ್ಬ 20 ಬಾರಿ ಬಿಸಿ ಕಬ್ಬಿಣದ ರಾಡ್‌ನಿಂದ ಸುಡಲಾಗಿತ್ತು. ಇದರಿಂದ ಮಗು ಸಾವನ್ನಪ್ಪಿತ್ತು.
ಎರಡೂವರೆ ತಿಂಗಳ ಹೆಣ್ಣು ಮಗು ಇದೇ ರೀತಿಯ ಅಭ್ಯಾಸಕ್ಕೆ ಒಳಗಾಗಿ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಶಹದೋಲ್ ಜಿಲ್ಲೆಯಲ್ಲಿ ಭೀಕರವಾದ ಎರಡನೆ ಘಟನೆ ನಡೆದಿದೆ. ಆನಾರೋಗ್ಯಕ್ಕೆ ಒಳಗಾದ ಮಗುವನ್ನು ತಾಯಿ ತನ್ನ ನಂಬಿಕೆಯ ವೈದ್ಯನ ಬಳಿಗೆ ಕರೆದೊಯ್ದಿದ್ದಾಳೆ. ಆದರೆ ವೈದ್ಯ ಶಿಶುವನ್ನು ಗುಣಪಡಿಸುವ ನೆಪದಲ್ಲಿ ಬಿಸಿ ಕಬ್ಬಿಣದ ರಾಡ್‌ನಿಂದ 50 ಬಾರಿ ಸುಟ್ಟಿದ್ದನು.
ಬಳಿಕ ಮಗುವನ್ನು ಶಹದೋಲ್ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಅಲ್ಲಿ ಆ ಮಗು ಸಾವನ್ನಪ್ಪಿದೆ ಎಂದು ಘೋಷಿಸಲಾಯಿತು. ಭಾರತೀಯ ದಂಡ ಸಂಹಿತೆ (IPC) ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ "ವೈದ್ಯ" ಎಂದು ಕರೆಯಲ್ಪಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಶಹದೋಲ್ ಘಟನೆಯ ಕೆಲವು ದಿನಗಳ ನಂತರ, ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಸ್ಥಳೀಯ ತಂತ್ರಿಯೊಬ್ಬರು ಅನಾರೋಗ್ಯಗೊಂಡ ಮಗುವನ್ನು ಗುಣಪಡಿಸುವ ಪ್ರಯತ್ನದಲ್ಲಿ ಹಲವಾರು ಬಾರಿ ನೆಲಕ್ಕೆ ಎಸೆದ ನಂತರ ಒಂದು ವರ್ಷದ ಪುಟ್ಟ ಮಗು ಸಾವನ್ನಪ್ಪಿತ್ತು.
ವರದಿಗಳ ಪ್ರಕಾರ, ಮೃತ ಮಗುವನ್ನು 1 ವರ್ಷದ ಅನುಜ್ ಎನ್ನಲಾಗಿದೆ. ಅನಾರೋಗ್ಯಕ್ಕೆ ಒಳಗಾದ ನಂತರ ಅವರ ಕುಟುಂಬವು ತಂತ್ರಿಯ ಬಳಿಗೆ ಕರೆದೊಯ್ದಿದ್ದರು. "ವೈದ್ಯ" ಎಂದು ಕರೆಯಲ್ಪಡುವ ತಂತ್ರಿ ಮಗುವನ್ನು ನೆಲಕ್ಕೆ ಎಸೆದಿದ್ದಾನೆ ಮತ್ತು ಗುಣಪಡಿಸುವ ನೆಪದಲ್ಲಿ ಅವನ ಕೆಲವು ಹಲ್ಲುಗಳನ್ನು ಮುರಿದಿದ್ದಾನೆ ಎಂದು ಕುಟುಂಬ ಹೇಳಿಕೊಂಡಿದೆ.
ಬಳಿಕ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಸ್ಪಂದಿಸುತ್ತಿಲ್ಲ ಎಂದು ತಿಳಿದ ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಬಳಿಕ ಕುಟುಂಬ ಪೊಲೀಸ್ ಠಾಣೆಗೆ ಮಗುವಿನ ದೇಹವನ್ನು ಕೊಂಡೊಯ್ಯಿತು ಮತ್ತು ದುಃಖಿತ ಕುಟುಂಬದ ದೂರಿನ ಆಧಾರದ ಮೇಲೆ ತಂತ್ರಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು.












Click it and Unblock the Notifications