ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ರೋಡ್ ಶೋ

Posted By:
Subscribe to Oneindia Kannada

ಅಹಮದಾಬಾದ್, ಸೆಪ್ಟೆಂಬರ್ 13: ಜಪಾನ್-ಭಾರತ 12ನೇ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಅಹಮದಾಬಾದ್ ಗೆ ಆಗಮಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಲಂಗಿಸಿ ಭವ್ಯ ಸ್ವಾಗತ ಕೋರಿದರು.

ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನಿಂದ ಹಲವು ಪರೋಕ್ಷ ಲಾಭಗಳು

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮಕ್ಕೆ ತೆರಳುವ ಅಬೆ ಹಾಗೂ ಪತ್ನಿ ಅಕಿ ಅಬೆಯವರ ರೋಡ್ ಶೋ ಆರಂಭವಾಗಿದ್ದು,ದಾರಿಯುದ್ದಕ್ಕೂ ಜನರ ಜೈಕಾರ ಹಾಗೂ ವಾದ್ಯ ಮೇಳಗಳು ರೋಡ್ ಶೋಗೆ ಮೆರಗು ನೀಡಿವೆ.

PM Narendra Modi receives Japanese PM Shinzo Abe and his wife Akie Abe at Ahmedabad Airport

ಸಾಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ. 28 ರಾಜ್ಯಗಳ ಟ್ಯಾಬ್ಲೋಗಳು, ಶಾಲಾ ಮಕ್ಕಳು ರೋಡ್ ಶೋಗೆ ಕಳೆ ತುಂಬಿದೆ. ರೋಡ್ ಶೋ ಹಿನ್ನಲೆಯಲ್ಲಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆಯವರ ಹೋರ್ಡಿಂಗ್ ಮತ್ತು ಫ್ಲೆಕ್ಸ್ ಗಳನ್ನು ದಾರಿ ತುಂಬಾ ಹಾಕಲಾಗಿದೆ.

PM Narendra Modi receives Japanese PM Shinzo Abe and his wife Akie Abe at Ahmedabad Airport

ಮಹಾತ್ಮ ಗಾಂಧಿಯವರ ಸಾಬರಮತಿ ಆಶ್ರಮದಿಂದ ಉಭಯ ನಾಯಕರು 16ನೇ ಶತಮಾನದ ಸಿದಿ ಸಯ್ಯದ್ ಕಿ ಜಾಲಿ ಮಸೀದಿಗೆ ಭೇಟಿ ನೀಡಲಿದ್ದಾರೆ. ನಂತರ ಉಭಯ ನಾಯಕರು ಅಹಮದಾಬಾದ್ ನ ಖ್ಯಾತ ರೆಸ್ಟೋರೆಂಟ್ ನಲ್ಲಿ ರಾತ್ರಿಯ ಊಟ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PM Narendra Modi receives Japanese PM Shinzo Abe and his wife Akie Abe at Ahmedabad Airport on Sept 13.Abe is coming to India on a two-day visit to attend the India-Japan annual summit meeting.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ