ಚೋಕ್ಸಿ ವಿರುದ್ಧ ಯಾವ ಆರೋಪವೂ ಇಲ್ಲ ಎಂದಿದ್ದ ಭಾರತ
ನವದೆಹಲಿ, ಆಗಸ್ಟ್ 3: ಪಂಜಾಬ್ ನ್ಯಾಷನಲ್ ಬ್ಯಾಂಕುಗಳಿ ಸಾವಿರಾರು ಕೋಟಿ ರೂ ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಪೌರತ್ವ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ಭಾರತ ಸರ್ಕಾರವೇ ಕಳೆದ ವರ್ಷ ಹೇಳಿತ್ತು ಎಂದು ಆಂಟಿಗುವಾ ತಿಳಿಸಿದೆ.
ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಗುರುತಿಸಲಾಗಿರುವ ಚೋಕ್ಸಿ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ ಎಂದು ಭಾರತ ಸರ್ಕಾರದ ಸಂಸ್ಥೆಗಳು ಮಾಹಿತಿ ನೀಡಿದ್ದರಿಂದ ಆತನನ್ನು ಆಂಟಿಗುವಾ ಪೌರತ್ವ ಪಡೆಯಲು ಯೋಗ್ಯ ಮತ್ತು ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿದ್ದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.
ಭಾರತ ಸರ್ಕಾರದಿಂದ ಪೊಲೀಸ್ ಪ್ರಮಾಣಪತ್ರ, ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಬಂದ ಪ್ರಮಾಣಪತ್ರಗಳು ಮೆಹುಲ್ ಚೋಕ್ಸಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಅವರಿಗೆ ಪೌರತ್ವ ನೀಡಲು ಅಡ್ಡಿಯಿಲ್ಲ ಎಂದು ತಿಳಿಸಿದ್ದವು.

ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಮತ್ತು ಆತನ ಚಲನವಲನಗಳ ಮೇಲೆ ನಿಯಂತ್ರಣ ಇರಿಸುವಂತೆ ಭಾರತವು ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರವನ್ನು ಕೋರಿತ್ತು.
ದೇಶದೊಳಗೆ ಚೋಕ್ಸಿ ಇರುವುದನ್ನು ಖಚಿತಪಡಿಸುವಂತೆ, ಆತನನ್ನು ವಶಕ್ಕೆ ಪಡೆದುಕೊಂಡು ಭೂ, ವೈಮಾನಿಕ ಅಥವಾ ಸಾಗರ ಮಾರ್ಗಗಳಲ್ಲಿ ಆತ ಪ್ರಯಾಣಿಸದಂತೆ ತಡೆಯೊಡ್ಡಲು ಸಹಕರಿಸುವಂತೆ ಕೋರಿತ್ತು.












Click it and Unblock the Notifications