ಲೋಕಸಭೆಯಲ್ಲಿ ಮೋದಿ ಭಾಷಣ : ಮುಖ್ಯಾಂಶಗಳು
ನವದೆಹಲಿ, ಫೆ. 27 : 'ನರೇಗಾ ಯೋಜನೆ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಜಲ್ವಂತ ನಿರ್ದೇಶನ' ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಸರ್ಕಾರದಿಂದ ಬಳುವಳಿಯಾಗಿ ಬಂದಿರುವ ಸಮಸ್ಯೆಗಳನ್ನು ಬಗೆಹರಿಸಲು ಎನ್‌ಡಿಎ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಪಕ್ಷ ಕಾಂಗ್ರೆಸ್‌ಅನ್ನು ಮಾತಿನಲ್ಲಿಯೇ ತರಾಟೆಗೆ ತೆಗೆದುಕೊಂಡ ಮೋದಿ, ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿದರು. [ಉದ್ಯೋಗ ಖಾತ್ರಿಯಡಿ ಸಚಿನ್, ಬಚ್ಚನ್ ಕೆಲಸ!]

ಸರ್ಕಾರ ಕೆಲವು ಹಳೆಯ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಹೆಸರುಗಳನ್ನು ಬದಲಾಯಿಸುವುದು ನಮ್ಮೆದುರಿನ ಸಮಸ್ಯೆಯೇ ಅಲ್ಲ, ಬದಲು ಅಭಿವೃದ್ಧಿ ಸಾಧಿಸಲು ಯತ್ನಿಸುವುದು ಮಾತ್ರವೇ ಸವಾಲು ಎಂದು ಹೇಳಿದರು.
ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆ (ನರೇಗಾ) ಹೆಸರನ್ನು ಸರ್ಕಾರ ಬದಲಾವಣೆ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಈ ಯೋಜನೆ ಒಂದು ಜ್ವಲಂತ ಉದಾಹರಣೆ. ಆದ್ದರಿಂದ ಅದರ ಹೆಸರನ್ನು ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ತಿಳಿಸಿದರು.

ಭೂ ಸ್ವಾಧೀನ ಕಾಯ್ದೆ ರೈತರ ವಿರೋಧಿಯಾಗಿದ್ದರೆ ಅದರಲ್ಲಿ ಅಗತ್ಯ ತಿದ್ದುಪಡಿ ಮಾಡಲು ಸಿದ್ಧವಿದ್ದೇವೆ ಎಂದು ಹೇಳಿದ ಪ್ರಧಾನಿ ಮೋದಿ, ವಿಧೇಯಕವನ್ನು ಅಂಗೀಕರಿಸಲು ವಿಪಕ್ಷಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.












Click it and Unblock the Notifications