ರಾಷ್ಟ್ರಪತಿ ಚುನಾವಣೆ: ಎಐಎಡಿಎಂಕೆ ಬೆಂಬಲ ಯಾರಿಗೆ?

Posted By:
Subscribe to Oneindia Kannada

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ (All India Anna Dravida Munnetra Kazhagam) ತನ್ನ ನಿಲುವನ್ನು ಇನ್ನೆರಡು ದಿನಗಳೊಳಗಾಗಿ ಸ್ಪಷ್ಟಪಡಿಸುವುದಾಗಿ ಹೇಳಿದೆ.

ಇಂದು (ಜೂನ್ 16) ನವದೆಹಲಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಎಐಎಡಿಎಂಕೆ ಮುಖ್ಯಸ್ಥ ಮತ್ತು ಲೋಕಸಭಾ ಉಪಸಭಾಪತಿ ಎಂ. ತಂಬಿದುರೈ, ರಾಷ್ಟ್ರಪತಿ ಚುನಾವಣೆಯ ಕುರಿತು ಚರ್ಚಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆ: ಸೋನಿಯಾ ನಿವಾಸದಲ್ಲಿ ರಾಜನಾಥ್, ನಾಯ್ಡು ಚರ್ಚೆ

Presidential election: AIADMK will tell it's stand in two days

ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ತಂಬಿದುರೈ, ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದರು.

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೆರಡು ದಿನದಲ್ಲಿ ಪಕ್ಷ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The AIADMK on Friday said that it would clear its stand on the upcoming Presidential Poll in couple of days. AIADMK leader and Lok Sabha Deputy Speaker M. Thambidurai on Friday met Union Information and Broadcasting Minister M. Venkaiah Naidu here.
Please Wait while comments are loading...