ಪಿಎಂ ಮೋದಿಗೆ ಅರಬ್ ರಾಷ್ಟ್ರದ 'ಅತ್ಯುನ್ನತ ನಾಗರಿಕ' ಪ್ರಶಸ್ತಿ

ನವದೆಹಲಿ, ಆ 19: ಪ್ರಧಾನಿ ನರೇಂದ್ರ ಮೋದಿ ಇದೇ ಬರುವ ಶುಕ್ರವಾರದಿಂದ (ಆಗಸ್ಟ್ 23) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹ್ರೇನ್‌ಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭೇಟಿಯ ಸಮಯದಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಉತ್ತೇಜನ ನೀಡಿದ ಅವರ ನಾಯಕತ್ವವನ್ನು ಗುರುತಿಸಿ ಅರಬ್ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ಜಾಯೆದ್' ಅನ್ನು ಪ್ರಧಾನಿ ಮೋದಿಗೆ ನೀಡಿ ಗೌರವಿಸಲಾಗುತ್ತದೆ.

"ಯುಎಇ ಸಂಸ್ಥಾಪಕರಾದ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯನ್ನು ಶೇಖ್ ಜಾಯೆದ್ ಅವರ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಪ್ರಧಾನಿ ಮೋದಿಗೆ ನೀಡುತ್ತಿರುವುದು ವಿಶೇಷ" ಎಂದು ವಿದೇಶಾಂಗ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

PM Modi To Receive Highest UAE Civil Award On August 23rd

ಅರಬ್ ರಾಷ್ಟ್ರದಲ್ಲಿ 3.3 ಮಿಲಿಯನ್ ಭಾರತೀಯ ಸಮುದಾಯವಿದೆ. ಪ್ರಧಾನಿಗಳ ಈ ಭೇಟಿ ಯುಎಇಯೊಂದಿಗಿನ ಸ್ನೇಹಪರ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ "ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಮೋದಿ ತಮ್ಮ ಭೇಟಿಯ ವೇಳೆ, ಅಬುದಾಬಿಯ ಯುವರಾಜ, ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

ಸುಮಾರು 60 ಶತಕೋಟಿ ಡಾಲರ್ ಗಳಷ್ಟು ವಾರ್ಷಿಕ ದ್ವಿಪಕ್ಷೀಯ ವ್ಯಾಪಾರದೊಂದಿಗೆ, ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+