ಪ್ರಧಾನಿ ಮೋದಿ ವಿರುದ್ದ ರಮ್ಯಾ ಅಸಹಿಷ್ಣುತೆ: ಟ್ವಿಟ್ಟಿಗರ ತಿರುಗೇಟು

ರಾಷ್ಟ್ರೀಯ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯ ಸ್ಪಂದನಾ ಆಲಿಯಾಸ್ ರಮ್ಯಾ, ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಟ್ವಿಟ್ಟರ್ ನಲ್ಲಿ ಲೇವಡಿ. ರಮ್ಯಾ ಟ್ವೀಟಿಗೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ವಿರೋಧ.

ರಾಷ್ಟ್ರೀಯ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯ ಸ್ಪಂದನಾ ಆಲಿಯಾಸ್ ರಮ್ಯಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಟ್ವಿಟ್ಟರ್ ನಲ್ಲಿ ಲೇವಡಿ ಮಾಡಿದ್ದಾರೆ.

ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಬಾರಿ ವಿದೇಶ ಪ್ರವಾಸ ಮಾಡಿದ್ದರೋ, ಅದಕ್ಕಿಂತ ಹೆಚ್ಚಿನ ಪ್ರವಾಸ ಈಗಿನ ಪ್ರಧಾನಿ ಮೋದಿ ಮೂರೇ ವರ್ಷದಲ್ಲಿ ಮಾಡಿದ್ದಾರೆಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ನಿರೀಕ್ಷೆಯಂತೆ, ಮೋದಿ ವಿದೇಶ ಪ್ರವಾಸದ ರಮ್ಯಾ ಟ್ವೀಟಿಗೆ ಪರವಿರೋಧ ಟ್ವೀಟುಗಳು ಹರಿದುಬರುತ್ತಿದೆ. NDTVಯ ಲೇಖನವನ್ನು ತನ್ನ ಟ್ವಿಟ್ಟರ್ ಅಕೌಂಟಿನಿಂದ ಫಾರ್ವರ್ಡ್ ಮಾಡಿರುವ ರಮ್ಯಾ, ಮನಮೋಹನ್ ಸಿಂಗ್ 2004-09 ಮತ್ತು 2009-14ರ ಅವಧಿಯಲ್ಲಿ ಮೋದಿಯ ಹಾಗೇ ವಿದೇಶ ಪ್ರವಾಸ ಮಾಡಿಲ್ಲ ಎಂದಿದ್ದಾರೆ.

ನಮ್ಮ ಸೈನಿಕರ ಜೀವದ ಬೆಲೆಯನ್ನು ಕೇಂದ್ರ ಸರಕಾರ ಅರಿತಿದ್ದರೆ, ದೇಶದ ವಿದೇಶಾಂಗ ನೀತಿಯನ್ನು ಮೋದಿ ಸರಕಾರ ಇನ್ನಷ್ಟು ಬಿಗಿಗೊಳಿಸುತ್ತಿತ್ತು ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ರಮ್ಯಾ ಟ್ವೀಟಿಗೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ವಿರೋಧ ವ್ಯಕ್ತವಾಗಿದ್ದು, ಅದರ ಕೆಲವೊಂದು ಸ್ಯಾಂಪಲ್ ಗಳು ಮುಂದೆ ಓದಿ..

ಹಿಂದೂ ಮುಸ್ಲಿಂ

ಹಿಂದೂ ಮುಸ್ಲಿಂ

ಹಿಂದೂ ಮುಸ್ಲಿಂ ಏಕತೆ ನಮ್ಮ ಬಾಲ್ಯದಲ್ಲಿ ಏನಿದ್ದವೋ ಅದು ಮೋದಿಯ ಭಾರತದಲ್ಲಿ ಕಾಣೆಯಾಗಿದೆ.

ರಮ್ಯಾ ಟ್ವೀಟ್

ರಮ್ಯಾ ಟ್ವೀಟ್

ರಮ್ಯಾ ಹಿಂದೂ - ಮುಸ್ಲಿಂ ಟ್ವೀಟಿಗೆ ಬಂದ ಕೆಲವೊಂದು ಉತ್ತರಗಳು ಹೀಗಿವೆ...

ಮೋದಿ ವಿದೇಶ ಪ್ರವಾಸ

ಮೋದಿ ವಿದೇಶ ಪ್ರವಾಸ

ಮನಮೋಹನ್ ಸಿಂಗ್ ಅವರ ವಿದೇಶ ಪ್ರವಾಸವನ್ನು ಹೋಲಿಸಿ ರಮ್ಯಾ ಮಾಡಿದ ಟ್ವೀಟಿಗೆ, ಯಾರು ಎಷ್ಟು ಸಾರಿ ವಿದೇಶಕ್ಕೆ ಹೋದರು ಎನ್ನುವುದು ಮುಖ್ಯವಲ್ಲ. ಪ್ರವಾಸದಿಂದ ದೇಶಕ್ಕಾದ ಲಾಭ ಏನು ಅನ್ನೋದು ಮುಖ್ಯ ಎಂದು ಕೆಲವರು ರಮ್ಯಾ ಕಾಲೆಳೆದಿದ್ದಾರೆ.

ಮೋದಿಗೆ ಭವ್ಯ ಸ್ವಾಗತ

ಮೋದಿಗೆ ಭವ್ಯ ಸ್ವಾಗತ

ವಿದೇಶಕ್ಕೆ ಮೋದಿ ಹೋದಾಗ ಅಲ್ಲಿ ಅವರನ್ನು ಸ್ವಾಗತಿಸಲು ಸಾವಿರಾರು ಜನ ನೆರೆದಿರುತ್ತಾರೆ, ಮನಮೋಹನ್ ಸಿಂಗ್ ಹೋದಾಗ ಯಾರಾದರೂ ಬರುತ್ತಿದ್ರಾ?

ಮಂಡ್ಯದಲ್ಲಿ ಸೋತ ನಂತರ ರಮ್ಯಾ ನಾಪತ್ತೆ

ಮಂಡ್ಯದಲ್ಲಿ ಸೋತ ನಂತರ ರಮ್ಯಾ ನಾಪತ್ತೆ

ಮೋದಿ ದೇಶದ ಅಭಿವೃದ್ದಿಗಾಗಿ ವಿದೇಶ ಪ್ರವಾಸ ಮಾಡುತ್ತಾರೆ, ಮಜಾ ಮಾಡಲಿಕ್ಕಲ್ಲ ಎನ್ನುವುದೊಂದು ರಮ್ಯಾ ಟ್ವೀಟಿಗೆ ಉತ್ತರವಾದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಮ್ಮ ಕ್ಷೇತ್ರದತ್ತ ಕಣ್ಣೆತ್ತಿಯೂ ನೋಡದ ನೀವು, ದೇಶ ವಿದೇಶದಲ್ಲಿ ಸುತ್ತಾಡಿಕೊಂಡಿದ್ದೀರಿ. ಮಾಜಾ ಮಾಡಲು ಟೂರ್ ಹೋಗೋ ನೀವು ಮೋದಿಯನ್ನು ಪ್ರಶ್ನೆ ಮಾಡಬಾರದು ಅನ್ನೋದು ಇನ್ನೊಂದು ಟ್ವೀಟ್.

ಮೋದಿ ವಿರುದ್ದ ರಮ್ಯಾ ಟ್ವೀಟ್

ಮೋದಿ ವಿರುದ್ದ ರಮ್ಯಾ ಟ್ವೀಟ್

ಮೋದಿ ವಿದೇಶ ಪ್ರವಾಸದ ಬಗ್ಗೆ ರಮ್ಯಾ ಮಾಡಿರುವ ಟ್ವೀಟಿಗೆ ಬಂದ ಕೆಲವೊಂದು ಉತ್ತರಗಳನ್ನು, ನೀವೇ ಓದಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+