Olympics: ಭಾರತದಲ್ಲಿ ‘ಒಲಿಂಪಿಕ್ಸ್’ ಕ್ರೀಡಾಕೂಟ ಆಯೋಜನೆ ಗ್ಯಾರಂಟಿ?
'ಒಲಿಂಪಿಕ್ಸ್' ಅಂದ್ರೆ ಒಂದು ಗತ್ತು, ಕ್ರೀಡಾ ಲೋಕಕ್ಕೆ 'ಒಲಿಂಪಿಕ್ಸ್' ಕೂಟವೇ ತಾಕತ್ತು. ಹೀಗೆ ಪ್ರಪಂಚದ ಪ್ರತಿಯೊಂದು ದೇಶವೂ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಕನಸು ಕಾಣುತ್ತದೆ. ಆದರೆ ಲಕ್ಷಾಂತರ ಕೋಟಿ ರೂಪಾಯಿ ಹಣ ಸುರಿಯಬೇಕಾದ ಕಾರಣಕ್ಕೆ ಬಡ ರಾಷ್ಟ್ರಗಳಿಗೆ ಇದು ಸಾಧ್ಯವೇ ಆಗುವುದಿಲ್ಲ. ಭಾರತ ಈ ಬಗ್ಗೆ ದೃಢ ನಿಲುವು ತಳೆದಿದ್ದು, ಇದೀಗ ಪ್ರಧಾನಿ ಮೋದಿ ಭಾರತದ ನೆಲದಲ್ಲಿ 'ಒಲಿಂಪಿಕ್ಸ್' ನಡೆಸುವ ಮಾತನಾಡಿದ್ದಾರೆ.
ಹೌದು, 2036ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತವು ಹಕ್ಕು ಸಾಧಿಸಲಿದೆ ಮತ್ತು ಆತಿಥ್ಯ ವಹಿಸಿದರೆ ಯಶಸ್ವಿಯಾಗಿ ಭಾರತ ಆಯೋಜಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಿಎಂ ಮೋದಿ ಅವರು, ಮುಂಬೈನಲ್ಲಿ ಇಂದು ನಡೆದ ಐಒಸಿ ಅಧಿವೇಶನದಲ್ಲಿ ಮಾತನಾಡಿದರು. ಇದೇ ವೇಳೆ 2036ರ ಒಲಿಂಪಿಕ್ಸ್‌ಗಾಗಿ ಭಾರತ ಬಿಡ್ ಮಾಡಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಮೂಲಕ ಶತಕೋಟಿ ಭಾರತೀಯರ ಕನಸು ನನಸಾಗುವ ಸಮಯ ಹತ್ತಿರ ಬಂದಂತಾಗಿದೆ.

ಭಾರತದ ನೆಲದಲ್ಲಿ ಕ್ರಿಕೆಟ್‌ಗೆ ಮಾನ್ಯತೆ!
ಅಂದಹಾಗೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 141 ನೇ ಐಒಸಿ ಅಧಿವೇಶನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಐಒಸಿ ಅಧಿವೇಶನ ಐಒಸಿ ಸದಸ್ಯರ ಪ್ರಮುಖ ಸಭೆಯಾಗಿ ಕಾರ್ಯವನ್ನು ನಿರ್ವಹಿಸುತ್ತೆ. ಒಲಿಂಪಿಕ್ ಕ್ರೀಡಾಕೂಟಗಳ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರವನ್ನ ಈ ಸಭೆಯ ವೇಳೆ ತೆಗೆದುಕೊಳ್ಳಲಾಗುತ್ತದೆ. ಭಾರತ 2ನೇ ಬಾರಿಗೆ & 40 ವರ್ಷದ ನಂತರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನ ಆಯೋಜಿಸುತ್ತಿದೆ. ಹಿಂದೆ ಐಒಸಿ 86ನೇ ಅಧಿವೇಶನ 1983ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ಇದೀಗ ಭಾರತದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೇ ಕ್ರಿಕೆಟ್‌ಗೂ ಸ್ಥಾನ ಸಿಗುತ್ತಿರುವುದು ವಿಶೇಷ. ಇದೇ ವೇಳೆ ಪ್ರಧಾನಿ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ.
#WATCH | Mumbai | At the 141st IOC Session, Prime Minister Narendra Modi says, "Everyone is happy to listen that the IOC executive board has requested to include Cricket in the Olympics. We believe that soon we will get some positive news in this direction..." pic.twitter.com/qt7vy8LxoJ
— ANI (@ANI) October 14, 2023
ಪ್ರಧಾನಿ ಮೋದಿ ಹೇಳಿದ್ದು ಏನು?
ಇನ್ನು ಈ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಲಿಂಪಿಕ್ಸ್ ಆತಿಥ್ಯ ವಹಿಸುವುದು ಭಾರತದ ಕನಸು & ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ ಎಂದರು. 2029ರಲ್ಲಿ ಯೂತ್ ಒಲಿಂಪಿಕ್ಸ್ ಆಯೋಜಿಸಲು ಭಾರತ ಉತ್ಸುಕವಾಗಿದೆ ಎಂದು ಈ ವೇಳೆ ಪ್ರಧಾನಿ ಮೋದಿ ತಿಳಿಸಿದರು. ಅಲ್ಲದೆ 40 ವರ್ಷಗಳ ನಂತರ ಭಾರತದಲ್ಲಿ ಐಒಸಿ ಅಧಿವೇಶನವನ್ನ ಆಯೋಜಿಸಿದ್ದು ಅಪಾರ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದಿದ್ದಾರೆ ಭಾರತದ ಪಿಎಂ. ಹಾಗೇ ಕ್ರಿಕೆಟ್ ಇದೀಗ ಒಲಿಂಪಿಕ್ಸ್ ಅಖಾಡಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ಕೂಡ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ಒಟ್ನಲ್ಲಿ ಅಂತೂ ಭಾರತದಲ್ಲಿ 'ಒಲಿಂಪಿಕ್ಸ್' ಕ್ರೀಡಾಕೂಟ ಆಯೋಜನೆ ಮಾಡುವ ಶತಕೋಟಿ ಭಾರತೀಯರ ಕನಸು ನನಸಾಗುವುದು ಬಹುತೇಕ ಪಕ್ಕಾ ಆಗಿದೆ. ಇದೀಗ ಈ ಕನಸಿಗೆ ರೆಕ್ಕೆಗಳು ಬಂದಿದ್ದು, ಬಿಡ್‌ನಲ್ಲಿ ಭಾರತ ಗೆದ್ದು 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ನಿರೀಕ್ಷೆ ಮೊಳಕೆಯೊಡದಿದೆ.
-
ವೈಭವ್ ಸೂರ್ಯವಂಶಿಗೆ ರವೀಂದ್ರ ಜಡೇಜಾ ಬ್ಯಾಟಿಂಗ್ ಕ್ಲಾಸ್; Viral Video ಇಲ್ಲಿದೆ -
PM Kisan 22ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್, ಇಲ್ಲಿದೆ ಸಂಪೂರ್ಣ ಮಾಹಿತಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ










Click it and Unblock the Notifications