ಜೋಲಿಯಲ್ಲೇ ಪ್ರಸವ: ಒಡಿಶಾ ಮಹಿಳೆಯ ಹೀನಾಯ ಸ್ಥಿತಿ ಇದು!

Posted By:
Subscribe to Oneindia Kannada

ರಾಯಗಡ(ಒಡಿಶಾ), ಆಗಸ್ಟ್ 9: ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ವಾಹನ ಸೌಲಭ್ಯವಿಲ್ಲದಿದ್ದರಿಂದ ಜೋಲಿ(ಹಗ್ಗದ ಮಂಚ)ಯಲ್ಲೇ ಮಲಗಿಸಿ ಕರೆದೊಯ್ದ ಕಾರಣ, ಹೆಣ್ಣು ಶಿಶು ಮರಣ ಹೊಂದಿದ ಘಟನೆ ಒಡಿಶಾದ ರಾಯಗಡ ಎಂಬಲ್ಲಿ ಇಂದು (ಆಗಸ್ಟ್ 9) ನಡೆದಿದೆ.

ಬೆಳಗಾವಿ: ಹೆಣ್ಣು ಮಗುವೆಂದು ಒತ್ತಾಯಪೂರ್ವಕ ಗರ್ಭಪಾತ ಮಾಡಿಸಿದ ಗಂಡ

ಇಲ್ಲಿನ ನಿಯಾಮಗಿರಿ ಗುಡ್ಡಗಾಡು ಪ್ರದೇಶದ ಫಕೇರಿ ಎಂಬ ಹಳ್ಳಿಯ ಮಹಿಳೆಯೊಬ್ಬರಿಗೆ ಪ್ರಸವ ವೇದನೆ ಆರಂಭವಾಗಿತ್ತು. ಆದರೆ ಈ ಹಳ್ಳಿಯಲ್ಲಿ ಯಾವುದೇ ರೀತಿಯ ವಾಹನ ಸೌಲಭ್ಯವಿಲ್ಲದ ಕಾರಣ ಆಕೆಯನ್ನು ಆಸ್ಪತ್ರೆಗೆ ಸಾಗಿಸುವುದಕ್ಕಾಗಿ ಜೋಲಿಯಲ್ಲಿಯೇ ಕರೆದೊಯ್ಯಲಾಯ್ತು. ಜೋಲಿಯಲ್ಲಿ ಮಲಗಿದ್ದ ಆಕೆಯನ್ನು ಹತ್ತಿರದ ನದಿಯೊಂದನ್ನು ದಾಟಿಸುತ್ತಿದ್ದ ಸಮಯದಲ್ಲಿ ಆಕೆ ತೀವ್ರ ಹೆರಿಗೆ ನೋವಿನಿಂದ ಬಳಲಿ, ಅಲ್ಲಿಯೇ ಮಗುವಿಗೆ ಜನ್ಮ ನೀಡಿದರಾದರೂ, ಆ ಮಗು ಅಷ್ಟರಲ್ಲೇ ಅಸುನೀಗಿತ್ತು.

Pregnant carried in sling, delivers stillborn in Rayagada, Odisha

ಸದ್ಯಕ್ಕೆ ಅವರನ್ನು ಇಲ್ಲಿನ ಆರೋಗ್ಯ ಕೇಂದ್ರವೊಂದರಲ್ಲಿ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆಯಾದರೂ, ಇಷ್ಟು ದಿನ ಜತನದಿಂದ ಗರ್ಭದಲ್ಲಿಟ್ಟುಕೊಂಡಿದ್ದ ಕಂದಮ್ಮ ಮಾತ್ರ ಭೂಮಿಗೆ ಬರುವ ಮೊದಲೇ ಕಣ್ಮುಚ್ಚಿದ್ದಾಳೆ.
ಕೆಲವು ದಿನಗಳ ಹಿಂದಷ್ಟೇ ಇದೇ ರಾಯಗಡದ ಕಲ್ಯಾಣಸಿಂಗ್ಪುರ್ ಎಂಬಲ್ಲಿಯೂ ಇಂಥದೇ ಘಟನೆ ನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಭಾರತ ಒಂದೆಡೆಯಲ್ಲಿ ಅನೂಹ್ಯ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದರೂ ಹಲವು ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳು ಮೂಲಸೌಕರ್ಯಗಳಿಂದಲೇ ವಂಚಿತವಾಗಿವೆ ಎಂಬುದು ವಿಷಾದನೀಯ ಸಂಗತಿಯೇ ಸರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an unfortunate incident, a pregnant woman gave birth to a dead baby girl on Aug 9th while being carried to hospital in a sling due to lack of conveyance or ambulance in Odisha's Rayagada district. The incident took place at Fakeri village under Parsali panchayat in Niyamgiri hill of Odisha's Rayagada district.
Please Wait while comments are loading...