ಮೋದಿ ಈಗ ಫೇಸ್ ಬುಕ್ಕಿನಲ್ಲಿ ಅತ್ಯಂತ ಜನಪ್ರಿಯ ನಾಯಕ
ಜನಪ್ರಿಯ ಸಾಮಾಜಿಕ ಜಾಲ ತಾಣದಲ್ಲಿ ಅತ್ಯಂಅತ ಜನಪ್ರಿಯ ಸಕ್ರಿಯ ಪ್ರಭಾವಿ ಜಾಗತಿಕ ನಾಯಕರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೊರ ಹೊಮ್ಮಿದ್ದಾರೆ.
ನವದೆಹಲಿ, ಫೆಬ್ರವರಿ 22: ಜನಪ್ರಿಯ ಸಾಮಾಜಿಕ ಜಾಲ ತಾಣದಲ್ಲಿ ಅತ್ಯಂಅತ ಜನಪ್ರಿಯ ಸಕ್ರಿಯ ಪ್ರಭಾವಿ ಜಾಗತಿಕ ನಾಯಕರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೊರ ಹೊಮ್ಮಿದ್ದಾರೆ. ಫೇಸ್ ಬುಕ್ ನಲ್ಲಿ ಸರಿ ಸುಮಾರು 40 ಮಿಲಿಯನ್ ಹಿಂಬಾಲಕರನ್ನು ಮೋದಿ ಅವರು ತಮ್ಮ ವೈಯಕ್ತಿಕ ಪೇಜ್ ನಲ್ಲಿ ಹೊಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ ನಾಯಕರ ಬಗ್ಗೆ ಬುರ್ಸನ್- ಮಾರ್ಸ್ಟೆಲ್ಲರ್ ಸಂಸ್ಥೆ ಸಮೀಕ್ಷೆ ನಡೆಸಿ ವರದಿಯನ್ನು ಪ್ರಕಟಿಸಿದ್ದು, ಮೋದಿ ಅವರು ನಂ.1 ಸ್ಥಾನದಲ್ಲಿದ್ದರೆ, ಡೊನಾಲ್ಡ್ ಟ್ರಂಪ್ ಅವರು ಎರಡನೆ ಸ್ಥಾನದಲ್ಲಿದ್ದಾರೆ.

ಸುಮಾರು 169 ಸರ್ಕಾರಗಳ 559 ಫೇಸ್ ಬುಕ್ ಪೇಜ್ ಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗಿದೆ. 87 ರಾಜ್ಯ ಪ್ರಮುಖರು, 70 ಪ್ರಧಾನ ಮಂತ್ರಿಗಳು ಹಾಗೂ 55 ಸಚಿವರುಗಳ ಫೇಸ್ ಬುಕ್ ಅಂಕಿ ಅಂಶ ಕಲೆ ಹಾಕಿ ಈ ಫಲಿತಾಂಶ ನೀಡಲಾಗಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 20 ಮಿಲಿಯನ್ ಲೈಕ್ಸ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೆ ಸ್ಥಾನದಲ್ಲಿ ಪ್ರಧಾನಿ ಸಚಿವಾಲಯವಿದ್ದು 13 ಮಿಲಿಯನ್ ಹಿಂಬಾಲಕರಿದ್ದಾರೆ.
ಮೋದಿ ಅವರು ಹೆಚ್ಚು ಲೈಕ್ಸ್, ಕಾಮೆಂಟ್ಸ್ ಹಾಗೂ ಷೇರ್ ಗಳನ್ನು ಫೇಸ್ ಬುಕ್ ಪುಟದಲ್ಲಿ ಪಡೆದಿದ್ದಾರೆ. ಇದೆಲ್ಲವೂ 2016ರ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿರುವ ವರದಿಯಾಗಿದೆ.
ನಂ 7 ರೇಸ್ ಕೋರ್ಸ್ ರಸ್ತೆ(ಈಗ ಲೋಕ ಕಲ್ಯಾಣ ಮಾರ್ಗ್) ನಿವಾಸದಲ್ಲಿ ಅವರ ತಾಯಿಯನ್ನು ಭೇಟಿಯಾದ ಚಿತ್ರ ಅತ್ಯಂತ ಜನಪ್ರಿಯ ಪೋಸ್ಟ್ ಗಳಲ್ಲಿ ಒಂದೆನಿಸಿದೆ. ಮೋದಿ ಅವರಿಗಿಂತ ಹೆಚ್ಚು ಹಿಂಬಾಲಕರನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪಡೆದಿದ್ದರೂ ಈಗ ಸಕ್ರಿಯವಾಗಿಲ್ಲ.












Click it and Unblock the Notifications