ಮೊರ್ಬಿಗೆ ಪ್ರಧಾನಿ ಮೋದಿ ಭೇಟಿ, ನೆಟ್ಟಿಗರು ಹೇಳಿದ್ದೇನು?

ಅಹಮದಾಬಾದ್, ನ. 01: ಭಾನುವಾರ ಮೊರ್ಬಿ ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ ನಂತರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮೊರ್ಬಿಯ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಭಾನುವಾರದಂದು ಶತಮಾನದಷ್ಟು ಹಳೆಯದಾದ ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳಕ್ಕೆ ಬಂದು ಪ್ರಧಾನಿ ಮೋದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇನ್ನು, ಮೋದಿ ಭೇಟಿ ಬೆನ್ನಲ್ಲೇ ಟ್ವಿಟರ್‌ನಲ್ಲಿ ಗೋ ಬ್ಯಾಕ್ ಮೋದಿ ಮತ್ತು ಗುಜರಾತ್ ವಿತ್ ಮೋದಿಜಿ (#Go_Back_Modi, #GujaratWithModiJi) ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್ ಪಟ್ಟಿಗಳಲ್ಲಿ ಅಗ್ರಸ್ಥಾನಕ್ಕೆ ಏರಿವೆ.

PM Narendra Modi Visits Morbi: here what netizens says

ಡಿಸೆಂಬರ್ ವೇಳೆಗೆ ಚುನಾವಣೆ ಎದುರಿಸಲಿರುವ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತ ಹಲವು ರಾಜಕೀಯ ಬಣ್ಣ ಪಡೆಯುತ್ತಿದೆ. ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡಲು ಪ್ರಧಾನಿ ತಮ್ಮ ತವರು ರಾಜ್ಯದಲ್ಲಿಯೇ ಇದ್ದಾರೆ. ಘಟನಾ ಸ್ಥಳದಿಂದ ಪ್ರಧಾನಿ ಮೋದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

#Go_Back_Modi ಹ್ಯಾಶ್‌ಟ್ಯಾಗ್‌ ಬಳಸಿರುವ ಹಲವಾರು ಟ್ವೀಟ್‌ಗಳು ಇಂತಹ ಕಷ್ಟದ ಸಮಯದಲ್ಲಿಯೂ ಪ್ರಧಾನಿ ಪರಿಸ್ಥಿತಿಯ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿವೆ.

ಇನ್ನೊಂದು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಕಾರ್ಟೂನ್‌ನಲ್ಲಿ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಡುವಿನ ಕಂದರದ ಮೇಲೆ ಮುರಿದ ಸೇತುವೆಯಿದ್ದು ಮತ್ತೊಂದು ಕಡೆ 'ವೋಟ್ ಬ್ಯಾಂಕ್' ಇರುವುದನ್ನು ತೋರಿಸುತ್ತದೆ. ಈ ಚಿತ್ರ ಹಂಚಿಕೊಂಡಿರುವ ನೆಟ್ಟಿಗರು, ನಾವು 134 ಮತಗಳನ್ನು ಕಳೆದುಕೊಂಡೆವು ಎಂದು ಚಿಂತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

PM Narendra Modi Visits Morbi: here what netizens says

ಈ ಗೋ ಬ್ಯಾಕ್ ಮೋದಿ ಹ್ಯಾಶ್‌ಟ್ಯಾಗ್‌ಗೆ ಪ್ರತಿರೋಧವಾಗಿ ಗುಜರಾತ್ ವಿತ್ ಮೋದಿಜಿ (#GujaratWithModiJi) ಎಂಬ ಹ್ಯಾಶ್‌ಟ್ಯಾಗ್ ಬಳಕೆ ಮಾಡಿ ಹಲವರು ಟ್ವಿಟ್ ಮಾಡಿದ್ದಾರೆ.

"ಗುಜರಾತ್ ನಮೋ ಜೊತೆಗಿತ್ತು... ಗುಜರಾತ್ ನಮೋ ಜೊತೆಗಿದೆ... ಗುಜರಾತ್ ಯಾವಾಗಲೂ ನರೇಂದ್ರ ಮೋದಿಜೀ ಜೊತೆಗಿರುತ್ತದೆ" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. ಟ್ವೀಟ್ ಮಾಡಿದವರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಿಗೆ ಸೇರಿದ ಖಾತೆಗಳು ಹೆಚ್ಚಿವೆ.

ಮೋದಿ ಭೇಟಿ ಹಿನ್ನೆಲೆ ಆಸ್ಪತ್ರೆಗೆ ಸುಣ್ಣಬಣ್ಣ ಬಲಿಯುತ್ತಿರುವ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ. ಗಾಯಾಳುಗಳ ಆರೈಕೆಗಿಂತ ಮೋದಿಯವರ ಭೇಟಿಗೆ ಆದ್ಯತೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+