• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶವನ್ನು ಆರೋಗ್ಯವಾಗಿಡಲು ನಾಲ್ಕು ರಂಗಗಳಲ್ಲಿ ಸರ್ಕಾರದ ಗಮನ: ಪ್ರಧಾನಿ ಮೋದಿ

|

ನವದೆಹಲಿ, ಫೆಬ್ರವರಿ 23: ದೇಶದ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರವು ಸಮಗ್ರ ವಿಧಾನಗಳನ್ನು ತೆಗೆದುಕೊಳ್ಳುತ್ತಿದೆ. ಚಿಕಿತ್ಸೆ ಮಾತ್ರವಲ್ಲದೆ, ಯೋಗಕ್ಷೇಮದ ಮೇಲೂ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನ ಕೊಡುಗೆಗಳ ಪರಿಣಾಮಕಾರಿ ಜಾರಿಯ ಕುರಿತಾದ ವೆಬಿನಾರ್‌ನಲ್ಲಿ ಮಾತನಾಡಿದ ಪ್ರಧಾನಿ, ಆರೋಗ್ಯ ವಲಯಕ್ಕೆ ಪ್ರಸ್ತುತ ನೀಡಿರುವ ಬಜೆಟ್ ಹಂಚಿಕೆಯು ಅಭೂತಪೂರ್ವವಾಗಿದೆ. ಈ ವಲಯದಲ್ಲಿನ ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ ಎಂದರು.

ರಕ್ಷಣಾ ಉಪಕರಣಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಭಾರತ ಬದ್ಧ: ಮೋದಿ

ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಈ ಮೂಲಕ ಇದು ಜನರ ಕೈಗೆ ಕಡಿಮೆ ವೆಚ್ಚದಲ್ಲಿ ಎಟುಕುವಂತೆ ಮುಂದಿನ ಹಂತಕ್ಕೆ ಕೊಂಡೊಯ್ಯುವ ಗಳಿಗೆ ಸಮೀಪಿಸಿದೆ ಎಂದು ಅವರು ತಿಳಿಸಿದರು.

ಭಾರತವನ್ನು ಆರೋಗ್ಯವಾಗಿರಿಸಲು ಸರ್ಕಾರವು ಏಕಕಾಲಕ್ಕೆ ನಾಲ್ಕು ರಂಗಗಳಲ್ಲಿ ಕೆಲಸ ಮಾಡುತ್ತಿದೆ. ಅನಾರೋಗ್ಯ ತಡೆಯುವುದು ಮತ್ತು ಕ್ಷೇಮಕ್ಕೆ ಉತ್ತೇಜನ ನೀಡುವುದು, ಎಲ್ಲರಿಗೂ ಆರೋಗ್ಯಕ್ಷೇತ್ರದ ಸೌಲಭ್ಯ ಒದಗಿಸುವುದು, ಆರೋಗ್ಯ ಮೂಲಸೌಕರ್ಯ ಮತ್ತು ವೃತ್ತಿಪರತೆಯ ಗುಣಮಟ್ಟ ಹಾಗೂ ಸಂಖ್ಯೆಯನ್ನು ಹೆಚ್ಚಿಸುವುದು, ಸಮಸ್ಯೆಗಳನ್ನು ತಗ್ಗಿಸುವ ಯೋಜನೆಯಡಿ ಕೆಲಸ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

English summary
Prime Minister Narendra Modi in a Webinar said, government os working on four fronts to keep India healthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X