Get Updates
Get notified of breaking news, exclusive insights, and must-see stories!

Surat-Chennai Expressway: ಕಲಬುರಗಿಯಿಂದ ಆರಂಭವಾಗಲಿದೆ ಸೂರತ್-ಚೆನೈ ಆರು ಪಥಗಳ ಹೆದ್ದಾರಿ, ಮಾಹಿತಿ ಇಲ್ಲಿದೆ

ಕಲಬುರಗಿ, ಜನವರಿ. 20: ದೇಶದ ದಕ್ಷಿಣ ಭಾರತದಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ್ದಾರೆ.

ರಾಜ್ಯದ ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ನೀರಾವರಿ, ಕುಡಿಯುವ ನೀರು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ 8,700 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದಾರೆ.

ಈ ಯೋಜನೆಗಳಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಿಷ್ಠ ಪಡಿಸುವ ಉದ್ದೇಶದ ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕೆಲಸಕ್ಕೂ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 150C ರ 71 ಕಿಮೀ ವಿಭಾಗ ಅಂದರೆ ಕಲಬುರಗಿಯ ಬಡದಾಳದಿಂದ ಆರಂಭವಾಗುವ ಈ ಹೆದ್ದಾರಿ ಯಾದಗಿಯ ಆಂದೋಲಾವರೆಗೆ ಸಾಗಲಿದೆ.

PM Modi flags off work on six lane Surat - Chennai Expressway, details here

ಈ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಯ ಎರಡು ಗ್ರೀನ್‌ಫೀಲ್ಡ್ ವಿಭಾಗಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ.

ಈ ಎರಡು ಎಕ್ಸ್‌ಪ್ರೆಸ್‌ವೇ ವಿಭಾಗಗಳ ಉದ್ದ ಒಮದೆಡೆ 65.5 ಕಿಮೀ ಮತ್ತು 71 ಕಿಮೀ. ಆಗಿದೆ. ಇವುಗಳನ್ನು ಕ್ರಮವಾಗಿ 2,000 ಕೋಟಿ ಮತ್ತು 2,100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಕಲಬುರಗಿ ಜಿಲ್ಲೆಯ ಬಡಬಾಳ ಗ್ರಾಮ ಮತ್ತು ಮಾರಡಗಿ ಎಸ್ ಆಂದೋಲಾ ಗ್ರಾಮದ ನಡುವಿನ 71 ಕಿ.ಮೀ ವಿಭಾಗವನ್ನು ಪಿಎನ್‌ಸಿ ಇನ್‌ಫ್ರಾಟೆಕ್ ಸಂಸ್ಥೆ ನಿರ್ಮಿಸುತ್ತಿದೆ. ಯಾದಗಿರಿ ಜಿಲ್ಲೆಯ ಮಾರಡಗಿ ಎಸ್ ಆಂದೋಲಾ ಮತ್ತು ಬಸವಂತಪುರ ನಡುವಿನ 65.5 ಕಿ.ಮೀ. ಉದ್ದದ ವಿಭಾಗವನ್ನು ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆ ನಿರ್ವಹಿಸುತ್ತಿದೆ.

PM Modi flags off work on six lane Surat - Chennai Expressway, details here

ಒಟ್ಟಾರೆ, ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇಗಳ ಜೋಡಣೆಯು ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯ ಬಡದಲ್ ಗ್ರಾಮದಿಂದ ರಾಯಚೂರು ಜಿಲ್ಲೆಯ ಸಿಂಗ್ನೋಡಿಯವರೆಗೆ 177 ಕಿ.ಮೀ. ಉದ್ದ ಸಾಗಲಿದೆ.

*ಪಶ್ಚಿಮ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್‌ವೇ*

ಈ ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಆರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಈಗಿರುವ ಸೂರತ್ ಮತ್ತು ಚೆನ್ನೈ ನಡುವಿನ ರಸ್ತೆ ದೂರವನ್ನು 1,600 ಕಿ.ಮೀ.ನಿಂದ 1,270 ಕಿ.ಮೀ.ಗೆ ತಗ್ಗಿಸಲಿದೆ.

ಈ ಯೋಜನೆಯನ್ನು ಪ್ರವೇಶ - ನಿಯಂತ್ರಿತ ಆರ್ಥಿಕ ಕಾರಿಡಾರ್‌ಗಳ ಸಂಯೋಜನೆಯಾಗಿ ಕಲ್ಪಿಸಲಾಗಿದೆ. ಅಂದರೆ ಚೆನ್ನೈನಿಂದ ಸೊಲ್ಲಾಪುರ ಮತ್ತು ಸೊಲ್ಲಾಪುರದಿಂದ ಸೂರತ್. ಈ ಯೋಜನೆಯು ಗ್ರೀನ್‌ಫೀಲ್ಡ್ ಸ್ಟ್ರೆಚ್‌ಗಳ ನಿರ್ಮಾಣ ಮತ್ತು ಬ್ರೌನ್‌ಫೀಲ್ಡ್ ವಿಭಾಗಗಳನ್ನು ನವೀಕರಿಸುವುದನ್ನು ಒಳಗೊಂಡಿದೆ.

ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ ನಾಸಿಕ್, ಅಹಮದ್‌ನಗರ, ಸೋಲಾಪುರ, ಕಲಬುರಗಿ, ಕರ್ನೂಲ್, ಕಡಪ್ಪ ಮತ್ತು ತಿರುಪತಿಯಂತಹ ಪ್ರಮುಖ ನಗರಗಳ ಮೂಲಕ ಹಾದುಹೋಗುತ್ತದೆ.

ಥ ಯೋಜನೆಯ ಸೂರತ್ - ಸೋಲಾಪುರ ಭಾಗ (ನಾಸಿಕ್ - ಅಹಮದ್‌ನಗರ ಮೂಲಕ) 564 ಕಿಮೀ ಉದ್ದವಿದ್ದರೆ, ಸೊಲ್ಲಾಪುರ - ಚೆನ್ನೈ ಭಾಗ (ಕರ್ನೂಲ್ ಮೂಲಕ) 707 ಕಿಮೀ ಉದ್ದವಿದೆ.

ಮಹಾರಾಷ್ಟ್ರವನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಕರ್ನಾಟಕದ ಮೂಲಕ ಸಂಪರ್ಕಿಸುವ ಸೂರತ್ ಮತ್ತು ಅಹಮದ್‌ನಗರ ಮತ್ತು ನಾಸಿಕ್ ಮತ್ತು ಅಕ್ಕಲಕೋಟ್ ಮೂಲಕ ಕರ್ನೂಲ್ ನಡುವಿನ ವಿಸ್ತಾರವನ್ನು ಗ್ರೀನ್‌ಫೀಲ್ಡ್ ಜೋಡಣೆಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಈ ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ 45,000 ರಿಂದ 50,000 ಕೋಟಿ ರೂ.ವರೆಗೆ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 1,350 ಕಿಮೀ ಉದ್ದದ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ನಂತರ, 1,270 ಕಿಮೀ ಉದ್ದದ ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇ ಭಾರತದ ಎರಡನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯದ ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಸಂಪರ್ಕಿಸುವ ಇದು ರಾಜ್ಯದ ಮೊದಲ ಗ್ರೀನ್‌ಫೀಲ್ಡ್ ಕಾರಿಡಾರ್‌ ಯೋಜನೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+