ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್: ಗುಜರಾತ್‌ ಚುನಾವಣಾ ಕರ್ತವ್ಯದಿಂದ ಅಧಿಕಾರಿ ವಜಾ

ಅಹಮದಾಬಾದ್‌ ನವೆಂಬರ್ 18: ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಗುಜರಾತ್‌ನಲ್ಲಿ ಚುನಾವಣಾ ಕರ್ತವ್ಯದಿಂದ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ.

ಗುಜರಾತ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾಗಿರುವ ಅಧಿಕಾರಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ ಕಾರಣಕ್ಕಾಗಿ ಚುನಾವಣಾ ಆಯೋಗ ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅಭಿಷೇಕ್ ಸಿಂಗ್ ಅವರು "ಜನರಲ್ ಅಬ್ಸರ್ವರ್ ಆಗಿ ತಮ್ಮ ಪೋಸ್ಟ್ ಅನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಮ್‌ ಅನ್ನು ಬಳಸಿದ್ದರು ಮತ್ತು ಅವರ ಅಧಿಕೃತ ಸ್ಥಾನವನ್ನು ಪ್ರಚಾರದ ಸ್ಟಂಟ್ ಆಗಿ ಬಳಸಿದ್ದಾರೆ" ಎಂದು ಚುನಾವಣಾ ಆಯೋಗ ತಿಳಿಸಿದೆ. ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ಚುನಾವಣೆಗೆ ಮುಂಚಿತವಾಗಿ ಉತ್ತರ ಪ್ರದೇಶ ಕೇದರ್ ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಅಹಮದಾಬಾದ್‌ನ ಬಾಪುನಗರ ಮತ್ತು ಅಸರ್ವಾ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಲಾಗಿತ್ತು.

Photo Post on Instagram: Official sacked from Gujarat Election Duty

ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಇನ್ಸ್ಟಾಗ್ರಾಮ್ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ ಅವರೊಬ್ಬರೇ ಕಾರಿನ ಮುಂದೆ ನಿಂತಿದ್ದಾರೆ ಮತ್ತು ಮತ್ತೊಂದು ಪೋಸ್ಟ್‌ನಲ್ಲಿ ಅವರು ಇನ್ನೂ ಮೂವರು ಅಧಿಕಾರಿಗಳು ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯೊಂದಿಗೆ ನಿಂತಿದ್ದಾರೆ. ಎಲ್ಲರೂ ಕ್ಯಾಮೆರಾವನ್ನು ನೋಡಿ ನಗುತ್ತಿದ್ದಾರೆ. ತಾವು ಗುಜರಾತ್ ಚುನಾವಣೆಗೆ ವೀಕ್ಷಕರಾಗಿ ಸೇರ್ಪಡೆಗೊಂಡಿರುವುದಾಗಿ ಶೀರ್ಷಿಕೆ ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಸಿಂಗ್ ಅವರು ತಮ್ಮನ್ನು "ಸಾರ್ವಜನಿಕ ಸೇವಕ, ನಟ, ಸಾಮಾಜಿಕ ಉದ್ಯಮಿ ಮತ್ತು ಆಶಾವಾದಿ" ಎಂದು ವಿವರಿಸುತ್ತಾರೆ, ಅದೇ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಚುನಾವಣಾ ಆಯೋಗ ಸಿಂಗ್ ಅವರ ಇನ್‌ಸ್ಟಾ ಫೋಟೋ ಹಂಚಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಅವರನ್ನು ವೀಕ್ಷಕ ಹುದ್ದೆಯಿಂದ ತಕ್ಷಣವೇ ವಜಾಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಯಾವುದೇ ಚುನಾವಣಾ ಸಂಬಂಧಿತ ಕರ್ತವ್ಯದಿಂದ ಹೊರಗಿಡಲಾಗಿದೆ.

ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದ ಕಾರು ಸೇರಿದಂತೆ ಗುಜರಾತ್‌ನಲ್ಲಿ ಅವರಿಗೆ ಒದಗಿಸಲಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಸಹ ಕಸಿದುಕೊಳ್ಳಲಾಗಿದೆ. ಸದ್ಯ ಸಿಂಗ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಕ್ರಿಶನ್ ಬಾಜ್‌ಪೇಯ್ ಅವರನ್ನು ನೇಮಿಸಲಾಗಿದೆ. ಗುಜರಾತ್ ಹೊಸ ಸರ್ಕಾರಕ್ಕಾಗಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+