Get Updates
Get notified of breaking news, exclusive insights, and must-see stories!
Live

Pinarayi Vijayan Swearing-in Ceremony LIVE Updates: ಕೇರಳದಲ್ಲಿ ಸಿಎಂ ಜೊತೆ 20 ಸಚಿವರ ಪದಗ್ರಹಣ

ತಿರುವನಂತಪುರಂ, ಮೇ 20: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಎರಡನೇ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ರಚನೆ ಆಗುತ್ತಿದ್ದು, ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.

ಕೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಪಿಣರಾಯಿ ವಿಜಯನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ 500 ಮಂದಿ ಭಾಗವಹಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಎಂ ಜೊತೆಗೆ 20 ಶಾಸಕರು ರಾಜ್ಯ ಸಂಪುಟ ಸಚಿವರಾಗಿ ಪದಗ್ರಹಣ ಮಾಡಿದರು.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಾರ್ಗಸೂಚಿ ಹಿನ್ನೆಲೆ ನಿಗದಿತ ಪ್ರಮಾಣದ ಸದಸ್ಯರಿಗೆ ಮಾತ್ರ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. 140 ಶಾಸಕರು, 29 ಸಂಸದರು, ನ್ಯಾಯಾಂಗ, ಮಾಧ್ಯಮ ಮತ್ತು ಹಿರಿಯ ಅಧಿಕಾರಿಗಳು ಹಾಗೂ ಗಣ್ಯರಿಗೆ ಮಾತ್ರ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು 48 ಗಂಟೆಗಳ ಹಿಂದೆ ಪಡೆದ ಕೊವಿಡ್-19 ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಮಾಣವಚನ ಕಾರ್ಯಕ್ರಮದ ಕ್ಷಣಕ್ಷಣದ ಮಾಹಿತಿಯನ್ನು ಇಲ್ಲಿ ಓದಿ.

Pinarayi Vijayan Swearing-in Ceremony LIVE Updates and Highlights in Kannada

4:35 PM, 20 May
ಕೇರಳ

ಕೇರಳ ಸಂಪುಟದ 20 ಸಚಿವರು ಪ್ರಮಾಣವಚನ ಸ್ವೀಕರಿಸಿದರು.

4:32 PM, 20 May
ಕೇರಳ

* ಡಾ. ಆರ್ ಬಿಂದು - ಪ್ರೌಢ ಶಿಕ್ಷಣ ಸಚಿವ

4:31 PM, 20 May
ಕೇರಳ

* ಕೆ ಎನ್ ಬಾಲಗೋಪಾಲನ್ - ಹಣಕಾಸು ಸಚಿವ

4:29 PM, 20 May
ಕೇರಳ

ಅಹ್ಮದ್ ದೇವರ್ ಕೊವಿಲ್ - ಬಂದರು ಖಾತೆ

4:29 PM, 20 May

ಎ ಕೆ ಶಶಿಧರನ್ - ಅರಣ್ಯ ಖಾತೆ

4:28 PM, 20 May
ಕೇರಳ

ಕೇರಳ ಸಚಿವರು ಮತ್ತು ಖಾತೆ ಪಟ್ಟಿ:

* ಕೆ ಕೃಷ್ಣನ್ ಕುಟ್ಟಿ - ವಿದ್ಯುತ್ ಖಾತೆ * ಎ ಕೆ ಶಶಿಧರನ್ - ಅರಣ್ಯ ಖಾತೆ * ಅಹ್ಮದ್ ದೇವರ್ ಕೊವಿಲ್ - ಬಂದರು ಖಾತೆ

4:24 PM, 20 May

ರೋಶಿ ಅಗಸ್ಟೀನ್ ಜಲ ಸಂಪನ್ಮೂಲ ಇಲಾಖೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

4:22 PM, 20 May

ಕೇರಳದ ಕಂದಾಯ ಸಚಿವರಾಗಿ ಕೆ ರಾಜನ್ ಪ್ರಮಾಣವಚನ ಸ್ವೀಕರಿಸಿದರು.

4:01 PM, 20 May

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಪ್ರಮಾಣವಚನ ಬೋಧಿಸಿದರು.

3:58 PM, 20 May

ಕೇರಳದ ಮುಖ್ಯಂತ್ರಿ ಆಗಿ ಪಿಣರಾಯಿ ವಿಜಯನ್ ಪ್ರಮಾಣವಚನ ಸ್ವೀಕರಿಸಿದರು.

3:31 PM, 20 May

ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಕೇಂದ್ರ ಕ್ರೀಡಾಂಗಣಕ್ಕೆ ತಲುಪಿದ ಪಿಣರಾಯಿ ವಿಜಯನ್.

2:50 PM, 20 May
ಕೇರಳ

ಕೇರಳದ 21 ಶಾಸಕರು ನೂತನ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

2:49 PM, 20 May
ಕೇರಳ

ರಾಜ್ಯದ ಮುಖ್ಯಮಂತ್ರಿ ಆಗಿ ಪಿಣರಾಯಿ ವಿಜಯನ್ ಕೆಲವೇ ಕ್ಷಣಗಳಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

3:33 PM, 10 May
ಪಶ್ಚಿಮ ಬಂಗಾಳ

ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದ ಮತದಾರರ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ. ಜನಪರ ಕಾರ್ಯಗಳಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ ಎಂದು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

2:22 PM, 10 May
ಪಶ್ಚಿಮ ಬಂಗಾಳ

ಮಮತಾ ಬ್ಯಾನರ್ಜಿ ನೂತನ ಸಚಿವ ಸಂಪುಟದ ಸದಸ್ಯರ ಪೂರ್ಣ ಪಟ್ಟಿ ಇಲ್ಲಿದೆ ನೋಡಿ.

1:30 PM, 10 May
ಅಸ್ಸಾಂ

ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಂತ್ ಶರ್ಮಾ ಜೊತೆಗೆ 13 ನೂತನ ಸಂಪುಟ ಸಚಿವರ ಪದಗ್ರಹಣ.

1:29 PM, 10 May
ಅಸ್ಸಾಂ

ಅಸ್ಸಾಂ ಮುಖ್ಯಮಂತ್ರಿ ಆಗಿ ಹಿಮಂತ್ ಶರ್ಮಾ ಪ್ರಮಾಣವಚನ ಸ್ವೀಕರಿಸಿದರು.

11:01 AM, 10 May

ಪಶ್ಚಿಮ ಬಂಗಾಳದಲ್ಲಿ ನೂತನ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ

9:17 AM, 10 May
ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರದ 43 ಸಚಿವರ ಪ್ರಮಾಣವಚನ

ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರದ 43 ಸಚಿವರ ಪ್ರಮಾಣವಚನ

ಪಶ್ಚಿಮ ಬಂಗಾಳದಲ್ಲಿ ಮೂರನೇ ಅವಧಿಗೆ ಸರ್ಕಾರ ರಚಿಸುತ್ತಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದ 43 ಮಂದಿ ಸಚಿವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

7:44 AM, 10 May

43 ನೂತನ ಸಚಿವರ ಪೈಕಿ 25 ಮಂದಿ ಚಿರಪರಿಚಿತರಿಗೆ ಸಚಿವ ಸ್ಥಾನ ನೀಡಿದ್ದರೆ,18 ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

7:43 AM, 10 May
ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರದ 43 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

1:26 PM, 7 May

ಪುದುಚೇರಿ ಮುಖ್ಯಮಂತ್ರಿಯಾಗಿ ಎನ್. ರಂಗಸ್ವಾಮಿ ಪ್ರಮಾಣ ವಚನ

1:25 PM, 7 May

ಪುದುಚೇರಿ ಮುಖ್ಯಮಂತ್ರಿಯಾಗಿ ಎನ್. ರಂಗಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

1:22 PM, 7 May

ಎಐಎನ್‌ಆರ್‌ಸಿ 16 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. 10 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

1:21 PM, 7 May

ಎರಡೂ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಎನ್. ರಂಗಸ್ವಾಮಿ ತಟ್ಟಂಚವಾಡಿ ಕ್ಷೇತ್ರದಲ್ಲಿ 5,456 ಮತಗಳಿಂದ ಗೆಲುವು ಸಾಧಿಸಿದ್ದಾರೆ.

1:19 PM, 7 May

ಬಿಜೆಪಿ ಉಪಮುಖ್ಯಮಂತ್ರಿ ಹುದ್ದೆ ರಚನೆ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟಿದೆ. ಎಐಎನ್‌ಆರ್‌ಸಿ ಖಾತೆ ಹಂಚಿಕೆಯಲ್ಲಿ ಸ್ವತಂತ್ರ್ಯಬೇಕು ಎಂದು ಹೇಳಿದೆ.

1:17 PM, 7 May

ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಮುಖ್ಯಸ್ಥ ಎನ್. ರಂಗಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

1:16 PM, 7 May

ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 16 ಸ್ಥಾನಗಳಲ್ಲಿ ಜಯಗಳಿಸಿದೆ.

1:13 PM, 7 May

ಪುದುಚೇರಿ ಮುಖ್ಯಮಂತ್ರಿಯಾಗಿ ಎನ್. ರಂಗಸ್ವಾಮಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

10:12 AM, 7 May

ಪ್ರಮಾಣ ವಚನ ಸಮಾರಂಭ ಮುಕ್ತಾಯಗೊಂಡಿದೆ.

READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+