ಮೂರನೇ ಬಾರಿ ಮೋದಿ ಪ್ರಧಾನಿ ಆಗಿ ನಾಲ್ಕು ಬದಲಾವಣೆ: ಪ್ರಶಾಂತ್ ಕಿಶೋರ್ ಭವಿಷ್ಯ
ದೇಶದಲ್ಲಿ 18ನೇ ಲೋಕಸಭಾ ಚುನಾವಣೆಗಳು ನಡೆದಿದ್ದು, ಈಗಾಗಲೇ ಹಲವು ಸಮೀಕ್ಷೆಗಳು ಹೊರ ಬಿದ್ದಿವೆ. ಈ ಬೆನ್ನಲ್ಲೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಹ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
ಪ್ರಶಾಂತ್ ಕಿಶೋರ್ ಸಂದರ್ಶನದಲ್ಲಿ ಈ ಬಾರಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಬಿಜೆಪಿ 303 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದಿರುವ ಅವರು, ಪ್ರಧಾನಿಯಾದ ನಂತರ ನರೇಂದ್ರ ಮೋದಿ ಮಾಡಬಹುದಾದ ನಾಲ್ಕು ಪ್ರಮುಖ ಬದಲಾವಣೆಗಳನ್ನು ತಿಳಿಸಿದ್ದಾರೆ.

ಯಾವ ಕ್ಷೆತ್ರಗಳಲ್ಲಿ ಬದಲಾವಣೆ
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಅವರು ಮೋದಿ 3.0 ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರಬಹುದು ಎಂದು ಹೇಳಿದ್ದಾರೆ. ಮೋದಿ ಸರ್ಕಾರವು ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಕಡಿವಾಣ ಹಾಕಬಹುದ. ಇಷ್ಟೇ ಅಲ್ಲ, ಭ್ರಷ್ಟಾಚಾರ ವಿರೋಧಿ ನಿರೂಪಣೆಯಲ್ಲೂ ಮೋದಿ ಸರ್ಕಾರ ದೊಡ್ಡ ಬದಲಾವಣೆ ತರಬಹುದು ಎಂದು ಪಿಕೆ ಹೇಳಿಕೊಂಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಬೇಕು ಎಂದು ಬಹುದಿನಗಳ ಬೇಡಿಕೆ ಇದೆ. ಈ ಉತ್ಪನಗಳ ಮೇಲೆ ಶೇಕಡಾ 100 ರಷ್ಟು ತೆರಿಗೆ ಇರುತ್ತದೆ. ಪೆಟ್ರೋಲಿಯಂ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಅಚ್ಚರಿ ಇಲ್ಲ ಎಂದು ಪ್ರಶಾಂತ್ ತಿಳಿಸಿದ್ದಾರೆ. ರಾಜ್ಯಗಳು ಪ್ರಮುಖ ಮೂರು ಆದಾಯ ಮೂಲಗಳಲ್ಲಿ ಇದು ಒಂದು. ಇನ್ನೆರೆಡು ಅಂದರೆ ಮಧ್ಯ ಹಾಗೂ ಭೂಮಿ.
ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯಿದೆ (FRBM) ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ. ಅಲ್ಲದೆ ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆಯಲ್ಲೂ ಕೇಂದ್ರ ವಿಳಂಬಿಸಬಹುದು ಎಂದು ಪ್ರಶಾಂತ್ ಭವಿಷ್ಯ ನುಡಿದಿದ್ದಾರೆ.

ಈ ಕಾಯಿದೆಯು ರಾಜ್ಯಗಳ ವಾರ್ಷಿಕ ಬಜೆಟ್ ಕೊರತೆಯ ಮೇಲೆ ಮಿತಿಯನ್ನು ಹೇರುತ್ತದೆ. ಕೇಂದ್ರವು ಸಂಪನ್ಮೂಲಗಳ ವಿತರಣೆಯನ್ನು ವಿಳಂಬಗೊಳಿಸಬಹುದು ಮತ್ತು ರಾಜ್ಯಗಳ ಆಫ್-ಬಜೆಟ್ ಸಾಲವನ್ನು ಬಿಗಿಗೊಳಿಸಲಾಗುವುದು ಎಂದು ಕಿಶೋರ್ ತಿಳಿಸಿದ್ದಾರೆ.
ಬಿಜೆಪಿ ಸ್ಥಾನ ವೃದ್ಧಿ ಹೇಗೆ?
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಕೇವಲ 50 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಸಫಲವಾಗಿತ್ತು. ಈ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ 250ಕ್ಕೂ ಹೆಚ್ಚು ಸ್ಥಾನ ಗಳಿಸಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ತಾನು ಗೆದ್ದಿರುವ ಸೀಟ್‌ಗಳನ್ನು, ಹಿಡಿದಿಟ್ಟುಕೊಳ್ಳುವ ಸಾಧ್ಯತೆ ಇದೆ. ಇನ್ನು ಭಾರತದ ದಕ್ಷಿಣ ಭಾಗದಲ್ಲಿ ಕಮಲ ಅರಳಲಿದೆ. ಈ ಭಾರತದಲ್ಲಿ 15 ರಿಂದ 20 ಸೀಟ್‌ಗಳನ್ನು ಬಿಜೆಪಿ ಹೆಚ್ಚು ಸ್ಥಾನ ಗಳಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.
2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧನೆಯ ಆಸುಪಾಸಿನಲ್ಲಿ ಈ ಬಾರಿಯೂ ಇರಲಿದ್ದು, ಬಿಜೆಪಿ 370 ಸ್ಥಾನ, ಎನ್‌ಡಿಎ ಮೈತ್ರಿ ಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿರುವ ಮೋದಿಯವರ ಮಾತುಗಳು ಚುನಾವಣಾ ಅಂಗಳದಲ್ಲಿ ಕೈ ಕೊಡಲಿವೆ ಎಂದಿದ್ದಾರೆ.












Click it and Unblock the Notifications