ರಾಷ್ಟ್ರಪ್ರಶಸ್ತಿ, ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ ವಿಜೇತರು
ನವದೆಹಲಿ, ನವೆಂಬರ್, 14 : ಮಕ್ಕಳ ದಿನಾಚರಣೆ ಪ್ರಯುಕ್ತ ವಿಭಿನ್ನ ಕ್ಷೇತ್ರದಲ್ಲಿ ಸಾಧನೆಯ ಗುರಿ ಮೂಡಿಸಿದ ಅಸಾಧಾರಣ ಪ್ರತಿಭಾಶಾಲಿ ಮಕ್ಕಳಿಗೆ 'ರಾಷ್ಟ್ರ ಪ್ರಶಸ್ತಿ' ಹಾಗೂ ಮಕ್ಕಳ ಸೇವೆಯಲ್ಲಿ ವೈಯಕ್ತಿಕವಾಗಿ ಗುರುತಿಸಿಕೊಂಡ ವ್ಯಕ್ತಿಗಳಿಗೆ 'ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ' ಪ್ರದಾನ ಸಮಾರಂಭ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನೇತೃತ್ವದಲ್ಲಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಿತು.
ಈ ವರ್ಷದ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಗೆ ಕರ್ನಾಟಕದ ವೈ. ವಸಂತ ಚೌಗಲೆ ಹಾಗೂ ರಾಷ್ಟ್ರಪ್ರಶಸ್ತಿಗೆ ಮೂಡಿಬಿದರೆಯ ಪಂಚಮಿ ಮರೂರು ಹಾಗೂ ಅರ್ಚನಾ ಗಿರೀಶ್ ಕಾಮತ್ ಪ್ರಶಸ್ತಿ ಭಾಜನರಾಗಿದ್ದಾರೆ.
ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಯು 1 ಲಕ್ಷ ನಗದು, ಬೆಳ್ಳಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಅವರ ನೆನಪಿನಾರ್ಥ 1994 ರಿಂದ ಕೊಡಲಾಗುತ್ತಿದೆ. ಮಕ್ಕಳ ಸೇವಾ ಕ್ಷೇತ್ರದಲ್ಲಿ ಅಗಣ್ಯ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಇದನ್ನು 2006ರಲ್ಲಿ 3 ವಿಭಾಗಗಳಾಗಿ ಅಂದರೆ ಮಕ್ಕಳ ಸುರಕ್ಷತೆ, ಮಕ್ಕಳ ಅಭಿವೃದ್ದಿ, ಮತ್ತು ಮಕ್ಕಳ ರಕ್ಷಣೆ ಎಂದು ವಿಭಾಗ ಮಾಡಲಾಯಿತು.[ಮಕ್ಕಳ ದಿನಾಚರಣೆ: ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]
ರಾಷ್ಟ್ರಪ್ರಶಸ್ತಿಯನ್ನು ಸುಮಾರು 3 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಸುಮಾರು 1996ರಿಂದ ಕೊಡಲಾಗುತ್ತಿದೆ. ಅಸಾಧಾರಣ ಪ್ರತಿಭೆ ತೋರಿದವರಿಗೆ ನೀಡುವ ಈ ಪ್ರಶಸ್ತಿಯು ಒಂದು ಬಂಗಾರ ಪದಕ ಮತ್ತು 35 ಬೆಳ್ಳಿ ಪದಕಗಳನ್ನು ಒಳಗೊಂಡಿದೆ. ಬಂಗಾರ ಪದಕ ಪಡೆದವರಿಗೆ 20,000 ನಗದು ಬಹುಮಾನ ಮತ್ತು ಬೆಳ್ಳಿ ಪದಕ ಪಡೆದವರಿಗೆ 10,000 ನಗದು ಪ್ರದಾನ ಮಾಡಲಾಗುತ್ತದೆ.

ವಸಂತ ಚೌಗಲೆ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ ವಿಜೇತರು
* ಕರ್ನಾಟಕದ ಬೆಳಗಾವಿ ಜಿಲ್ಲೆಯ ವಸಂತ ಚೌಗಲೆ ಅವರು ಬಾಲ ಕಾರ್ಮಿಕತನ, ಮಕ್ಕಳ ಹಕ್ಕು ಹಾಗೂ ಸುರಕ್ಷತೆ, ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಕುರಿತಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೋರಾಡಿದ ದ್ಯೋತಕವಾಗಿ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ ಪಡೆದಿದ್ದಾರೆ.
* ಕೇರಳದ ಡಾ. ಸಂತೋಷ್ ಜಿ ಥಾಮಸ್ ಅವರು ದೈಹಿಕ ಅಸಾಮರ್ಥ್ಯ ಮಕ್ಕಳಿಗೆ ಉಚಿತ ಪಿಂಚಣಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಅರುಣಾಚಲ ಪ್ರದೇಶದ ಡಾ. ಮೋಜಿ ಜಿನಿ ಅವರು ಕುತ್ತಿಗೆ, ಎದೆ , ಹೃದಯ ಇನ್ನಿತರ ಗಂಭೀರ ಸಮಸ್ಯೆಗಳಿಗೆ ತುತ್ತಾದ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿ ಮರುಜೀವ ನೀಡಿದಕ್ಕಾಗಿ ಕೊಡಲಾಗುತ್ತಿದೆ.

ಕ್ರೀಡಾ ಕ್ಷೇತ್ರ
ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಪಾಲಕ್ ಎಂಬಾತ ರಾಷ್ಟ್ರಪ್ರಶಸ್ತಿ ಪಡೆದಿದ್ದಾನೆ.

ರಾಷ್ಟ್ರಪ್ರಶಸ್ತಿ ಪಡೆದ ಮೂಡುಬಿದಿರೆಯ ಪಂಚಮಿ
* ಕರ್ನಾಟಕದ ಅರ್ಚನಾ ಗಿರೀಶ್ ಕಾಮತ್ ಕ್ರೀಡಾ ಕ್ಷೇತ್ರದಲ್ಲಿ ಅಂದರೆ ಟೆನ್ನಿಸ್ ವಲಯದಲ್ಲಿ ಮಾಡಿದ ವಿಶೇಷ ಸಾಧನೆ
* ಮೂಡುಬಿದಿರೆಯ ಪಂಚಮಿ ಮರೂರು, ನೃತ್ಯ ಯಕ್ಷಗಾನ, ಸಂಗೀತ, ಕ್ರೀಡೆ, ವಿದ್ಯಾಭ್ಯಾಸದಲ್ಲಿ ತೋರಿದ ಅಪ್ರತಿಮ ಸಾಧನೆಗೆ ಲಭಿಸಿದೆ.
* ಸುಹೀತ್ ರಕ್ಷಿತ್ ಸಂಗೀತ ವಾದನ ಅಂದರೆ ಸಿತಾರ್ ನಲ್ಲಿ ವಿಶೇಷ ಪ್ರತಿಭೆ ತೋರಿದ ಕಾರಣ ನೀಡಲಾಗುತ್ತಿದೆ.
* ರೂಪಕ್ ಕೌಶಲ್ ಕೋಲಮ್ ಕರ್ : ತಬಲ ವಾದನದಲ್ಲಿ
* ಆರ್. ವೈಶಾಲಿ, ವಿ ರವೀಂದ್ ಚಿದಂಬರಂ ಚೆಸ್ ನಲ್ಲಿ ಸಾಧನೆ

ಸಂಶೋಧನಾ ಕ್ಷೇತ್ರ
ಸೋರಿಂಗ್ ಲೆಪ್ಕಾ ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾನೆ

ನಟನಾ ವಲಯದಲ್ಲಿ
ನಟನಾ ವಲಯದಲ್ಲಿ ಮಾಡಿದ ವಿಶೇಷ ಸಾಧನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾನೆ.












Click it and Unblock the Notifications