ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ

ಬೆಂಗಳೂರು, ನ.01: ಪ್ರಧಾನಿ ನರೇಂದ್ರ ಮೊದಿ ಅವರು ಕರ್ನಾಟಕದ ಸಮಸ್ತ ಜನತೆಗೆ 'ಕನ್ನಡ ರಾಜ್ಯೋತ್ಸವ' ದ ಶುಭ ಹಾರೈಕೆ ಸಂದೇಶ ನೀಡಿದ್ದಾರೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಆಂಗ್ಲಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

1956ರಂದು ಭಾಷೆ ಆಧಾರದ ಮೇಲೆ ರಾಜ್ಯ ವಿಂಗಡಣೆಯಾಗಿ, ಕನ್ನಡ ಭಾಷಿಗರನ್ನು ಒಟ್ಟುಗೂಡಿಸಿ ಹೊಸ ರಾಜ್ಯ ಸ್ಥಾಪನೆ ಮಾಡಲಾಯಿತು.

ಪ್ರಧಾನಿ ಅವರು ತಮ್ಮ ಸಂದೇಶದಲ್ಲಿ ಕರ್ನಾಟಕ ರಾಜ್ಯದ ಜನತೆಗೆ ರಾಜ್ಯ ಸ್ಥಾಪನೆ ದಿನಾಚರಣೆ ಶುಭ ಹಾರೈಕೆಗಳು. ಕರ್ನಾಟಕ ರಾಜ್ಯ ಪ್ರಗತಿಯ ಉತ್ತುಂಗಕ್ಕೇರಲಿ ಎಂದಿದ್ದಾರೆ.

Narendra Modi

ಇದರ ಬೆನ್ನಲ್ಲೇ ನವೆಂಬರ್ 1 ರಂದು ರಾಜ್ಯ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವ ಚತ್ತೀಸ್ ಗಢ, ಹರಿಯಾಣ,ಮಧ್ಯಪ್ರದೇಶ ರಾಜ್ಯಗಳಿಗೂ ಶುಭ ಸಂದೇಶ ಕೋರಿದ್ದಾರೆ. ಚತ್ತೀಸ್ ಗಢ 2000ನೇ ಇಸವಿಯಲ್ಲಿ, ಹರ್ಯಾಣ 1966 ಸ್ಥಾಪನೆಯಾಯಿತು.

ಪ್ರಧಾನಿ ಮೋದಿ ಅವರ ಸಂದೇಶದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಕನ್ನಡ ಭಾಷೆ ಬಳಕೆ ಮಾಡಿಲ್ಲ ಎಂದು ಸದ್ಯಕ್ಕಂತೂ ಯಾರೂ ಸೊಲ್ಲೆತ್ತಿಲ್ಲ. ಚತ್ತೀಸ್ ಗಢ ಸುಂದರ ಜನತೆ ಹಾಗೂ ನೈಸರ್ಗಿಕ ಸಂಪತ್ತು ಹೊಂದಿದೆ. ಹರ್ಯಾಣ 'ಜೈ ಜವಾನ್ ಜೈ ಕಿಸಾನ್' ಘೋಷಣೆ ಅನುಷ್ಠಾನ ಮಾಡಿಕೊಂಡ ರಾಜ್ಯ ಎಂದು ಮೋದಿ ಅವರು ತಮ್ಮ ಟ್ವೀಟ್ ನಲ್ಲಿ ಹೊಗಳಿದ್ದಾರೆ.

2014ರಲ್ಲಿ ಮೋದಿ ಅವರು ಶುಭ ಹಾರೈಸಿದ್ದು ಹೀಗೆ:

PM Narendra Modi greets Karnataka on state formation day

ಮೋದಿ ಅವರ ಶುಭ ಹಾರೈಕೆ ಸಂದೇಶ ಹೀಗಿದೆ:


(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+