ಕುಸ್ತಿಪಟು ಅಂಕಿತ್ ಬೈಯನ್‌ಪುರಿಯಾ ಜೊತೆ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಸಾವಿರಾರು ಜನರು ಇಂದು ಗಾಂಧಿ ಜಯಂತಿಯ ಪೂರ್ವಭಾವಿಯಾಗಿ ಒಂದು ಗಂಟೆಗಳ ಕಾಲ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಪಿಎಂ ಮೋದಿ ಅವರು ಫಿಟ್‌ನೆಸ್ ಪ್ರಭಾವಿ ಅಂಕಿತ್ ಬೈಯನ್‌ಪುರಿಯಾ ಅವರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು, ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಕೂಡ ಮಾತನಾಡಿದರು.

ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಪಿಎಂ ಮೋದಿ, "ಇಂದು, ದೇಶದಲ್ಲಿ ಸ್ವಚ್ಛತೆ ಕಡೆ ಗಮನ ನೀಡುವ ಜೊತೆ, ಅಂಕಿತ್ ಬೈಯನ್‌ಪುರಿಯಾ ಕೂಡ ಭಾಗವಹಿಸಿದ್ದೇವೆ, ಸ್ವಚ್ಛತೆಯ ಹೊರತಾಗಿ, ನಾವು ಫಿಟ್‌ನೆಸ್ ಮತ್ತು ಯೋಗಕ್ಷೇಮದ ಬಗ್ಗೆ ಕೂಡ ಮಾತನಾಡುತ್ತೇವೆ, ಸ್ವಚ್ಛ ಮತ್ತು ಆರೋಗ್ಯವಂತ ಭಾರತ ಆಗಬೇಕು" ಎಂದು ಹೇಳಿದರು.
ಪ್ರಧಾನಿ ಮೋದಿಯಲ್ಲದೆ, ಕೇಂದ್ರ ಸಚಿವರು ಸೇರಿದಂತೆ ಹಲವಾರು ಬಿಜೆಪಿ ನಾಯಕರು ದೇಶದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಂಡರು. ಗೃಹ ಸಚಿವ ಅಮಿತ್ ಶಾ ಅಹಮದಾಬಾದ್‌ನಲ್ಲಿ ಭಾಗವಹಿಸಿದರೆ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ದೆಹಲಿಯಲ್ಲಿ ಪಾಲ್ಗೊಂಡರು.
ಸ್ವಚ್ಛತಾ ಅಭಿಯಾನಕ್ಕೆ ಮೋದಿ ಕರೆ
"ಮನ್ ಕಿ ಬಾತ್" ನ ಇತ್ತೀಚಿನ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಎಲ್ಲಾ ನಾಗರಿಕರು ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ ಮಾಡುವಂತೆ ಮನವಿ ಮಾಡಿದ್ದರು ಮತ್ತು ಜನ್ಮದಿನದ ಮುನ್ನಾದಿನದಂದು ಮಹಾತ್ಮ ಗಾಂಧಿಯವರಿಗೆ "ಸ್ವಚ್ಛಾಂಜಲಿ" ಎಂದು ಹೇಳಿದರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು "ಒಂದನೇ ತಾರೀಕು, ಒಂದು ಗಂಟೆ, ಒಂದಾಗಿ" ಒಗ್ಗೂಡಿ ಮತ್ತು ಸ್ವಚ್ಛತೆಯ ಕಡೆಗೆ ಸಂಕಲ್ಪವನ್ನು ಬಲಪಡಿಸಲು ಅತಿದೊಡ್ಡ ನಾಗರಿಕ-ನೇತೃತ್ವದ ಆಂದೋಲನಕ್ಕೆ ಸೇರಲು ಜನರಿಗೆ ಮನವಿ ಮಾಡಿದರು.
ದೇಶಾದ್ಯಂತ ಸ್ವಚ್ಛತಾ ಅಭಿಯಾನ
ಭಾನುವಾರ (ಅಕ್ಟೋಬರ್ 1) ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಅಧಿಕಾರಿಗಳು, ಕಾರ್ಮಿಕರು, ನಾಗರಿಕರು ಈ ಅಭಿಯಾನದಲ್ಲಿ ಪಾಲ್ಗೊಂಡರು. ದೇಶದ ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ರೈಲ್ವೆ ಇಲಾಖೆ, ಮೆಟ್ರೋ, ನಗರ ಸಭೆ, ಪುರಸಭೆ, ಪಾಲಿಕೆ ಜೊತೆಗೆ ಹಲವು ಸಂಘಟನೆಗಳು ಕೂಡ ಈ ಅಭಿಯಾನಕ್ಕೆ ಜೊತೆಯಾದವು, ನಾಗರಿಕರು ಕೂಡ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.












Click it and Unblock the Notifications