PM Modi In Kerala: ಕೊಚ್ಚಿಯಲ್ಲಿ ಚರ್ಚ್‌ಗಳ ಮುಖ್ಯಸ್ಥರ ಭೇಟಿ ಮಾಡಲಿರುವ ಪ್ರಧಾನಿ ಮೋದಿ
2024ರ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಈಗಿನಿಂದಲೇ ತೆರೆಮರೆಯ ಸಿದ್ಧತೆ ಆರಂಭಿಸಿದೆ. ಬಿಜೆಪಿಗೆ ಯಾವ ನೆಲೆಯೂ ಇಲ್ಲದ ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಕೇರಳ ಪ್ರವಾಸ ಕೈಗೊಂಡಿದ್ದು, ಸೋಮವಾರ ವಿವಿಧ ಚರ್ಚ್‌ಗಳ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋಗೆ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯದ ಮೊದಲ ವಂದೇ ಮಾತರಂ ರೈಲನ್ನು ಸಹ ಲೋಕಾರ್ಪಣೆ ಮಾಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳ ಜೊತೆ ಪಕ್ಷವನ್ನು ಬಲಪಡಿಸಲು ಸಹ ಮೋದಿ ಮುಂದಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಚರ್ಚ್ ಮುಖ್ಯಸ್ಥರು ಪ್ರಧಾನಿಯನ್ನು ಭೇಟಿ ಮಾಡಲು ಆಸಕ್ತಿ ಹೊಂದಿದ್ದು, ಮೋದಿ ಮಾತುಕತೆ ನಡೆಸಲಿದ್ದಾರೆ.

ಚರ್ಚ್‌ನ ಎಂಟು ಪಂಗಡಗಳ ಮುಖಂಡರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಸೈರೋ-ಮಲಬಾರ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ, ಸೈರೋ ಮಲಂಕರ ಕ್ಯಾಥೊಲಿಕ್ ಚರ್ಚ್ ಮುಖ್ಯಸ್ಥ ಮೇಜರ್ ಆರ್ಚ್‌ಬಿಷಪ್ ಕಾರ್ಡಿನಲ್ ಬಸೆಲಿಯೊಸ್ ಕ್ಲೀಮಿಸ್ ಕ್ಯಾಥೊಲಿಕೋಸ್, ಕ್ನಾನಾಯ ಮೆಟ್ರೋಪಾಲಿಟನ್ ಕುರಿಯಾಕೋಸ್ ಮೋರ್ ಸೆವೆರಿಯೋಸ್, ಜಾಕೋಬಿಟ್ರೀ ಚರ್ಚ್ ಮುಖ್ಯಸ್ಥ ಜೋಸೆಫ್ ಕಾಳತಿಪರಂಬಿಲ್ ಮಾರ್ ಮ್ಯಾಥ್ಯೂ ಮೂಲಕ್ಕಾಟ್, ಮಲಂಕರ ಆರ್ಥೊಡಾಕ್ಸ್ ಚರ್ಚ್ ಮುಖ್ಯಸ್ಥ ಕ್ಯಾಥೊಲಿಕೋಸ್ ಬಸೆಲಿಯೊಸ್ ಮಾರ್ ಥೋಮಾ ಮ್ಯಾಥ್ಯೂಸ್-III, ವೆರಾಪೊಲಿ ಆರ್ಚ್‌ಬಿಷಪ್ ಜೋಸೆಫ್ ಕಲಾತಿಪರಂಬಿಲ್ ಮತ್ತು ಚಾಲ್ಡಿಯನ್ ಸಿರಿಯನ್ ಚರ್ಚ್ ಮುಖ್ಯಸ್ಥ ಮಾರ್ ಅವ್ಗಿನ್ ಕುರಿಯಾಕೋಸ್ ಅವರು ಪ್ರಧಾನ ಮಂತ್ರಿಯೊಂದಿಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.
ಆದರೂ ಪ್ರಧಾನಿ ಜೊತೆ ಮಾತುಕತೆ ನಡೆಸಲಿರುವ ಚರ್ಚ್ ಪ್ರತಿನಿಧಿಗಳ ಅಂತಿಮ ಪಟ್ಟಿಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. "ಅನೇಕ ಚರ್ಚ್ ನಾಯಕರು ಪ್ರಧಾನಿಯನ್ನು ಭೇಟಿಯಾಗಲು ಆಸಕ್ತೊ ಹೊಂದಿದ್ದಾರೆ. ಅಂತಹ ನಾಯಕರ ಪಟ್ಟಿಯನ್ನು ಪ್ರಧಾನಿ ಕಚೇರಿಗೆ ಕಳುಹಿಸಿದ್ದೇವೆ. ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಲು ಮತ್ತು ಸಭೆಗೆ ಸಿದ್ಧರಾಗಲು ನಾವು ಅವರನ್ನು ಕೇಳಿದ್ದೇವೆ. ಆದರೆ ಪಟ್ಟಿಯನ್ನು ಅಂತಿಮಗೊಳಿಸುವುದು ಪಿಎಂಒಗೆ ಬಿಟ್ಟದ್ದು" ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications