ತಮಿಳುನಾಡಿನ ಶೈವಪಂಥದ ಮಠಾಧೀಶರಿಗೆ ಮೋದಿಯಿಂದ ರೆಡ್ ಕಾರ್ಪೆಟ್: ಇದರ ಹಿಂದಿದೆ ಭಾರೀ ರಾಜಕೀಯ ಲೆಕ್ಕಾಚಾರ
ಬೆಂಗಳೂರು, ಮೇ 30: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ 19 ಶೈವ ಮಠಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಅವರು ರೆಡ್‌ಕಾರ್ಪೆಟ್ ಹಾಸಿದ್ದಾರೆ. ಮೋದಿ ಅವರು ಈ ಹಿಂದಿನಿಂದಲೂ ತಮಿಳು ಭಾಷೆ ಹಾಗೂ ಸಂಪ್ರದಾಯಗಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈಗ ನೂತನ ಸಂಸತ್ ಭವನದ ಉದ್ಘಾಟನೆಗೆ ತಮಿಳುನಾಡಿನ ಮಠಾಧೀಶರನ್ನು ಕರೆಸಿರುವುದರ ಹಿಂದೆ ಭಾರೀ ರಾಜಕೀಯ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ. 'ಡೆಕ್ಕನ್ ಹೆರಾಲ್ಡ್' ಪ್ರಕಟಿಸಿರುವ ಈ ವರದಿಯನ್ನು ಓದಿ ತಿಳಿಯಿರಿ.
ಪ್ರಧಾನಿ ಮೋದಿ ಅವರು ಅಧೀನ ಮಠಗಳಿಗೆ ಅಪಾರ ಗೌರವ ನೀಡಿರುವುದರಿಂದ ಹೊಳಪು ಕಳೆದುಕೊಂಡಿರುವ ತಮಿಳು ಶೈವ ಮಠಗಳನ್ನು ಪುನರುಜ್ಜೀವನಗೊಳಿಸುವುದಿಲ್ಲ. ಆದರೆ, ಇದರಿಂದ ಒಬಿಸಿಗಳು ಮತ್ತು ಇತರ ಜಾತಿಗಳನ್ನು ತಲುಪಬಹುದು. ಆ ಮೂಲಕ ತಮಿಳುನಾಡಿನಲ್ಲಿ ಪಕ್ಷದ ರಾಜಕಾರಣಕ್ಕೆ ಸಹಾಯವಾಗುತ್ತದೆ ಎಂದು ಬಿಜೆಪಿ ನಂಬಿದೆ ಎನ್ನಲಾಗುತ್ತಿದೆ.

ಈ ವರೆಗೂ ಬಿಜೆಪಿಯ ಹಿಂದುತ್ವ ರಾಜಕೀಯವು ಏಕೈಕ ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಹೆಚ್ಚು ಕೆಲಸ ಮಾಡಿಲ್ಲವೆಂಬುದು ಚುನಾವಣಾ ಫಲಿತಾಂಶದಿಂದ ತಿಳಿದುಬಂದಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಲಿಂಗಾಯತ ಹಾಗೂ ನಾಥ ಪಂಥದ ಮಠಗಳನ್ನು ಬಿಜೆಪಿ ಟಾರ್ಗೆಟ್ ಮಾಡಿತ್ತು. ಈ ಮೂಲಕ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವನ್ನು ತಲುಪುವಲ್ಲಿ ಸ್ಪಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು.
ತಮಿಳುನಾಡಿನ ಹೆಚ್ಚಿನ ಅಧೀನರು ಮೇಲ್ವರ್ಗದ ವೆಲ್ಲಲರ್ ಸಮಯದಾಯಕ್ಕೆ ಸೇರಿದವರಾಗಿದ್ದಾರೆ. ಅವರ ಅನುಯಾಯಿಗಳು ಒಬಿಸಿ ಸೇರಿದಂತೆ ಹಲವಾರು ಸಮುದಾಯಗಳಿಂದ ಬಂದಿದ್ದಾರೆ. ಅವರು ರಾಜ್ಯದ ನಾಲ್ಕು ಮಠಗಳ ಮುಖ್ಯಸ್ಥರೂ ಆಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
'ಮಠಗಳನ್ನು ಅವುಗಳ ಹಿಂದಿನ ವೈಭವವನ್ನು ಮರಳಿ ಕೊಡಲು ಅಧೀನರನ್ನು ಸೆಳೆಯಬೇಕಿದೆ. ಇದು ನಮ್ಮ ಪ್ರಾಥಮಿಕ ಗುರಿಯಾಗಿದೆ. ಒಂದು ದೇಶದ ಪ್ರಧಾನ ಮಂತ್ರಿಯು ಮಠಾಧೀಶರನ್ನು ಗೌರವಿಸಿದಾಗ, ಅವರ ಅನುಯಾಯಿಗಳು ಹೆಚ್ಚಾಗುತ್ತಾರೆ. ಅದು ಆಧ್ಯಾತ್ಮಿಕತೆಯನ್ನು ಪುನರುಜ್ಜೀವನಗೊಳಿಸುತ್ತದೆ. ಕಾಯುವ ಅವಧಿ ದೀರ್ಘವಾಗಿದ್ದರೂ ಇದು ರಾಜಕೀಯವಾಗಿ ನಮಗೆ ಸಹಾಯ ಮಾಡುತ್ತದೆ ಎಂಬುದಾಗಿ ನಾವು ನಂಬುತ್ತೇವೆ' ಎಂದು ತಿಳಿಸಿದ್ದಾರೆ.

ಅಧೀನರು ಯಾವಾಗಲೂ ಬಿಜೆಪಿಯಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಇದಕ್ಕೆ ಕಾರಣ ಬಿಜೆಪಿ ಬ್ರಾಹ್ಮಣರ ಪಕ್ಷವೆಂದು ಬಿಂಬಿತವಾಗಿತ್ತು. ಬಹುತೇಕ ಎಲ್ಲರೂ ದ್ರಾವಿಡ ಪಕ್ಷಗಳಾದ ಡಿಎಂಕೆ ಅಥವಾ ಎಐಎಡಿಎಂಕೆಗೆ ಹತ್ತಿರವಾಗಿದ್ದಾರೆ ಎಂದು ಪರಿಗಣಿಸಲಾಗಿದೆ.
2022ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಮಾಯಿಲಾಡುತುರೈನಲ್ಲಿ ನಡೆದ ಧರ್ಮಪುರಂ ಅಧೀನಂನ ಪತ್ತಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಧೀನರನ್ನು ತಲುಪುವ ಮೊದಲ ಪ್ರಯತ್ನವನ್ನು ಅವರು ಮಾಡಿದರು.
ಮಠಗಳು ಸಾಕಷ್ಟು ದೇವಾಲಯಗಳನ್ನು ನಿಯಂತ್ರಿಸುತ್ತವೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತವೆ. ಜೊತೆಗೆ ಬೃಹತ್ ಭೂಮಿಯನ್ನು ಹೊಂದಿವೆ. ಉದಾಹರಣೆಗೆ, ಕೊಯಮತ್ತೂರಿನ ಹೊರವಲಯದಲ್ಲಿರುವ ಪೇರೂರ್ ಮಠವು ಹಲವಾರು ಸಮುದಾಯಗಳ ಜನರಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದೆ.

ಕೇಂದ್ರ ಸರ್ಕಾರವು ಕಾಶಿ ತಮಿಳು ಸಂಗಮಮ್ ಹಬ್ಬಕ್ಕೆ ಕೆಲವು ಅಧೀನರನ್ನು ಆಹ್ವಾನಿಸಿತ್ತು. ಆ ನಂತರ ನಿರಂತರವಾಗಿ ಅಧೀನರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ತಮಿಳು ಶೈವರ ಪ್ರಸಿದ್ಧ ಕವಿಗಳಿಂದ 1,500 ವರ್ಷಗಳ ಹಿಂದೆ ಸ್ಥಾಪಿಸಿದ ಮಧುರೈ ಅಧೀನಂನ ಮುಖ್ಯಸ್ಥ ತಿರುಜ್ಞಾನ ಸಂಬಂಧರ್ ಅವರು ಸೆಂಗೋಲನ್ನು ಮೋದಿಗೆ ಹಸ್ತಾಂತರಿಸಿದರು.
ಕಾಶಿ ತಮಿಳು ಸಂಗಮಂ ಉತ್ಸವದಲ್ಲಿ ಭಾಗವಹಿಸಲು ಕೆಲವು ಅಧೀನರು ಹಿಂದೇಟು ಹಾಕಿದ್ದರು ಎಂದು ಮತ್ತೊಬ್ಬ ನಾಯಕ ಹೇಳಿದರು. ಏಕೆಂದರೆ ಬಿಜೆಪಿ ತನ್ನ ರಾಜಕೀಯಕ್ಕೆ ತಮ್ಮನ್ನು ಬಳಸಿಕೊಳ್ಳುತ್ತದೆ ಎಂಬ ಆತಂಕವನ್ನು ಕೆಲ ಅಧೀನರು ವ್ಯಕ್ತಪಡಿಸಿದ್ದಾರೆ.
'ಆದರೆ ಸಂಸತ್ತಿನ ಕಾರ್ಯಕ್ರಮಕ್ಕೆ, ಅಧೀನರಿಂದ ಯಾವುದೇ ಪ್ರತಿರೋಧವಿರಲಿಲ್ಲ. ಅಂದರೆ ಅವರು ನಮ್ಮನ್ನು ನಂಬಲು ಪ್ರಾರಂಭಿಸಿದ್ದಾರೆ. ನಾವು ಇನ್ನು ಮುಂದೆ ಅಧೀನರೊಂದಿಗೆ ನಮ್ಮ ಸಂಪರ್ಕವನ್ನು ಹೆಚ್ಚಿಸುತ್ತೇವೆ' ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಡಿಎಂಕೆ ವಿರುದ್ಧ ಬಹಿರಂಗವಾಗಿಯೇ ಮಧುರೈ ಅಧೀನಂ ವಾಗ್ದಾಳಿ ನಡೆಸಿದೆ. ಆಡಳಿತ ಪಕ್ಷದ ಸದಸ್ಯರಿಂದಲೂ ಈ ಪೀಠದ ಮೇಲೆ ದಾಳಿಗಳು ನಡೆದಿವೆ. ಬಿಜೆಪಿ ಅಧೀನರನ್ನು ಬಳಸಿಕೊಳ್ಳುತ್ತಿದೆ ಎಂದೂ ಡಿಎಂಕೆ ನಾಯಕರು ಹೇಳುತ್ತಿದ್ದಾರೆ.
ಮೂಲತಃ ಜಾತಿ ಮತ್ತು ಸಾಮಾಜಿಕ ಸಂಘಟನೆಗಳ ಜೊತೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಬಿಜೆಪಿಯು ಕರ್ನಾಟಕದ ಮಾದರಿಯನ್ನು ತಮಿಳುನಾಡಿನಲ್ಲಿ ಅನ್ವಯಿಸಲು ಬಯಸುತ್ತಿರುವಂತೆ ತೋರುತ್ತಿದೆ ಎಂದು ಅಮೆರಿಕದ ಡೆನ್ವರ್‌ನ ಜೋಸೆಫ್ ಕೊರ್ಬೆಲ್ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ರಾಮು ಮಣಿವಣ್ಣನ್ 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
ಆದರೆ ತಮಿಳುನಾಡಿನ ಸಾಮಾಜಿಕ ಮತ್ತು ಪ್ರಜಾಸತ್ತಾತ್ಮಕ ರಚನೆಯು ಕರ್ನಾಟಕಕ್ಕಿಂತ ಭಿನ್ನವಾಗಿದೆ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಬಿಜೆಪಿಯು ತನ್ನ ಕೋಮುವಾದಿ ಅಜೆಂಡಾವನ್ನು ಮುನ್ನೆಲೆಗೆ ತಂದರೆ, ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸೆಂಗೋಲ್ ಅನ್ನು ಸಂಸತ್ತಿನಲ್ಲಿ ಇಡುವುದು ಕೂಡ ಒಂದು ತಂತ್ರವಾಗಿದೆ. ಸೆಂಗೋಲ್ ಅನ್ನು ಇಟ್ಟುಕೊಂಡು ಹಿಂದಿಯನ್ನು ರಾಷ್ಟ್ರೀಯ ಭಾಷೆಯ ರೂಪದಲ್ಲಿ ನೋಡುವುದು ತಮಿಳುನಾಡಿನಲ್ಲಿ ಲಾಭ ತಂದುಕೊಡುವುದಿಲ್ಲ ಎಂದು ಮಣಿವಣ್ಣನ್ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಅಧೀನರು ಶ್ರೀಮಂತ ಸಂಪ್ರದಾಯವನ್ನು ಹೊಂದಿದ್ದಾರೆ ಮತ್ತು ಶಿವನ ಸ್ತುತಿಗಾಗಿ ತಮಿಳಿನಲ್ಲಿ ಸ್ತೋತ್ರಗಳನ್ನು ಹೊರತರುವುದು ಸೇರಿದಂತೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪುರಾತನವಾದ ಮಧುರೈ ಅಧೀನಂ ಅನ್ನು 63 ನಾಯನ್ಮಾರ್‌ಗಳಲ್ಲಿ ಪ್ರಮುಖರಾದ ತಿರುಜ್ಞಾನ ಸಂಬಂಧರ್ ಅವರು ಪುನರುಜ್ಜೀವನಗೊಳಿಸಿದರು. ಅವರು 6 ನೇ ಮತ್ತು 10 ನೇ ಶತಮಾನದ ನಡುವೆ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಇದು 16 ನೇ ಶತಮಾನದಲ್ಲಿ ಗುರು ಜ್ಞಾನಸಂಬಂದರ್ ಸ್ಥಾಪಿಸಿದ ಧರುಮಪುರಂ ಮಠವಾಗಿದೆ .












Click it and Unblock the Notifications