PM Kisan: 24ನೇ ಕಂತಿನ ₹2,000 ಖಾತೆಗೆ ಬರಬೇಕಾದರೆ ರೈತರು ಈ ಕೆಲಸ ಮೊದಲು ಮಾಡಲೇಬೇಕು!

PM Kissan Yojana: ಕೇಂದ್ರ ಸರ್ಕಾರ ದೇಶದ ರೈತರಿಗೆ 'ಪಿಎಂ ಕಿಸಾನ್ ಯೋಜನೆ'ಯಡಿ ನೀಡುವ 24 ನೇ ಕಂತಿನ 2000 ರೂಪಾಯಿ ಮುಂದಿನ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಪ್ರಸ್ತುತ ಕಂತಿನ ಹಣ ಬಿಡುಗಡೆಗೆ ಕೇಂದ್ರವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ರೈತರು ಇಕೆವೈಸಿ (EKYC) ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಡಿಸದ ರೈತರಿಗೆ ಹಣ ಸಿಗುವುದಿಲ್ಲ ಎಂದು ತಿಳಿಸಲಾಗಿದೆ. ಮೊದಲು ರೈತರು ತಪ್ಪದೇ ಈ ಕೆಲಸ ಮಾಡಬೇಕಿದೆ.

ನಾಲ್ಕು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ 2000 ರೂ.ನಂತೆ ವಾರ್ಷಿಕವಾಗಿ 6,000 ರೂಪಾಯಿ ಹಣವನ್ನು ರೈತರಿಗೆ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುತ್ತಾ ಬಂದಿದೆ. ಈವರೆಗೆ 23 ಕಂತುಗಳು ಜಮೆ ಆಗಿದ್ದು, 24ನೇ ಕಂತಿನ ಹಣ ಜಮೆ ಆಗುವುದು ಬಾಕಿದ್ದು, ರೈತರ ಅದಕ್ಕಾಗಿ ಕಾಯುತ್ತಿದ್ದಾರೆ.

PM Kisan Yojana

ಈವರೆಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆ ಆಗುತ್ತಿತ್ತು. ಆದರೆ ಈ ಬಾರಿ ನಕಲಿ ಫಲಾನುಭವಿಗಳನ್ನು ತಡೆಯಲು ಮತ್ತು ಇನ್ನಷ್ಟು ಪಾರದರ್ಶಕವಾಗಿ ಹಣ ಒದಗಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ರೈತರ ಫೇಸ್, ಬಯೋಮೆಟ್ರಿಕ್ ಆಧಾರಿತ ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಮುಂದಿನ ಕಂತಿನ ಹಣವನ್ನು ರೈತರ ಆಧಾರ್ ಜೊತೆ ಲಿಂಕ್ ಆದ ಬ್ಯಾಂಕ್ ಖಾತೆ ಜಮೆ ಮಾಡಲಿದೆ. ಹೀಗಾಗಿ ಕೆವೈಸಿ ಅನಿವಾರ್ಯವಾಗಿದೆ.

ಈಗಾಗಲೇ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್‌ನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಜೊತೆಗೆ ಲಿಂಕ್ ಮಾಡಿಸಿದ್ದರೂ ಬಯೋಮೆಟ್ರಿಕ್ ಫೇಸ್ ಆಧಾರಿತ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇಕೆವೈಸಿ ಮಾಡಿಸದೇ ಇದ್ದಲ್ಲಿ ಅಂತಹ ಫಲಾನುಭವಿ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ 24ನೇ ಕಂತಿನ ಹಣ ಸಿಗುವುದಿಲ್ಲ.

ಇಕೆವೈಸಿ ಮಾಡಿಸುವುದು ಹೇಗೆ?

ರೈತರು ಈ ಕೂಡಲೇ ತಮ್ಮ ಹತ್ತಿರದ ಬೆಂಗಳೂರು, ಕರ್ನಾಟಕ ಒನ್ ಸೇರಿದಂತೆ ಸೇವಾ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳಿ. ಅಥವಾ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ಲಾಗಿನ್ ಆಗಿಯು ನೀವು ಇಕೆವೈಸಿ ಮಾಡಿಕೊಳ್ಳಬಹುದು. ಆದರೆ ಈ ವೇಳೆ ನಿಮಗೆ ಬೆರಳಚ್ಚು ನೀಡುವುದು ಕೊಂಚ ಸಮಸ್ಯೆ ಆಗಬಹುದು.

ಕರ್ನಾಟಕದಲ್ಲಿ ಬೆಳಗಾವಿ ಹೆಚ್ಚು ಫಲಾನುಭವಿಗಳು

ಕರ್ನಾಟಕದಲ್ಲಿ ಒಟ್ಟು 41.54 ಲಕ್ಷ ಪಿಎಂ ಕಿಸಾನ್ ಫಲಾನುಭವಿಗಳು ಇದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 5.38 ಲಕ್ಷ ಮಂದಿ ಫಲಾನುಭವಿಗಳು ಇದ್ದಾರೆ. ಸದ್ಯ ರಾಜ್ಯದಲ್ಲಿ ಇಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ. ರೈತರ ತಪ್ಪದೇ ಇಕೆವೈಸಿ ವಿವರ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನೂ ಕೇಂದ್ರ ಸರ್ಕಾರ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+