ಮಂಗಳನ ಅಂಗಳದ ಮತ್ತಷ್ಟು ಚಿತ್ರಗಳು

ಬೆಂಗಳೂರು, ಸೆ. 30 : ಮಂಗಳಯಾನ ಕೆಂಪು ಗ್ರಹದ ಮೇಲ್ಮೈನ ಸಂಪೂರ್ಣ ಚಿತ್ರಗಳನ್ನು ರವಾನಿಸಿದೆ. ಧೂಳು ಮಿಶ್ರಿತ ವಾತಾವರಣದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರಿಯಲು ಚಿತ್ರ ನೆರವಾಗಲಿದೆ ಎಂದು ಇಸ್ರೋ ಹೇಳಿದೆ.

ಈ ಬಗ್ಗೆ ಇಸ್ರೋ ತನ್ನ ಫೇಸ್‌ ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದು ಮಂಗಳಯಾನ ಕಳಿಸಿದ ಚಿತ್ರವನ್ನು ಅಪ್‌ಲೋಡ್‌ ಮಾಡಿದೆ. ಮಂಗಳನ ಉತ್ತರ ಗೋಲಾರ್ಧದ ಚಿತ್ರ ಇದಾಗಿದ್ದು ಮಂಗಳನ ಮೇಲ್ಮೈನಿಂದ ಸುಮಾರು 74 ಸಾವಿರ ಕಿಲೊಮೀಟರ್‌ ಅಂತರದಿಂದ ತೆಗೆಯಲಾಗಿದೆ ಎಂದು ತಿಳಿಸಿದೆ.('ಮಾಮ್‌' ಕಳಿಸಿದ ಮಂಗಳನ ಅಂಗಳದ ಚಿತ್ರಗಳು)

mars

ಇದಕ್ಕೂ ಮೊದಲೆ 'ಮಾಮ್' ಕೆಲವು ಚಿತ್ರಗಳನ್ನು ಕಳಿಸಿತ್ತು. ಸ್ವತಃ ಪ್ರಧಾನ ಮಂತ್ರಿಯೇ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದರು. ಪ್ರಥಮ ಯತ್ನದಲ್ಲಿಯೇ ಯಶಸ್ವಿಯಾಗಿ ಮಂಗಳನನ್ನು ತಲುಪಿದ 'ಮಾಮ್' ಅತಿ ಕಡಿಮೆ ವೆಚ್ಚದ ಉಪಗ್ರಹ ಎಂದು ದಾಖಲೆ ಬರೆದಿತ್ತು.

ಮುಂದಿನ ಆರು ತಿಂಗಳು ಕಾಲ 'ಮಾಮ್' ಮಂಗಳನ ಅಂಗಳದಲ್ಲಿ ಸಂಚಾರ ಮಾಡಲಿದ್ದು ಅನೇಕ ಸಂಶೋಧನೆಗಳಿಗೆ ನೆರವಾಗಲಿದೆ. ಮಂಗಳನ ಮೇಲ್ಮೈ, ಮೀಥೇನ್‌ ಮತ್ತು ಖನಿಜಗಳ ಲಭ್ಯತೆ ಬಗ್ಗೆ ಮಾಮ್ ಅಭ್ಯಾಸ ನಡೆಸಲಿದೆ.(ದಿನಪತ್ರಿಕೆಗಳ ಮುಖಪುಟದಲ್ಲಿ 'ಮಂಗಳಯಾನ')

ಕಳೆದ ನವೆಂಬರ್ 5 ರಂದು ಶ್ರೀಹರಿಕೋಟಾದದಿಂದ ಉಡಾವಣೆಗೊಂಡಿದ್ದ ಉಪಗ್ರಹ ಕಳೆದ ವಾರ ಯಶಸ್ವಿಯಾಗಿ ಮಂಗಳನ ಅಂಗಳ ತಲುಪಿತ್ತು.

mars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+